ಬಿಬಿಸಿ ಸುದ್ದಿಸಂಸ್ಥೆ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ BBC News and US President Donald Trump 
ವಿದೇಶ

5 ಬಿಲಿಯನ್ ಡಾಲರ್ ಪರಿಹಾರಕ್ಕೆ ಟ್ರಂಪ್​ ಬೇಡಿಕೆ: BBCಯನ್ನು ಬಿಡುವುದಿಲ್ಲ ಎಂದು ಗುಡುಗಿದ ಅಮೆರಿಕ ಅಧ್ಯಕ್ಷ

ನ್ಯೂಯಾರ್ಕ್: ಪನೋರಮಾ ಕಾರ್ಯಕ್ರಮದಲ್ಲಿ ಟ್ರಂಪ್ ಭಾಷಣವನ್ನು ತಪ್ಪಾಗಿ ಅಥೈಸಿದ್ದಕ್ಕಾಗಿ ಬಿಬಿಸಿ(BBC) ವಿರುದ್ದ 5 ಬಿಲಿಯನ್ ಡಾಲರ್‌ ಪರಿಹಾರ ಕೋರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್​, ಬಿಬಿಸಿ ಕ್ಷಮೆಯಾಚಿಸಿದೆ. ಆದರೆ, ಪರಿಹಾರವನ್ನು ಪಾವತಿಸುವುದಿಲ್ಲ ಎಂದು ಹೇಳಿದೆ. ಸುದ್ದಿಸಂಸ್ಥೆಯ ಈ ತಪ್ಪು ಅಗಾಧ ಖ್ಯಾತಿ ಮತ್ತು ಆರ್ಥಿಕ ಹಾನಿ ಉಂಟುಮಾಡಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಅಲ್ಲದೆ, ಬಿಬಿಸಿಯ ಕ್ಷಮೆಯಾಚನೆ ಅಸಮರ್ಪಕವಾಗಿದೆ ಎಂದು ವಾದಿಸಿದ್ದಾರೆ.
ಮುಂದುವರೆದು ಮಾತನಾಡಿದ ಟ್ರಂಪ್, ಬಿಬಿಸಿ ಎಲ್ಲಾ ಮಾನನಷ್ಟ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಕಾರ್ಯಕ್ರಮವನ್ನು ಮರುಪ್ರಸಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನಾವು ಮುಂದಿನ ವಾರ $1 ಬಿಲಿಯನ್ ನಿಂದ $5 ಬಿಲಿಯನ್ ವರೆಗೆ ಪರಿಹಾರ ಕೋರಿ ಮೊಕದ್ದಮೆ ಹೂಡುತ್ತೇವೆ. ನಾವು ಈಗೆ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಬಿಬಿಸಿ ಮೋಸ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದರು.

ಟ್ರಂಪ್​ ಕ್ಷಮೆಯಾಚಿಸಿದ ಬಿಬಿಸಿ

ಅಧ್ಯಕ್ಷ ಟ್ರಂಪ್​ಲರು ಬಿಬಿಸಿಗೆ ಶುಕ್ರವಾರದೊಳಗೆ ಸಾಕ್ಷ್ಯಚಿತ್ರವನ್ನು ಹಿಂಪಡೆಯಲು, ಕ್ಷಮೆಯಾಚಿಸಲು ಮತ್ತು ಪರಿಹಾರ ಪಾವತಿಸಲು ಗಡುವು ನೀಡಿದ್ದರು. ಅದರೆ, ಬಿಬಿಸಿಯು ಪ್ರಕಟವಾದ ವರದಿಯಲ್ಲಿ ದೋಷವಿದೆ ಎಂದು ಒಪ್ಪಿಕೊಂಡಿತು. ಅಲ್ಲದೆ, ಗುರುವಾರ ಟ್ರಂಪ್‌ಗೆ ವೈಯಕ್ತಿಕವಾಗಿ ಕ್ಷಮೆಯಾಚಿಸಿತು.
ಈ ಪ್ರಕರಣವು 2021 ರ ಜನವರಿ 6 ರಂದು ಕ್ಯಾಪಿಟಲ್ ದಾಳಿಗೂ ಮೊದಲು ಟ್ರಂಪ್ ಮಾಡಿದ ಭಾಷಣವನ್ನು ಬಿಬಿಸಿ 2024 ರಲ್ಲಿ ಪ್ರಸಾರವಾದ ಪನೋರಮಾ ಕಾರ್ಯಕ್ರಮವಾಗಿ ಪ್ರಸಾರ ಮಾಡಿತು. ಅಲ್ಲದೆ, ಟ್ರಂಪ್ ನೇರವಾಗಿ ಗಲಭೆಗಳಿಗೆ ಕರೆ ನೀಡಿದ್ದಾರೆ ಎಂಬ ತಪ್ಪು ಕಲ್ಪನೆಯನ್ನು ಸೃಷ್ಟಿಸುವ ರೀತಿಯಲ್ಲಿ ವರದಿಯನ್ನು ಮಾಡಲಾಗಿತ್ತು. ವಿವಾದ ಭುಗಿಲೆದ್ದ ನಂತರ ಬಿಬಿಸಿಯ ಮಹಾನಿರ್ದೇಶಕ ಮತ್ತು ಸುದ್ದಿಸಂಸ್ಥೆಯ ಸಿಇಒ ರಾಜೀನಾಮೆ ನೀಡಿದರು,(ಏಜೆನ್ಸೀಸ್).