ಈ ಒಪ್ಪಂದದ ಮಾತುಕತೆ ಬಹಳ ಕಷ್ಟಕರ: ಪಾಕ್ ಮಾಜಿ ಕಮಿಷನರ್
- ಮಧ್ಯಪ್ರಾಚ್ಯ ಯುದ್ಧದಲ್ಲಿ ಕದನ ವಿರಾಮ ಘೋಷಣೆ
- ಪಾಕಿಸ್ತಾನದಲ್ಲಿ ನಡೆಯುತ್ತಿರಯುವ ಶಾಂತಿ ಮಾತುಕತೆ
- ಈ ಒಪ್ಪಂದದ ಮಾತುಕತೆ ಬಹಳ ಕಷ್ಟಕರ: ಪಾಕ್ ಮಾಜಿ ಕಮಿಷನರ್
ಪಾಕಿಸ್ತಾನ: ಮಧ್ಯಪ್ರಾಚ್ಯದಲ್ಲಿ ಕಳೆದ 40 ದಿನಗಳಿಂದ ನಡೆಯುತ್ತಿದ್ದ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್ ಎಂಬಂತೆ ಡೊನಾಲ್ಡ್ ಟ್ರಂಪ್ 14 ದಿನಗಳ ಕದನ ವಿರಾಮವನ್ನು ಘೋಷಿಸಿದ್ದಾರೆ. ಅದರಂತೆ ಈ ಶಾಂತಿ ಮಾತುಕತೆ ಈಗ ಪಾಕಿಸ್ತಾನದ (Pakistan on Peace Talks) ಇಸ್ಲಾಮಾಬಾದ್ನಲ್ಲಿ ನಡಡೆಯುತ್ತಿದೆ.
ಈ ಮಾತುಕತೆ ಕಷ್ಟಕರ: ಪಾಕ್ ಹೈ ಕಮಿಷನರ್
ಈ ಶಾಂತಿ ಮಾತುಕತೆ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ಮಾಜಿ ಹೈ ಕಮಿಷ್ನರ್, ಅಬ್ದುಲ್ ಬಷಿತ್ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆ ಬಹಳ ಸುಲಭವಾಗಿ ನೆರವೇರುವ ಕೆಲಸವೇನಲ್ಲ. ಒಂದು ಶಾಂತಿ ಸಭೆ ಸಫಲವಾಗ ಬೇಕಾದರೆ, ಅಲ್ಲಿ ಎರಡೂ ಪಕ್ಷಗಳು ಒಬ್ಬರ ಮಾತನ್ನು ಒಬ್ಬರು ಗೌರವಿಸಬೇಕು ಎಂದಿದ್ದಾರೆ.
ಪಾಕಿಸ್ತಾನ ತನ್ನ ಸಂಪೂರ್ಣ ಪ್ರಯತ್ನ ಮಾಡಲಿದೆ
ಆದರೆ ಈ ಮಾತುಕತೆ ಯಶಸ್ವಿಯಾಗವಲ್ಲಿ ಪಾಕಿಸ್ತಾನಕ್ಕೆ ವಿಶ್ವಾಸವಿದೆ ಹಾಯೆಗೇ ಪಾಕ್ ಈ ಒಪ್ಪಂದ ಸಫಲವಾಗುವಂತೆ ನೋಡಿಕೊಳ್ಳಲು ತನ್ನ ಶೇ. 100 ರಷ್ಟು ಪ್ರಯತ್ನ ಪಡಲಿದೆ. ಏಕೆಂದರೆ ನಮಗೆ ವಿಶ್ವಶಾಂತಿ ಬಹಳ ಮುಖ್ಯ ಎಂದು ಬಷಿತ್ ಹೇಳಿದ್ದಾರೆ.
ಇಸ್ಲಾಮಾಬಾದ್ನಲ್ಲಿ ನಡೆಯುತ್ತಿರುವ ಶಾಂತಿ ಸಭೆ
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಪ್ರಾರಂಭಿಸಿ 40 ದಿನ ಕಳೆದ ನಂತರ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 14 ದಿನಗಳ ಕದನ ವಿರಾಮವನ್ನು ಘೋಷಿಸಿದರು. ಈ ಕದನ ವಿರಾಮವನ್ನು ಇರಾನ್ ಒಪ್ಪಿಕೊಳ್ಳುವ ಮೊದಲು ತಮ್ಮ 10 ಷರತ್ತುಗಳನ್ನು ಮೊದಲು ಒಪ್ಪಿಕೊಳ್ಳಬೇಕು, ನಂತರ ಶಾಂತಿ ಮಾತುಕತೆ ನಡೆಸುವ ಎಂದು ಇರಾನ್ ಹೇಳಿದೆ.
ಅದರೆ ಕದನ ವಿರಾಮದ ಹೊರತಾಗಿ ಕೂಡ ಇಸ್ರೇಲ್ ಇರಾನಿನ ಮಿತ್ರ ದೇಶ ಲೆಬನಾನ್ ಮೇಲೆ ವೈಮಾನಿಕ ದಾಳಿ ನಡೆಸಿ, ಸುಮಾರು 250 ಜನರ ಸಾವಿಗೆ ಕಾರಣವಾಗಿದೆ. ಈಗ ಇರಾನಿನ ಷರತ್ತು ಮತ್ತು ಶಾಶ್ವತ ಶಾಂತಿ ಸ್ಥಾಪನಗೆಗಾಗಿ ಅಮೆರಿಕ ಮತ್ತು ಇರಾನಿನ ಶಾಂತಿ ಸ್ಥಾಪನಾ ನಿಯೋಗ ಪಾಕಿಸ್ತಾನದ ಇಸ್ಲಾಮಾಬಾದ್ನ್ನು ತಲುಪಿದೆ.
ಒಪ್ಪಂದ ಸಾಧ್ಯವಾಗದಿದ್ದರೆ ಇರಾನ್ ಉಡೀಸ್: ಟ್ರಂಪ್!
ಒಂದು ಕಡೆ ಶಾಂತಿ ಮಂತ್ರ ಬೋಧಿಸುತ್ತಿರುವ ಅಮೆರಿಕಾ ಇನ್ನೊಂದು ಕಡೆ ತನ್ನ ನೈಕಾಪಡೆಯನ್ನು ಹೊರ್ಮುಜ್ ಜಲಸಂಧಿಯತ್ತ ರವಾನಿಸುತ್ತಿದೆ ಎಂದು ತಿಳಿದು ಬಂದಿದೆ. ಶಾಂತಿ ಒಪ್ಪಂದದ ಕುರಿತು ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಮಾತುಕತೆ ಮುರಿದು ಬಿದ್ದರೆ ನಮ್ಮ ಸೈನ್ಯ ಸಶಕ್ತವಾಗಿದೆ, ಇರಾನ್ನನ್ನು ಹೇಗೆ ಮಣಿಸಬೇಕೆಂದು ನಮಗೆ ತಿಳಿದಿದೆ ಎಂದು ಬೆದರಿಕೆ ಹಾಕಿದ್ದಾರೆ, (ಏಜನ್ಸೀಸ್).