ಈ ಕುರಿತು ನಾವು ತನಿಖೆ ನಡೆಸುತ್ತಿದೆವೆ: ಯುಎಸ್ ಸಂಸದ ರಾಬ್ ವಿಟ್ಮನ್ ಹೇಳಿಕೆ 
ವಿದೇಶ

US ದಾಳಿಗೆ ಮೂವರು ನಾವಿಕರ ಸಾವು: ಅಮೆರಿಕಾಗೆ ಭಾರತ ನೋಟಿಸ್​; ನಾವು ಈ ಕುರಿತು ತನಿಖೆ ನಡೆಸುತ್ತೆವೆ, ರಾಬ್ ವಿಟ್ಮನ್ ಸ್ಪಷ್ಟನೆ! Indian Sailors Died

ಪ್ರಮುಖ ಮುಖ್ಯಾಂಶಗಳು

  • ಓಮನ್ ಕರಾವಳಿಯಲ್ಲಿ ಭಾರತದ ಹಡಗಿನ ಮೇಲೆ ಅಮೆರಿಕ ಸೇನೆ ದಾಳಿ
  • ದಾಳಿಯಲ್ಲಿ 3 ಭಾರತೀಯ ನಾವಿಕರ ಸಾವು
  • ಅಮೆರಿಕಾಗೆ ನೋಟಿಸ್​ ನೀಡಿದ್ದ ವಿದೇಶಾಂಗ ಇಲಾಖೆ
  • ಈ ಕುರಿತು ನಾವು ತನಿಖೆ ನಡೆಸುತ್ತಿದೆವೆ: ಯುಎಸ್ ಸಂಸದ ರಾಬ್ ವಿಟ್ಮನ್ ಹೇಳಿಕೆ
ಅಮೆರಿಕ: ಮಧ್ಯಪ್ರಾಚ್ಯದಲ್ಲಿ ಇರಾನ್​ ಹಾಗೂ ಅಮೆರಿಕ ನಡುವಿನ ಸಂಘರ್ಷ ದಿನಕಳೆದಂತೆ ಭೀಕರವಾಗುತ್ತಿದೆ. ಇದರ ನಡುವೆ ಓಮನ್​ ಕರಾವಳಿಯಲ್ಲಿ ಸಾಗುತ್ತಿದ್ದ ಭಾರತದ ಹಡಗಿನ ಮೇಲೆ ಅಮೆರಿಕ ದಾಳಿ ಮಾಡಿದ ಪರಿಣಾಮ 3 ಜನ ನಾವಿಕರು (Indian Sailors Died) ಸಾವನ್ನಪ್ಪಿದ್ದರು. ಈ ಘಟನೆಗೆ ಭಾರತದ ವಿದೇಶಾಂಗ ಇಲಾಖೆ ಬೇಸರದ ಜೊತೆಗೆ ಕಟು ಶಬ್ದಗಳಿಂದ ಅಮೆರಿಕಾಗೆ ಘಟನೆ ಕುರಿತು ಮಾಹಿತಿ ನೀಡುವಂತೆ ನೋಟಿಸ್​ನ್ನು ಕಳುಹಿಸಿತ್ತು.
ಈಗ ಈ ಘಟನೆಗೆ ಪ್ರತಿಕ್ರಿಯೆ ನೀಡಿರುವ ರಿಪಬ್ಲಿಕ್​ ಪಕ್ಷದ ರಾಬ್ ವಿಟ್ಮನ್, ಓಮನ್​ ಕರಾವಳಿಯಲ್ಲಿ ನಡೆದ ದಾಳಿಯಲ್ಲಿ 3 ಜನ ಭಾರತದ ನಾವಿಕರು ಸಾವನ್ನಪ್ಪಿರುವುದು ನಮಗೆ ಬಹಳ ದುಃಖಕ್ಕೆ ಕಾರಣವಾಗಿದೆ. ಈ ಕುರಿತು ನಾವು ಸೇನೆಯಿಂದ ಮಾಹಿತಿ ಪಡೆಯುತ್ತೆವೆಂದು ಅವರು ತಿಳಿಸಿದ್ದಾರೆ.

ಸೇನೆಯಿಂದ ತನಿಖೆ ನಡೆಯುತ್ತಿದೆ?

ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಮಾಹಿತಿ ಪ್ರಕಾರ, ನಮ್ಮ ಸೇನೆಯ ದಾಳಿಗೆ ತುತ್ತಾಗಿ 3 ಜನ ಭಾರತದ ನಾವಿಕರು ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ. ಸಾವನ್ನಪ್ಪಿದ ನಾವಿಕರ ಮನೆಯವರ ದುಃಖ ಭರಿಸಲು ದೇವರು ಶಕ್ತಿಕೊಡಲಿ ಎಂದು ಕೇಳಿಕೊಳ್ಳುತ್ತೆನೆ. ಅಂತೆಯೇ ಆ ಸಮಯದಲ್ಲಿ ಅಲ್ಲಿ ನಿಖರವಾಗಿ ಏನು ನಡೆದಿತ್ತು ಎಂದು ನಮ್ಮ ಸೇನೆ ತನಿಖೆ ನಡೆಸುತ್ತಿದೆ, ಆದಷ್ಟು ಬೇಗ ವರದಿಯನ್ನು ಬಿಡುಗಡೆ ಮಾಡುತ್ತೆವೆಂದು ತಿಳಿಸಿದ್ದಾರೆ.
ಅಮೆರಿಕ ಮೇಲೆ ಗರಂ ಆದ ಭಾರತ!
ಭಾರತದ ಹಡಗಿನ ಮೇಲೆ ಅಮೆರಿಕದ ದಾಳಿ ಖಂಡಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ, ರಣಧೀರ್​ ಜೈಸ್ವಾಲ್​ ನಾವು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆವೆ. ಪಶ್ಚಿಮ ಏಷ್ಯಾನಲ್ಲಿ ಭಾರತದ ನಾವಿಕರನ್ನು ಗುರಿಯಾಗಿಸಿ ದಾಳಿ ನಡೆಸಿರುವುದು ನಮ್ಮ ಗಮನಕ್ಕೆ ಬಂದಿದೆ. ನಿನ್ನೆ ಅಮೆರಿಕ ನಮ್ಮ ಕಾರ್ಗೊ ನೌಕೆ ಮೇಲೆ ನಡೆಸಿರುವ ದಾಳಿಯನ್ನು ನಾವು ವಿರೋಧಿಸುತ್ತೆವೆಂದು ಅವರು ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಈಡೀ ಜಗತ್ತೆ ತಲ್ಲಣಗೊಂಡಿದೆ. ಸಮಸ್ಯೆ ಏನೇ ಇದ್ದರು ಅದನ್ನು ಶಾಂತಿ, ಮಾತುಕತೆ ಮೂಲಕ ಪರಿಹಾರ ಹುಡುಕಬೇಕೆಂದು ಭಾರತ ಹೇಳುತ್ತದೆ. ಹಾಗೆಯೇ ನಮ್ಮ ಹಡಗಿನ ಮೇಲೆ ನಡೆದ ದಾಳಿ ಬಗ್ಗೆ ಅಮೆರಿಕಕ್ಕೆ ನಾವು ಸಮನ್ಸ್​​ ನೀಡಿದ್ದು, ಉತ್ತರದ ನೀರಿಕ್ಷೆಯಲ್ಲಿದ್ದೆವೆ ಎಂದು ಹೇಳಿದ್ದಾರೆ, (ಏಜನ್ಸೀಸ್​).