Immigrants: 2024-25ರ ವೇಳೆಗೆ ಒಟ್ಟು ಅಂತರಾಷ್ಟ್ರೀಯ ವಲಸಿಗರ ಸಂಖ್ಯೆ 304 ಮಿಲಿಯನ್ ಆಗಲಿದೆ. ಇದು ಗಣೀಯವಾಗಿ ಏರುತ್ತಿದ್ದು, 1990ರ ನಂತರ ದ್ವಿಗುಣಗೊಂಡಿದೆ. ಅಲ್ಲದೆ, ವಲಸಿಗರ ಹಕ್ಕುಗಳು, ಕೊಡುಗೆಗಳು ಮತ್ತು ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯು 2000 ಡಿಸೆಂಬರ್ 18 ರಂದು ಮೊದಲ ಬಾರಿಗೆ ಅಂತರಾಷ್ಟ್ರೀಯ ವಲಸಿಗರ ದಿನವನ್ನು ಘೋಷಿಸಿತು.
1. ಅಮೇರಿಕ
ವಿಶ್ವದ ಸಂಪೂರ್ಣ ಸಂಖ್ಯೆಯ ದೃಷ್ಟಿಯಿಂದ ಅಮೆರಿಕವು ವಿಶ್ವದಲ್ಲೇ ಅತಿ ಹೆಚ್ಚು ವಲಸೆ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ 52.4 ಮಿಲಿಯನ್ ವಲಸಿಗರಿದ್ದಾರೆ. ವಿಶ್ವದಲ್ಲಿ ವಲಸಿಗರಲ್ಲಿ ಅತಿ ಹೆಚ್ಚು ಮೆಕ್ಸಿಕನ್ ಜನರು ಪಾಲನ್ನು ಹೊಂದಿದ್ದಾರೆ. ನಂತರ ಭಾರತೀಯರು ಮತ್ತು ಉತ್ತರ ಮತ್ತು ಮಧ್ಯ ಅಮೆರಿಕನ್ನರು ಇದ್ದಾರೆ.
2. ಜರ್ಮನಿ
ಯುರೋಪ್ ಅತಿ ಹೆಚ್ಚು ವಲಸೆ ಜನಸಂಖ್ಯೆಯನ್ನು ಹೊಂದಿರುವ ಅತಿದೊಡ್ಡ ಖಂಡವಾಗಿದ್ದು, 94.1 ಮಿಲಿಯನ್ ಜನರನ್ನು ಹೊಂದಿದೆ. ಜರ್ಮನಿಯು ಅತಿ ಹೆಚ್ಚು ವಲಸಿಗರ ಸಂಖ್ಯೆಯನ್ನು ಹೊಂದಿದೆ. ಇಲ್ಲಿ ಸುಮಾರು 16.8 ಮಿಲಿಯನ್ ಜನರಿದ್ದು, ಹೆಚ್ಚಿನ ಪಾಲು ಟರ್ಕಿಶ್ ಜನಸಂಖ್ಯೆ ಇದೆ. ನಂತರ ಯುಕ್ರೇನ್, ಸಿರಿಯ, ರೊಮೇನಿಯನ್, ಪೋಲಿಷ್, ಇಟಾಲಿಯನ್ ಮತ್ತು ಅಫ್ಘಾನಿಸ್ತಾನಿಗಳು ಇದ್ದಾರೆ.
3. ಸೌದಿ ಅರೇಬಿಯಾ
2024-25ರ ಹೊತ್ತಿಗೆ ಸೌದಿ ಅರೇಬಿಯಾ ಸುಮಾರು 13.7 ಮಿಲಿಯನ್ ವಲಸಿಗರ ಜನಸಂಖ್ಯೆಯನ್ನು ಹೊಂದಿದೆ. ಇವರಲ್ಲಿ, ಬಾಂಗ್ಲಾದೇಶಿಯರು 2.12 ಮಿಲಿಯನ್ ಜನರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಂತರ ಹೆಚ್ಚಿನ ಸಂಖ್ಯೆಯ ಭಾರತೀಯರು ಮತ್ತು ಪಾಕಿಸ್ತಾನಿಗಳು ಇದ್ದಾರೆ.
4. ಯುನೈಟೆಡ್ ಕಿಂಗ್‌ಡಮ್
ಯುರೋಪ್‌ನಲ್ಲಿ, ಯುಕೆ 11.8 ಮಿಲಿಯನ್ ಜನರೊಂದಿಗೆ ಎರಡನೇ ಅತಿದೊಡ್ಡ ವಲಸೆ ಜನಸಂಖ್ಯೆಯನ್ನು ಹೊಂದಿದೆ. ಅದರೆ, ಯುಕೆ ಸುಮಾರು 70-80 ಪ್ರತಿಶತದಷ್ಟು ವಲಸೆಯಲ್ಲಿ ಇಳಿಕೆ ಕಂಡಿದೆ.
5. ಫ್ರಾನ್ಸ್
ಫ್ರಾನ್ಸ್ನಲ್ಲಿ 9.2 ಮಿಲಿಯನ್ ವಲಸಿಗ ಜನಸಂಖ್ಯೆಯನ್ನು ಹೊಂದಿದೆ. ಇವರಲ್ಲಿ ಸುಮಾರು ಅರ್ಧದಷ್ಟು ಜನರು ಆಫ್ರಿಕಾದಿಂದ ಬಂದವರಾಗಿದ್ದಾರೆ. ನಿರ್ದಿಷ್ಟವಾಗಿ ಅಲ್ಜೀರಿಯಾ, ಮೊರಾಕೊ ಮತ್ತು ಟುನೀಶಿಯಾದಂತಹ ಉತ್ತರ ಆಫ್ರಿಕಾದ ಹಿಂದಿನ ವಸಾಹತುಗಳಿಂದ ಬಂದವರು.
