ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, 2001 ರ ಅಮರಿಕ ಅಧ್ಯಕ್ಷ ಜಾರ್ಜ ಬುಷ್ ಮತ್ತು ಪಾಕಿಸ್ತಾನದ ಪ್ರಧಾನಮಂತ್ರಿ ಪರವೇಜ್ ಮುಷರಪ್
- ಅಮೆರಿಕಾವು ತನ್ನ ಹಿತಾಸಕ್ತಿಗಳಿಗಾಗಿ ಪಾಕಿಸ್ತಾನವನ್ನು ಟಾಯ್ಲೆಟ್ ಪೇಪರ್‌ಗಿಂತ ಕೆಟ್ಟದಾಗಿ ಬಳಕೆ ಮಾಡಿಕೊಂಡಿದೆ
- ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿಕೆ ಫುಲ್ ವೈರಲ್
- ಅಮೆರಿಕಾ - ಅಫಘಾನ್ ಯುದ್ಧದಿಂದ ನಮಗೆ ಲಾಭಕ್ಕಿಂತ ಆದ ನಷ್ಟವೇ ಹೆಚ್ಚು
ಪಾಕಿಸ್ತಾನ: ಅಮೆರಿಕಾವು ತನ್ನ ಹಿತಾಸಕ್ತಿಗಳಿಗಾಗಿ ಪಾಕಿಸ್ತಾನವನ್ನು ಟಾಯ್ಲೆಟ್ ಪೇಪರ್‌ಗಿಂತ ಕೆಟ್ಟದಾಗಿ ಬಳಕೆ ಮಾಡಿಕೊಂಡಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ (Khawaja Asif) ನೀಡಿರುವ ಹೇಳಿಕೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.
ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿದ ಆಸಿಫ್, 1999 ರ ನಂತರ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಅಮೆರಿಕಾದೊಂದಿಗೆ ನಾವು ಮಾಡಿಕೊಂಡ ಒಪ್ಪಂದವು ಪಾಕಿಸ್ತಾನಕ್ಕೆ ಶಾಶ್ವತ ಹಾನಿಯನ್ನುಂಟು ಮಾಡಿದೆ ಎಂದು ಹೇಳಿದರು.
ಜಾಗತಿಕ ರಾಜಕಾರಣದಲ್ಲಿ ನಮಗೆ ಅಮೆರಿಕಾದ ಬೆಂಬಲ ದೊರೆಯುತ್ತದೆ ಎಂಬ ಲೆಕ್ಕಾಚಾರದಲ್ಲಿ ನಾವು, ಅವರು ಹೇಳಿದಂತೆ ಕೇಳಿದವು, ಇದರಿಂದಾಗಿ ಇಂದು ಪಾಕಿಸ್ತಾನ ಈ ದುಸ್ಥಿತಿಯನ್ನು ಅನುಭವಿಸುತ್ತಿದೆ. ಇದಕ್ಕೆ ನಮ್ಮ ಮತ್ತು ಅಮೆರಿಕಾ ನಡುವಿನ ಒಪ್ಪಂದವೇ ನೇರ ಕಾರಣವಾಗಿದೆ ಎಂದು ರಕ್ಷಣಾ ಸಚಿವ ಖವಾಜಾ ಆಸಿಫ್ ಸಂಸತ್ತಿನಲ್ಲಿ ಹೇಳಿದ್ದಾರೆ.
ಜಿಹಾದನ್ನು ತಪ್ಪಾಗಿ ಅರ್ಥೈಸಲಾಯಿತು
80 ರ ದಶಕದಲ್ಲಿ ಅಫ್ಘಾನಿಸ್ತಾನದ ನೆಲದಲ್ಲಿ ನಡೆಯುತ್ತಿದ್ದ ಯುದ್ಧಕ್ಕೆ ಪಾಕಿಸ್ತಾನವದ ಭಾಗವಹಿಸುವಿಕೆಯು ಧಾರ್ಮಿಕ ಕರ್ತವ್ಯದ ಭಾಗವಾಗಿಸಲಾಯಿತು. ಜಿಹಾದ್ನ ಬ್ಯಾನರ್ ಅಡಿಯಲ್ಲಿ ಪಾಕಿಸ್ತಾನಿಗಳನ್ನು ಯುದ್ಧಕ್ಕೆ ಸಜ್ಜುಗೊಳಿಸಲಾಯಿತು, ಅಂದು ನಾವು ಮಾಡಿದ ತಪ್ಪಿನಿಂದಾಗಿ ಈಗಲೂ ನಾವು ಮೇಲೆಳಲು ಸಾಧ್ಯವಾಗುತ್ತಿಲ್ಲ ಎಂದು ಆಸಿಫ್ ಹೇಳಿದರು.
