ಸಾಂದರ್ಭಿಕ ಚಿತ್ರ 
ವಿದೇಶ

ರಸ್ತೆಯೂ ಚಿನ್ನ, ಕಟ್ಟಡವೂ ಚಿನ್ನ! ವಿಶ್ವದ ಮೊದಲ 'ಗೋಲ್ಡ್ ಸ್ಟ್ರೀಟ್' ನಿರ್ಮಾಣಕ್ಕೆ ದುಬೈ ಸಜ್ಜು: ಏನಿದರ ವಿಶೇಷತೆ? Gold Street

ಪ್ರಮುಖ ಮುಖ್ಯಾಂಶಗಳು

  • ದುಬೈನಲ್ಲಿ ವಿಶ್ವದ ಮೊದಲ ಗೋಲ್ಡ್ ಸ್ಟ್ರೀಟ್ ನಿರ್ಮಾಣ
  • ಗೋಲ್ಡ್ ಸ್ಟ್ರೀಟ್ ಮಾರ್ಕೆಟಿಂಗ್ ಗಿಮಿಕ್ ಅಲ್ಲ
  • ವಾಣಿಜ್ಯ ಮತ್ತು ಪ್ರವಾಸೋದ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಬಂಗಾರದ ರಸ್ತೆ ನಿರ್ಮಾಣ
ದುಬೈ: ನಮ್ಮ ದೇಶದಲ್ಲಿ ನಾವು ಓಡಾಡುವ ಡಾಂಬರು ರಸ್ತೆಗಳಲ್ಲಿಯೇ ನೂರಾರು ಹೊಂಡ ಬಿದ್ದಿರುವ ಕುರಿತು ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ ಪ್ರಪಂಚದ ಈ ದೇಶ ಜಗತ್ತಿನ ಮೊದಲ ಚಿನ್ನದ ರಸ್ತೆಯನ್ನು ಸಿರ್ಮಿಸಲು ಯೋಜನೆ ರೂಪಿಸುತ್ತಿದೆ.
ಏನು ಚಿನ್ನದ ರಸ್ತೆಯೇ? ಇದು ಸಾಧ್ಯವೇ? ಎಂದು ನೀವು ಕೇಳಬಹುದು, ಈ ಯೋಜನೆ ಖಂಡಿತವಾಗಿಯೂ ಸಾಧ್ಯ ಎಂದು ಹೇಳುತ್ತಿರುವ ದೇಶವೇ ದುಬೈ.
ದುಬೈ ಗೋಲ್ಡ್ ಡಿಸ್ಟ್ರಿಕ್ಟ್‌ನಲ್ಲಿ, ಚಿನ್ನದಿಂದ ಕೂಡಿದ ರಸ್ತೆ ಸೇರಿದಂತೆ, ವಿಶ್ವದ ಮೊದಲ ಗೋಲ್ಡ್ ಸ್ಟ್ರೀಟ್ (Gold Street) ಎಂದು ಕರೆಯಲ್ಪಡುವ ಕಟ್ಟಡವನ್ನು ನಿರ್ಮಿಸುವ ಯೋಜನೆಯನ್ನು ದುಬೈ ಅನಾವರಣಗೊಳಿಸಿದೆ.
