ಮೊಜ್ತಬಾ ಖಮೇನಿ ಮತ್ತು ಡೊನಾಲ್ಡ್ ಟ್ರಂಪ್ 
ವಿದೇಶ

ಕದನ ವಿರಾಮಕ್ಕೆ ಇರಾನ್​ನ 10 ಷರತ್ತುಗಳನ್ನು ಒಪ್ಪಿದ ಟ್ರಂಪ್​; ಇದು ನಮ್ಮ ಗೆಲುವು ಎಂದ ಇರಾನ್ | Iran

ಟೆಹ್ರಾನ್: ಇರಾನ್(Iran)​ ಜೊತೆಗಿನ ಯುದ್ಧಕ್ಕೆ ಎರಡು ವಾರಗಳ ಕಾಲ ಕದನ ವಿರಾಮ ಘೋಷಣೆ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್​ ವಿಧಿಸಿದ 10 ಅಂಶಗಳ ಷರತ್ತನ್ನು ಕಾರ್ಯಸಾಧ್ಯ ಎಂದು ಒಪ್ಪಿಕೊಂಡಿರುವುದನ್ನು, ಈ ಯುದ್ಧದಲ್ಲಿ ನಾವೇ ಗೆದ್ದಿದ್ದೇವೆ ಎಂದು ಇರಾನ್ ಹೇಳಿಕೊಂಡಿದೆ.
ಮಂಗಳವಾರ ರಾತ್ರಿ ಇಡೀ ಇರಾನ್ ನಾಗರಿಕತೆಯೇ ಸರ್ವನಾಶವಾಗಲಿದೆ ಎಂದು ಅಬ್ಬರಿಸಿದ್ದ ಡೊನಾಲ್ಡ್ ಟ್ರಂಪ್​, ಕೊನೆ ಕ್ಷಣದಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಅಸೀಮ್ ಮುನಿರ್ ಅವರು ಮಧ್ಯಸ್ಥಿಕೆಯಿಂದ ಇರಾನ್ ಮೇಲಿನ ದಾಳಿಯನ್ನು ಎರಡು ವಾರಗಳ ಕಾಲ ಮುಂದೂಡುವಂತಯೆ ಮನವಿ ಮಾಡಿದ್ದು, ಹೋರ್ಮುಜ ಜಲಸಂಧಿಯನ್ನು ಸಂಪೂರ್ಣ ಮತ್ತು ತಕ್ಷಣದ ತೆರೆಯುವಿಕೆಗೆ ಇರಾನ್ ಒಪ್ಪಿಕೊಂಡರೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಳ್ಳುವುದಾಗಿ ಘೋಷಿಸಿದ್ದರು.
ಇದು ದ್ವಿಪಕ್ಷೀಯ ಕದನ ವಿರಾಮ ಆಗಿದ್ದು, ನಾವು ಈಗಾಗಲೇ ನಮ್ಮ ಎಲ್ಲಾ ಮಿಲಿಟರಿ ಉದ್ದೇಶಗಳನ್ನು ಪೂರೈಸಿದ್ದೇವೆ. ಇರಾನ್‌ನೊಂದಿಗೆ ದೀರ್ಘಾವಧಿಯ ಶಾಂತಿ ಮತ್ತು ಮಧ್ಯಪ್ರಾಚ್ಯದಲ್ಲಿನ ಶಾಂತಿಗೆ ಸಂಬಂಧಿಸಿದ ನಿರ್ಣಾಯಕ ಒಪ್ಪಂದಕ್ಕಾಗಿ ಇರಾನ್​ನ 10 ಅಂಶಗಳು ಕಾರ್ಯಸಾಧ್ಯವಾಗುತ್ತವೆ ಎಂದು ಹೇಳಿದ್ದಾರೆ.
ಈ ಹತ್ತು ಅಂಶಗಳು ಕಾರ್ಯಸಾಧ್ಯ ಅಂತ ಟ್ರಂಪ್ ಒಪ್ಪಿಕೊಂಡಿರುವ ಹಿನ್ನೆಲೆ, ಫೆಬ್ರವರಿ 28ರಂದು ಅಮೆರಿಕ-ಇಸ್ರೇಲಿ ದಾಳಿಗಳಿಂದ ಆರಂಭವಾದ ಯುದ್ಧದಲ್ಲಿ ನಾವು ಗೆಲುವು ಸಾಧಿಸಿದ್ದೇವೆ ಎಂದು ಇರಾನ್ ಹೇಳಿಕೊಂಡಿದೆ. ಏ. 10ರಂಂದು ಇಸ್ಲಾಮಾಬಾದ್​ನಲ್ಲಿ ನಡೆಯುವ ಮಾತುಕತೆಯಲ್ಲಿ ತನ್ನ 10 ಅಂಶಗಳನ್ನು ಒಪ್ಪಿಕೊಳ್ಳುವಂತೆ ಇರಾನ್ ಅಮೆರಿಕವನ್ನು ಒತ್ತಾಯಿಸಿದೆ.
  1. ಇರಾಕ್, ಲೆಬನಾನ್ ಮತ್ತು ಯೆಮೆನ್ ಮೇಲಿನ ಯುದ್ಧದ ಸಂಪೂರ್ಣ ನಿಲುಗಡೆ
  2. ಯಾವುದೇ ಸಮಯ ಮಿತಿಯಿಲ್ಲದೆ ಇರಾನ್ ಮೇಲಿನ ಯುದ್ಧದ ಸಂಪೂರ್ಣ ಮತ್ತು ಶಾಶ್ವತ ನಿಲುಗಡೆ
  3. ಈ ಪ್ರದೇಶದಲ್ಲಿನ ಎಲ್ಲಾ ಸಂಘರ್ಷಗಳನ್ನು ಸಂಪೂರ್ಣವಾಗಿ ಕೊನೆಗೊಳಿಸುವುದು
  4. ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲಾಗುತ್ತಿದೆ
  5. ಹಾರ್ಮುಜ್ ಜಲಸಂಧಿಯಲ್ಲಿ ನೌಕಾಯಾನದ ಸ್ವಾತಂತ್ರ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಶಿಷ್ಟಾಚಾರ ಮತ್ತು ಷರತ್ತುಗಳನ್ನು ಸ್ಥಾಪಿಸುವುದು
  6. ಇರಾನ್ ಪುನರ್ನಿರ್ಮಾಣ ವೆಚ್ಚಗಳಿಗೆ ಸಂಪೂರ್ಣ ಪರಿಹಾರ ಪಾವತಿ
  7. ಇರಾನ್ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ಸಂಪೂರ್ಣ ಬದ್ಧತೆ
  8. ಅಮೆರಿಕ ಹೊಂದಿರುವ ಇರಾನಿನ ನಿಧಿಗಳು ಮತ್ತು ಸ್ಥಗಿತಗೊಳಿಸಿದ ಸ್ವತ್ತುಗಳ ಬಿಡುಗಡೆ
  9. ಯಾವುದೇ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಇರಾನ್ ಸಂಪೂರ್ಣವಾಗಿ ಬದ್ಧವಾಗಿದೆ
  10. ಮೇಲಿನ ಷರತ್ತುಗಳ ಅನುಮೋದನೆಯ ನಂತರ ಎಲ್ಲಾ ರಂಗಗಳಲ್ಲಿ ತಕ್ಷಣದ ಕದನ ವಿರಾಮ ಜಾರಿಗೆ ಬರುತ್ತದೆ.