ಈ ಯುದ್ಧವನ್ನು ಕಾನೂನಾತ್ಮಕ ಗೊಳಿಸಲು ಪಾಕಿಸ್ತಾನದ ಶಿಕ್ಷಣ ವ್ಯವಸ್ಥೆಯನ್ನು ಸಹ ಮರುರೂಪಿಸಿ, ಚಿಕ್ಕ-ಚಿಕ್ಕ ಮಕ್ಕಳಲ್ಲಿ ಧಾರ್ಮಿಕ ದ್ವೇಷ (ಜಿಹಾದ್) ವನ್ನು ತುಂಬಿದರಿಂದ ನಮ್ಮ ದೇಶ ಏಳಿಗೆಯನ್ನು ಕಾಣಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.
1980 ರ ದಶಕದಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಸೋವಿಯತ್ ವಿರೋಧಿ ಯುದ್ಧಕ್ಕೂ ಇಸ್ಲಾಂಗೂ ಯಾವುದೇ ಸಂಬಂಧವೇ ಇರಲಿಲ್ಲ. ಇದು ಕೇವಲ ಅಮೆರಿಕಾದ ಪ್ರತಿಷ್ಟೆಗೆ ನಡೆದ ಯದ್ಧವಾಗಿತ್ತು. ಈ ಯುದ್ಧದಲ್ಲಿ ಜಿಹಾದ್ ಘೋಷಣೆ ಮಾಡುವ ಅಗತ್ಯವೇ ಇರಲಿಲ್ಲ ಎಂದರು. ಯಾವುದೇ ಲಾಭವಿಲ್ಲದಿದ್ದರೂ ಈ ಯುದ್ಧದಲ್ಲಿ ಭಾಗವಹಿಸಿದರಿಂದ ಪಾಕಿಸ್ತಾನವು ದೀರ್ಘಕಾಲೀನ ಅಸ್ಥಿರತೆ ಮತ್ತು ಸಾಮಾಜಿಕ ಹಾನಿಯನ್ನು ಎದುರಿಸಬೇಕಾಗಿದೆ, ಇದನ್ನೂ ಇನ್ನು ಮುಂದಾದರೂ ನಿಲ್ಲಿಸಬೇಕೆಂದು ಅವರು ಹೇಳಿದರು.
ನಮ್ಮನ್ನು ಬಳಸಿ ಬಿಸಾಡಿದರು
ಸೆಪ್ಟೆಂಬರ್ 11, 2001 ರ ದಾಳಿಯ ನಂತರ, ಅಮೆರಿಕಾ ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಯನ್ನು ನಿಲ್ಲಿಸಲು ಮುಂದಾಯಿತು ಮತ್ತು ಇದಕ್ಕೆ ಪಾಕಿಸ್ತಾನವನ್ನು ಬಳಸಿಕೊಂಡಿತು. ಈ ಒಪ್ಪಂದವನ್ನು ಒಪ್ಪಿಕೊಂಡ ಅಗೀನ ಮಿಲಿಟರಿ ಆಡಳಿತಗಾರರಾದ ಜಿಯಾ-ಉಲ್-ಹಕ್ ಮತ್ತು ಪರ್ವೇಜ್ ಮುಷರಫ್ ಪಾಕಿಸ್ತಾನವನ್ನು, ತನ್ನದಲ್ಲದ ಯುದ್ಧಗಳಲ್ಲಿ ಸಿಲುಕುವಂತೆ ಮಾಡಿದರು ಎಂದು ಆರೋಪಿಸಿದರು.
ನಂತರದ ದಿನಗಳಲ್ಲಿ ಅಫ್ಘಾನಿಸ್ತಾನದ ಜತೆ ಹೊಂದಾಣಿಕೆ ಮಾಡಿಕೊಂಡ ಅಮೆರಿಕಾ, ಪಾಕಿಸ್ತಾನವನ್ನು ಟಾಯ್ಲೇಟ್ ಪೇಪರನ್ನು ಬಳಸಿ ಎಸೆದಂದೆ, ನಮ್ಮನ್ನು ದೂರವಿಟ್ಟರು ಎಂದು ರಕ್ಷಣಾ ಸಚಿವ ಹೇಳಿದರು. ಅಮೆರಿಕಾದ ಕಾರ್ಯಸಾಧನೆಯಾದ ನಂತರ ನಾವು ಅನುಭವಿಸಿದ ಕಷ್ಟಕ್ಕೆ ಯಾವುದೇ ಸಹಾಯ ಅವರಿಂದ ಬರಲಿಲ್ಲ. ಇಬ್ಬರ ನಡುವಿನ ಜಗಳದಲ್ಲಿ ಪಾಕಿಸ್ತಾನವನ್ನು ಕೈಗೊಂಬೆಯಂತೆ ಮಾಡಲಾಯಿತು ಎಂದು ಅವರು ಹೇಳಿದರು,(ಏಜನ್ಸೀಸ್).