ಹೊಸದಾಗಿ ಪ್ರಾರಂಭಿಸಲಾದ ದುಬೈ ಗೋಲ್ಡ್ ಡಿಸ್ಟ್ರಿಕ್ಟ್‌ನಲ್ಲಿ, ಎಮಿರೇಟ್‌ನ ಐಷಾರಾಮಿ ಚಿಲ್ಲರೆ ವ್ಯಾಪಾರ ಮತ್ತು ಜಾಗತಿಕ ಚಿನ್ನದ ವ್ಯಾಪಾರ ಭೂದೃಶ್ಯವನ್ನು ಮರು ವ್ಯಾಖ್ಯಾನಿಸುವ ಕ್ರಮವನ್ನು ಇದು ಹೊಂದಿದೆ.
ಈ ಯೋಜನೆಯನ್ನು ಇತ್ರಾ ದುಬೈ ಘೋಷಿಸಿದ್ದು, ಗೋಲ್ಡ್ ಸ್ಟ್ರೀ ಟ್​ನ್ನು ಸಂಪೂರ್ಣ ಚಿನ್ನ ಮತ್ತು ಆಭರಣ ಮೌಲ್ಯ ಸರಪಳಿಯನ್ನು ಒಂದುಗೂಡಿಸಲು ವಿನ್ಯಾಸಗೊಳಿಸಲಾದ ಉದ್ದೇಶಿತ ತಾಣದ ಕೇಂದ್ರಬಿಂದುವಾಗಿದೆ ಎಂದು ವಿವರಿಸಿದೆ. ಚಿಲ್ಲರೆ ಮತ್ತು ಬೆಳ್ಳಿಯ ವ್ಯಾಪಾರದಿಂದ ಸಗಟು ಮಾರುಕಟ್ಟೆಗಳು ಮತ್ತು ಹೂಡಿಕೆ ಸೇವೆಗಳವರೆಗೆ, ಜಿಲ್ಲೆಯು ಚಿನ್ನದ ವಾಣಿಜ್ಯದ ಎಲ್ಲಾ ಅಂಶಗಳನ್ನು ಒಂದೇ ಸೂರಿನಡಿ ತರುವ ಗುರಿಯನ್ನು ಹೊಂದಿದೆ.
ಚಿನ್ನದೊಂದಿಗಿನ ದುಬೈ ಆಳವಾದ ಸಂಬಂಧ ಹೊಂದಿದ್ದು, 2024–25ರಲ್ಲಿ, ಯುಎಇ ಸುಮಾರು $53.41 ಶತಕೋಟಿ ಮೌಲ್ಯದ ಚಿನ್ನವನ್ನು ರಫ್ತು ಮಾಡಿದೆ. ಇದು ವಿಶ್ವದ ಎರಡನೇ ಅತಿದೊಡ್ಡ ಭೌತಿಕ ಚಿನ್ನದ ವ್ಯಾಪಾರ ತಾಣವಾಗಿದ್ದು, ಸ್ವಿಟ್ಜರ್ಲೆಂಡ್, ಯುನೈಟೆಡ್ ಕಿಂಗ್‌ಡಮ್, ಭಾರತ, ಹಾಂಗ್ ಕಾಂಗ್ ಮತ್ತು ಟರ್ಕಿಯೆ ಅದರ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಸೇರಿವೆ.