6. ಸ್ಪೇನ್
ಸ್ಪೇನ್‌ನಲ್ಲಿ 8.9 ಮಿಲಿಯನ್ ವಲಸಿಗರಿದ್ದಾರೆ. ಇವರಲ್ಲಿ ಹೆಚ್ಚಿನವರು ಮೊರಾಕೊದವರಾಗಿದ್ದಾರೆ. ಇವರಲ್ಲಿ ಉಳಿದವರು ಕೊಲಂಬಿಯಾ, ವೆನೆಜುವೆಲಾ ಮತ್ತು ಈಕ್ವೆಡಾರ್‌ನಂತಹ ಲ್ಯಾಟಿನ್ ಅಮೇರಿಕನ್ ದೇಶಗಳಿಂದ ಬಂದವರು.
7. ಕೆನಡಾ
ಕೆನಡಾದಲ್ಲಿ ಸುಮಾರು 8.8 ಮಿಲಿಯನ್ ವಲಸಿಗರಿದ್ದಾರೆ. ಇವರಲ್ಲಿ ಹೆಚ್ಚಿನವರು ಭಾರತೀಯರು ಮತ್ತು ಸ್ವಲ್ಪ ಮಟ್ಟಿಗೆ ಪಾಕಿಸ್ತಾನಿಗಳು ಇದ್ದಾರೆ. ಇತರ ಪ್ರಮುಖ ಜನಸಂಖ್ಯೆಯಲ್ಲಿ ಫಿಲಿಪಿನೋ, ಚೈನೀಸ್, ನೈಜೀರಿಯನ್, ಕ್ಯಾಮರೂನಿಯನ್, ಇರಾನಿಯನ್ ಮತ್ತು ಅಮೆರಿಕನ್ನರು ಸೇರಿದ್ದಾರೆ.
8. ಯುನೈಟೆಡ್ ಅರಬ್ ಎಮಿರೇಟ್ಸ್
ಯುಎಇಯಲ್ಲಿ ಸುಮಾರು 8.2 ಮಿಲಿಯನ್ ವಲಸಿಗರಿದ್ದು, ಇವರಲ್ಲಿ ಹೆಚ್ಚಿನವರು ಭಾರತೀಯರು, ಪಾಕಿಸ್ತಾನಿಗಳು ಮತ್ತು ಬಾಂಗ್ಲಾದೇಶದವರು ಇದ್ದಾರೆ.
9. ಆಸ್ಟ್ರೇಲಿಯಾ
ಆಸ್ಟ್ರೇಲಿಯಾದಲ್ಲಿ ಸುಮಾರು 8.1 ಮಿಲಿಯನ್ ವಲಸಿಗರಿದ್ದಾರೆ. ಇವರಲ್ಲಿ ಹೆಚ್ಚಿನವರು ಯುಕೆ, ನಂತರ ಭಾರತೀಯರು, ಚೈನೀಸ್, ನ್ಯೂಜಿಲೆಂಡ್, ಫಿಲಿಪಿನೋ, ನೇಪಾಳಿ ಮತ್ತು ವಿಯೆಟ್ನಾಮೀಸ್ ವಾಸಿಸುತ್ತರೆ.
10. ರಷ್ಯಾ
2024-25ರ ಹೊತ್ತಿಗೆ, ರಷ್ಯಾ 6.7 ಮಿಲಿಯನ್ ವಲಸಿಗ ಜನಸಂಖ್ಯೆಯನ್ನು ಹೊಂದಿದೆ. ಇವರಲ್ಲಿ ಹೆಚ್ಚಿನವರು ಯುಕ್ರೇನಿಯನ್ನರು, ಮತ್ತು ಕೆಲವು ಭಾಗಗಳು ಉಜ್ಬೇಕಿಸ್ತಾನ್, ತಜಿಕಿಸ್ತಾನ್, ಕಿರ್ಗಿಸ್ತಾನ್ ಮುಂತಾದ ಮಧ್ಯ ಏಷ್ಯಾದ ದೇಶಗಳಿಂದ ಬಂದಿದ್ದಾರೆ. ಇತ್ತೀಚೆಗೆ, ರಷ್ಯಾ 1 ಮಿಲಿಯನ್ ನುರಿತ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿದೆ.
11.ಭಾರತ
ಕಳೆದ ಕೆಲವು ವರ್ಷಗಳಿಂದ ಭಾರತದ ವಲಸಿಗರ ಸಂಖ್ಯೆ ಸ್ಥಿರವಾದ ಕುಸಿತ ಕಂಡಿದೆ. 2024 ರ ಹೊತ್ತಿಗೆ, ಭಾರತೀಯ ಜನಸಂಖ್ಯೆಯ ಸುಮಾರು ಶೇಕಡಾ 0.3 ರಷ್ಟು ಜನರು ಅಂತರಾಷ್ಟ್ರೀಯ ವಲಸಿಗರಾಗಿದ್ದಾರೆ. ಅದರೆ, ಭಾರತೀಯರು ಅತಿದೊಡ್ಡ ಜಾಗತಿಕ ವಲಸಿಗರಾಗಿದ್ದಾರೆ. ಸುಮಾರು 18.5 ಮಿಲಿಯನ್ ಜನರು ವಿದೇಶದಲ್ಲಿ ವಾಸಿಸುತ್ತಿದ್ದಾರೆ,(ಏಜೆನ್ಸೀಸ್).