ಮಹಿಳಾ ವಿಭಾಗದ ಕ್ರೀಡೆಗಳಿಂದ ತೃತೀಯ ಲಿಂಗಿಗಳನ್ನು ಹೊರಗಿಡಲು ಮಹತ್ವದ ನಿರ್ಧಾರ 
ವಿದೇಶ

ಮಹಿಳಾ ವಿಭಾಗದಿಂದ ತೃತೀಯ ಲಿಂಗಿಗಳು ಔಟ್​: ನೂತನ ನಿಯಮದ ಬಗ್ಗೆ ಒಲಿಂಪಿಕ್​ ಅಧ್ಯಕ್ಷೆ ಹೇಳಿದ್ದೇನು? Transgender in Olympics

ಪ್ರಮುಖ ಮುಖ್ಯಾಂಶಗಳು

  • 2028 ರಲ್ಲಿ ಅಮೆರಿಕದ ಲಾಸ್​ ಎಂಜಲೀಸ್​ನಲ್ಲಿ ನಡೆಯಲಿರುವ ಒಲಿಂಪಿಕ್ಸ್​ ಕ್ರೀಡಾಕೂಟ
  • ಮಹಿಳಾ ವಿಭಾಗದ ಕ್ರೀಡೆಗಳಿಂದ ತೃತೀಯ ಲಿಂಗಿಗಳನ್ನು ಹೊರಗಿಡಲು ಮಹತ್ವದ ನಿರ್ಧಾರ
  • ವೈಧ್ಯಕೀಯ ಪರೀಕ್ಷೆಯ ನಂತರ ಕ್ರೀಡಾಪಟುಗಳ ಆಯ್ಕೆ
ಅಮೆರಿಕ: 2028 ರಲ್ಲಿ ಅಮೆರಿಕದ ಲಾಸ್​ ಎಂಜಲೀಸ್​ನಲ್ಲಿ ನಡೆಯಲಿರುವ ಒಲಿಂಪಿಕ್ಸ್​ ಪಂದ್ಯಾವಳಿಯಲ್ಲಿ ಬಹುದೊಡ್ಡ ಘೋಷಣೆವೊಂದು ಹೊರಬಿದ್ದಿದ್ದು, ತ್ರತೀಯ ಲಿಂಗಿಗಳ ಕ್ರೀಡಾಕೂಟದಲ್ಲಿ (Transgender in Olympics) ಪಾಲ್ಗೊಳ್ಳುದರ ಬಗ್ಗೆ ಮಹತ್ವದ ನಿರ್ಧಾರವೊಂನ್ನು ಕೈಗೊಳ್ಳಲಾಗಿದೆ.

ಮಹಿಳಾ ಕ್ರೀಡಾಕೂಟದಿಂದ ತೃತೀಯ ಲಿಂಗಿಗಳು ಹೊರಕ್ಕೆ!

ಗುರುವಾರ (ಮಾರ್ಚ್​ 26) ನಡೆದ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಮೀಟಿಂಗ್​ನಲ್ಲಿ, ಮಹಿಳೆಯರ ವಿಭಾಗದ ಯಾವುದೇ ಕ್ರೀಡಾಕೂಟದಲ್ಲಿ ಜೈವಿಕವಾಗಿ ಪುರುಷರಾಗಿರುವ ಕ್ರೀಡಾಪಟುಗಳು ಭಾಗವಹಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ವೈಧ್ಯಕೀಯ ಪರೀಕ್ಷೆ ನಂತರ ಕ್ರೀಡಾಪಟುಗಳ ಆಯ್ಕೆ

