ಇರಾನ್ ಮೇಲೆ ಬಾಂಬ್ ಹಾಕಿ ಜಿಹಾದಿಗಳನ್ನು ಮುಗಿಸಲು ಇದುವೇ ಸೂಕ್ತ ಸಮಯ: ಲಾರಾ ಲೂಮರ್ 
ವಿದೇಶ

ಇದೇ ಸರಿಯಾದ ಸಮಯ, ಇರಾನ್ ಮೇಲೆ ಬಾಂಬ್ ಹಾಕಿ ಜಿಹಾದಿಗಳನ್ನು ಮುಗಿಸಿ: ಅಯತೊಲ್ಲಾ ಖಮೇನಿ ಅಂತ್ಯಕ್ರಿಯೆ; ಟ್ರಂಪ್ ಆಪ್ತೆ ಲಾರಾ ಲೂಮರ್ ವಿವಾದಾತ್ಮಕ ಹೇಳಿಕೆ! Laura Loomer on Khamenei Funeral

ಪ್ರಮುಖ ಮುಖ್ಯಾಂಶಗಳು

  • ಇರಾನ್ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅಂತ್ಯಕ್ರಿಯೆ ವೇಳೆ ವೈಮಾನಿಕ ದಾಳಿ ನಡೆಸಿ
  • ಇರಾನ್ ಮೇಲೆ ಬಾಂಬ್ ಹಾಕಿ ಜಿಹಾದಿಗಳನ್ನು ಮುಗಿಸಲು ಇದುವೇ ಸೂಕ್ತ ಸಮಯ: ಲಾರಾ ಲೂಮರ್
  • ಡೊನಾಲ್ಡ್ ಟ್ರಂಪ್ ಆಪ್ತೆ ಲಾರಾ ಲೂಮರ್ ಹೇಳಿಕೆಗೆ ತೀವ್ರ ವಿರೋಧ
ಅಮೆರಿಕ: ಜುಲೈ 4 ರಿಂದ 9 ರ ವರೆಗೆ ಇರಾನ್​ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ ಅಂತ್ಯಸಂಸ್ಕಾರ ನಡೆಯಲಿದ್ದು, ಈ ಸಂದರ್ಭದಲ್ಲಿ ಇಸ್ರೇಲ್​ ಇರಾನ್​ ಮೇಲೆ ವೈಮಾನಿಕ ದಾಳಿ ನಡೆಸಿ ಜಿಹಾದಿಗಳನ್ನು ಕೊಲ್ಲಲಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಆಪ್ತೆ ಲಾರಾ ಲೂಮರ್ (Laura Loomer on Khamenei Funeral) ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಜುಲೈ 6,7 ಹಾಗೂ 9 ರಂದು ಅತಿ ಹೆಚ್ಚಿನ ಜನ ಈ ಕಾರ್ಯಕ್ರಮಕ್ಕೆ ಭಾಗಿಯಾಗಲಿದ್ದಾರೆ. ಈ ಸಮಯವನ್ನು ಇಸ್ರೇಲ್​ನ ಮಿಲಿಟರಿ ಪಡೆ ಇಸ್ರೇಲ್​ ಡಿಫೆನ್ಸ್​ ಫೋರ್ಸ್​ (IDF) ಸಮರ್ಥವಾಗಿ ಬಳಸಿಕೊಳ್ಳಬೇಕೆಂದು ಲಾರಾ ಲೂಮರ್ ಹೇಳಿದ್ದಾರೆ.

ಇದೇ ಉತ್ತಮ ಅವಕಾಶ!

ಅಮೆರಿಕದ ಬಲಪಂಥಿಯ ನಾಯಕಿ ಎಂದೇ ಗುರುತಿಸಿಕೊಂಡಿರುವ ಲಾರಾ ಲೂಮರ್​, ಅಯತೊಲ್ಲಾ ಖಮೇನಿಯ ಅಂತ್ಯಸಂಸ್ಕಾರದ ಫೋಸ್ಟ್​ವೊಂದಕ್ಕೆ, ಅಯತೊಲ್ಲಾ ಖಮೇನಿಗೆ ಅಂತ್ಯಸಂಸ್ಕಾರವೇ? ಇದು ನಮಗೆ ಉತ್ತಮ ಅವಕಾಶ ಎಂದು ಬರೆದು ಬಾಂಬಿನ ಎಮೋಜಿಯನ್ನು ತಮ್ಮ ಬರಹದಲ್ಲಿ ಹಾಕಿದ್ದಾರೆ.
ಅವರ ಈ ಬರಹ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಇನ್ನೊಂದು ಟ್ವಿಟ್​ನಲ್ಲಿ, ಜಿಹಾದಿಗಳ ಸಂಹಾರಕ್ಕಾಗಿ ಅಮೆರಿಕ ಮತ್ತು ಇಸ್ರೇಲ್​ಗೆ ದೊರೆಯುವ ಅವಕಾಶವನ್ನು ನಾನು ಸಮರ್ಥಿಸುತ್ತೆನೆಂದು ಬರೆದುಕೊಂಡಿದ್ದಾರೆ.

ಇರಾನ್​ ವಾರ್ನಿಂಗ್​!

ಕೆಲ ದಿನಗಳ ಹಿಂದೆ ಇರಾನ್,​ ಜುಲೈನಲ್ಲಿ ನಮ್ಮ ಮಾಜಿ ನಾಯಕನ ಅಂತ್ಯಸಂಸ್ಕಾರ ನಡೆಯಲಿದ್ದು, ಈ ಸಮಯದಲ್ಲಿ ನಮ್ಮ ಮೇಲೆ ದಾಳಿ ಮಾಡುವ ಯೋಚನೆಯನ್ನು ಅಮೆರಿಕ ಮತ್ತು ಇಸ್ರೇಲ್​ ತಮ್ಮ ತಲೆಯಿಂದ ತೆಗೆದುಹಾಕಬೇಕೆಂದು ಮಿಲಿಟಿರಿ ಮುಖ್ಯಸ್ಥ ಅಲಿ ಅಬ್ದುಲ್ಲಾಹಿ (Ali Abdollahi) ಎಚ್ಚರಿಕೆ ನೀಡಿದ್ದಾರೆ.

ಲೂಮರ್​ ಹೇಳಿಕೆ ಇದೇ ಮೊದಲಲ್ಲ!

ಲಾರಾ ಲೂಮರ್​ ಮುಸಲ್ಮಾನರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು ಇದೇ ಮೊದಲಲ್ಲ. ಈ ಮೊದಲು ಪ್ರಪಂಚದ ಎಲ್ಲಾ ಮುಸ್ಲಿಮರು ಜಿಹಾದಿಗಳು ಎಂಬ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದರು. ತಮ್ಮ ತೀಕ್ಷ್ಣ ನಿಲುವುಗಳಿಂದಲೇ ಅಮೆರಿಕದಲ್ಲಿ ಗಟ್ಟಿಗಿತ್ತಿ ಎಂದು ಈ ಲಾರಾ ಲೂಮರ್​ಳನ್ನು ಕರೆಯುತ್ತಾರೆ, (ಏಜನ್ಸೀಸ್​).