ಗೋಲ್ಡ್ ಸ್ಟ್ರೀಟ್ ಮಾರ್ಕೆಟಿಂಗ್ ಗಿಮಿಕ್ ಅಲ್ಲ

ಗೋಲ್ಡ್ ಸ್ಟ್ರೀಟ್ ಕೇವಲ ಮಾರ್ಕೆಟಿಂಗ್ ಗಿಮಿಕ್ ಅಲ್ಲ, ಬದಲಾಗಿ ವಿಶಾಲವಾದ ಗೋಲ್ಡ್ ಡಿಸ್ಟ್ರಿಕ್ಟ್‌ನ ಸಾಂಕೇತಿಕ ಮತ್ತು ವಾಣಿಜ್ಯ ಆಧಾರವಾಗಿದೆ. ಜಿಲ್ಲೆಯು ಈಗಾಗಲೇ ಚಿನ್ನ, ಆಭರಣಗಳು, ಸುಗಂಧ ದ್ರವ್ಯಗಳು, ಸೌಂದರ್ಯವರ್ಧಕಗಳು ಮತ್ತು ಜೀವನಶೈಲಿ ವಲಯಗಳಲ್ಲಿ 1,000 ಕ್ಕೂ ಹೆಚ್ಚು ಚಿಲ್ಲರೆ ವ್ಯಾಪಾರಿಗಳನ್ನು ಹೊಂದಿದೆ. ಜವಾಹರ ಜ್ಯುವೆಲ್ಲರಿ, ಮಲಬಾರ್ ಗೋಲ್ಡ್ & ಡೈಮಂಡ್ಸ್, ಅಲ್ ರೊಮೈಜಾನ್ ಮತ್ತು ತನಿಷ್ಕ್ ಸೇರಿದಂತೆ ಸ್ಥಾಪಿತ ಬ್ರ್ಯಾಂಡ್‌ಗಳಿವೆ. ಜೋಯಾಲುಕ್ಕಾಸ್ 24,000 ಚದರ ಅಡಿ ವಿಸ್ತೀರ್ಣದ ಅಂಗಡಿಯನ್ನು ತೆಗೆಯುವುದಾಗಿ ಘೋಷಿಸಿದ್ದು, ಇದು ಜೋಯಾಲುಕ್ಕಾಸ್​ನ ಮಧ್ಯಪ್ರಾಚ್ಯದಲ್ಲಿರುವ ಅತಿದೊಡ್ಡ ಅಂಗಡಿಯಾಗಲಿದೆ.
ಆರು ಹೋಟೆಲ್‌ಗಳಲ್ಲಿ 1,000 ಕ್ಕೂ ಹೆಚ್ಚು ಕೊಠಡಿಗಳು, ಸುಧಾರಿತ ಸಾರಿಗೆ ಮತ್ತು ಪ್ರವಾಸೋದ್ಯಮ ಸೇವೆಗಳು ಇಲ್ಲಿರಲಿದ್ದು, ಜಿಲ್ಲೆಯನ್ನು ಖರೀದಿದಾರರ, ವ್ಯಾಪಾರಿಗಳ, ಹೂಡಿಕೆದಾರರ ಮತ್ತು ಪ್ರವಾಸಿಗರ ತಾಣವಾಗಿ ಮಾರ್ಪಡಿಸುವ ಉದ್ದೇಶ ಈ ಯೋಜನೆಯ ಹಿಂದಿದೆ.
ಇತ್ರಾ ದುಬೈನ ಸಿಇಒ ಇಸಾಮ್ ಗಲದಾರಿ ನೀಡಿದ ಮಾಹಿತಿಯಂತೆ, ಜಿಲ್ಲೆಯು ಚಿನ್ನದೊಂದಿಗೆ ಸುದೀರ್ಘವಾದ ಇತಹಾಸವನ್ನು ಹೊಂದಿದೆ. ಇದನ್ನು ನಾವು ಜಾಗತಿಕವಾಗಿ ಬಳಸಿಕೊಂಡು, ಪ್ರಪಂಚದೆಲ್ಲಡೆಯ ವ್ಯಾಪಾರಿಗಳು ಮತ್ತು ಪ್ರವಾಸಿಗರು ನಮ್ಮ ಜಿಲ್ಲೆಗೆ ನಿರಂತರ ಬೇಟಿ ನೀಡುವಂತೆ ಮಾಡುವುದೇ ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ. ದುಬೈ ಚಿಲ್ಲರೆ ವ್ಯಾಪಾರಿಗಳ ಸಿಇಒ ಅಹ್ಮದ್ ಅಲ್ ಖಾಜಾ, ಚಿನ್ನ ಮತ್ತು ದುಬೈ ಇವೆರಡು ಅವಿನಾಭಾವ ಸಂಬಂಧವನ್ನು ಹೊಂದಿದ್ದು, ವಾಣಿಜ್ಯ ಮತ್ತು ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ಸಲುವಾಗಿ ಈ ಗೋಲ್ಡ್ ಸ್ಟ್ರೀಟ್ ಯೋಜನೆಯನ್ನು ರೂಪಿಸಿರುವುದಾಗಿ ಹೇಳಿದರು,(ಏಜನ್ಸೀಸ್).