ಮಹಿಳಾ ವಿಭಾಗದಲ್ಲಿ ಭಾಗವಹಿಸಲಿರುವ ತೃತೀಯ ಲಿಂಗಿ ಕ್ರೀಡಾಪಟುಗಳನ್ನು ಮೊದಲು ವೈಧ್ಯಕೀಯ ಪರೀಕ್ಷೆಗೆ ಒಳ ಪಡಿಸಲಾಗುತ್ತದೆ. ಅಲ್ಲಿ ಅವರ ದೇಹದಲ್ಲಿ ಎಸ್​ಪಿವಾಯ್​ (SPY) ಜೀನ್​ ನೆಗೆಟಿವ್​ ಎಂದು ಬಂದರೆ ಅವರು ಮಹಿಳಾ ವಿಭಾಗದಲ್ಲಿ ಭಾಗವಹಿಸಬಹುದು. ಆದರೆ ಎಸ್​ಪಿವಾಯ್​ (SPY) ಪಾಸಿಟಿವ್​ ಬಂದರೆ ಅವರಿಗೆ ಮಹಿಳಾ ವಿಭಾಗದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಈ ನಿಯಮ ಮಹಿಳಾ ವಿಭಾಗಕ್ಕೆ ಮಾತ್ರ ಸೀಮಿತ
ಒಲಿಂಪಿಕ್ಸ್​​ ಕಮಿಟಿ ತೆಗೆದುಕೊಂಡಿರುವ ಈ ನಿಯಮವು ಕೇವಲ ಮಹಿಳಾ ವಿಭಾಗದಲ್ಲಿ ಭಾಗವಹಿಸುವ ತೃತೀಯ ಲಿಂಗಿಗಳಿಗೆ ಸೀಮಿತವಾಗಿದೆ. ಈ ಪರೀಕ್ಷೆಯಲ್ಲಿ ಪಾಸಿಟಿವ್​ ಆಗಿ ಬರುವ ಕ್ರೀಡಾಪಟು ಪುರುಷರ ವಿಭಾಗದಲ್ಲಿ ಭಾಗವಹಿಸಬಹುದು. ಅಂತಯೇ ಮಿಶ್ರ ವಿಭಾಗದಲ್ಲಿ ಸಹ ಪಾಲ್ಗೊಳ್ಳಲು ಅವಕಾಶವನ್ನು ನೀಡಲಾಗಿದೆ.

ಒಲಿಂಪಿಕ್ಸ್​​ನಲ್ಲಿ ಸಣ್ಣ ತಪ್ಪು ಸಹ ನಡೆಯಬಾರದು

ಈ ನಿರ್ಧಾರದ ಕರಿತು ಮಾತನಾಡಿದ ಒಲಿಂಪಿಕ್ಸ್​ ಅಧ್ಯಕ್ಷೆ, ಕಿರ್ಸ್ಟಿ ಕೊವೆಂಟ್ರಿ (Kirsty Coventry) ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಅವರವರ ನ್ಯಾಯಯುತ ಹಕ್ಕಾಗಿದೆ. ವಿಜ್ಞಾನದ ಆಧಾರದ ಮೇಲಿಂದ ನಾವಿಂದು ಈ ನಿರ್ಣಯ ತೆಗೆದುಕೊಂಡಿದ್ದೆವೆ. ಯಾವುದೇ ವಿಭಾಗದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಅನ್ಯಾಯವಾಗದಿರಲೆಂದು ಈ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೆವೆ ಎಂದು ಅವರು ತಿಳಿಸಿದ್ದಾರೆ.
ಈ ನಿಯಮವನ್ನು ಜಾರಿಗೆ ತರುವ ಮೊದಲು ನಾವು ಸಾವಿರಾರು ಜನ ಮಾಜಿ ಒಲಿಂಪಿಕ್​ ಕ್ರೀಡಾಪಟುಗಳ ಜೊತೆಗೆ, ಮನೋವಿಜ್ಞಾನ ತಜ್ಞರೊಂದಿಗೆ, ತೃತೀಯ ಲಿಂಗಿ ಅಸೋಸಿಯೇಷನ್​ ಜೊತೆಗೆ ನಿರಂತರ ಮಾತುಕತೆ ನಡೆಸಿ ಈ ಸಿರ್ಧಾರವನ್ನು ತೆಗೆದುಕೊಂಡಿದ್ದೆವೆ.
ಹಾಗಾಗಿ ಈ ನಿಯಮ ಯಾವುದೇ ವ್ಯಕ್ತಿಗಳ ಪಾಲ್ಗೊಳ್ಳುವ ಹಕ್ಕನ್ನು ಚ್ಯುತಿಗೊಳಿಸುವುದಿಲ್ಲ ಮತ್ತು ಈ ನಿಯಮ ಕೇವಲ ಒಲಿಂಪಿಕ್​ಗೆ ಮಾತ್ರ ಸೀಮಿತವಾಗಿದ್ದು, ಈ ನಿಯಮವನ್ನು ಬೇರಾವುದೇ ಕ್ರೀಡಾಕೂಟದಲ್ಲಿ ಬಳಸಿದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, (ಏಜನ್ಸೀಸ್​).