ಸಿಂಗಾಪುರ ಪ್ರಧಾನಿ ಲಾರೆನ್ಸ್ ವಾಂಗ್, ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಸರ್ಕಾರದ ಮುಖ್ಯಸ್ಥರೆಂದು ಗುರುತಿಸಲ್ಪಟ್ಟಿದ್ದಾರೆ.
ಸಿಂಗಾಪುರ: ಇತ್ತೀಚೆಗೆ ಸಿಂಗಾಪುರ ಸರ್ಕರವು ತನ್ನ ರಾಜಕೀಯ ನಾಯಕರ ಸಂಬಳವನ್ನು ಶೇ. 60 ರಷ್ಟು ಏರಿಕೆ ಮಾಡಿದ್ದು ಅಲ್ಲಿಯ ಪ್ರಧಾನ ಮಂತ್ರಿ ಸಂಬಳ ವಾರ್ಷಿಕ 3.6 ಮಿಲಿಯನ್ ಸಿಂಗಾಪುರ ಡಾಲರ್(ಸುಮಾರು 27 ಕೋಟಿ ರೂಪಾಯಿ) ತಲುಪಿದ್ದು, ಸಿಂಗಾಪುರ ಪ್ರಧಾನಿ ಲಾರೆನ್ಸ್ ವಾಂಗ್ ಪ್ರಪಂಚದಲ್ಲಿ ಅತ್ಯಂತ ಹೆಚ್ಚಿಗೆ ಸಂಬಳ ಪಡೆಯುವ ಪ್ರಧಾನಿ (Highest paid Prime Minister) ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಹಾಗೆಯೇ ಸಿಂಗಾಪುರದ ಸಾಮಾನ್ಯ ಜನರ ಹಾಗೂ ರಾಜಕೀಯ ನಾಯಕರ ವೇತನದಲ್ಲಿ ಭಾರಿ ಅಂತರ ಕಂಡುಬರುತ್ತಿದ್ದು, ಜನ ಸಾರ್ವಜನಿಕರ ಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಲಿ ಎಂಬ ಉದ್ದೇಶದಿಂದ ಈ ನೀತಿಯನ್ನು ಜಾರಿಗೆ ತಂದಿದ್ದೇವೆಂದು ಅಲ್ಲಿನ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ.
ಶೇ. 60 ಪ್ರತಿಶತ ಏರಿಕೆ!
ಕಳೆದ 15 ವರ್ಷಗಳಿಂದ ರಾಜಕೀಯ ನಾಯಕರ ಸಂಬಳದಲ್ಲಿ ಯಾವುದೇ ಏರಿಕೆ ಕಂಡುಬಂದಿರಲಿಲ್ಲ. ಹೀಗಾಗಿ ರಾಜಕೀಯದಲ್ಲಿ ಸಿಂಗಾಪುರದ ಜನ ನಿರಾಸಕ್ತಿ ತೋರಿಸುತ್ತಿದ್ದರು. ಉತ್ತಮ ನಾಯಕತ್ವ, ಉನ್ನತವಾದ ಶ್ರಮ ಹಾಗು ಅದಕ್ಕೆ ತಕ್ಕಂತೆ ಪ್ರತಿಫಲ ದೊರೆತರೆ ಮಾತ್ರ ಕೆಲಸಗಾರರು ಸರಿಯಾಗಿ ಕೆಲಸ ಮಾಡುತ್ತಾರೆ. ಆಗ ಮಾತ್ರ ದೇಶ ಅಭಿವೃದ್ಧಿ ಕಾಣಲಿದೆ ಎಂದು ಪ್ರಧಾನಿ ಲಾರೆನ್ಸ್ ವಾಂಗ್ ಹೇಳಿದ್ದಾರೆ.
ಈ ಕಾರಣಕ್ಕಾಗಿಯೇ ಸಂಬಳಬವನ್ನು ಶೇ. 60 ರಷ್ಟು ಹೆಚ್ಚಿಸಲಾಗಿದೆ. ಇದರ ಪ್ರಕಾರ ದೇಶದ ಪ್ರಧಾನಮಂತ್ರಿ ವೇತನ 2.2 ಮಿಲಿಯನ್ ಸಿಂಗಾಪುರ್ ಡಾಲರ್ (16.5 ಕೋಟಿ ರೂಪಾಯಿ) ಯಿಂದ 3.6 ಮಿಲಿಯನ್ ಸಿಂಗಾಪುರ ಡಾಲರ್ (ಸುಮಾರು 27 ಕೋಟಿ ರೂಪಾಯಿ) ಗೆ ಏರಿಕೆಯಾಗಲಿದೆ. ಹಾಗೆಯೇ ಉಪಪ್ರಧಾನಿ ಸಂಬಳ 1.87 ಮಿಲಿಯನ್ ಸಿಂಗಾಪುರ್ ಡಾಲರ್ (14.02 ಕೋಟಿ ರೂಪಾಯಿ) ನಿಂದ 3.06 ಮಿಲಿಯನ್ ಸಿಂಗಾಪುರ್ ಡಾಲರ್ (22.94 ಕೋಟಿ ರೂಪಾಯಿ) ಗೆ ಹೆಚ್ಚಳವಾಗಲಿದೆ.
ಹಾಗೂ ಕ್ಯಾಬಿನೇಟ್ ಸಚಿವರ ಸಂಬಳ ಕೂಡ 1.80 ಮಿಲಿಯನ್ ಸಿಂಗಾಪುರ್ ಡಾಲರ್ (13.5 ಕೋಟಿ ರೂಪಾಯಿ) ಯಿಂದ 2.88 ಸಿಂಗಾಪುರ್ ಡಾಲರ್ (21.59 ಕೋಟಿ ರೂಪಾಯಿ) ಗೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ವೇತನ ಹೆಚ್ಚಳವು ಅಕ್ಟೋಬರ್ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು ತಿಳಿದು ಬಂದಿದೆ.
ವಿಶ್ವದ ಪ್ರಮುಖ ನಾಯಕರ ವಾರ್ಷಿಕ ವೇತನ
1. ಲಾರೆನ್ಸ್ ವಾಂಗ್ (ಸಿಂಗಾಪುರ ಪ್ರಧಾನಿ) - 27 ಕೋಟಿ ರೂಪಾಯಿ
2. ಜಾನ್ ಲೀ (ಹಾಂಗ್ಕಾಂಗ್ ಚೀಫ್ ಎಕ್ಸಿಕಿಟ್ಯೂವ್) - 6.36 ಕೋಟಿ
3. ಗೈ ಪಾರ್ಮೆಲಿನ್ (ಸ್ವಿಟ್ಜರ್ಲ್ಯಾಂಡ್ ಅಧ್ಯಕ್ಷ) - 5.8 ಕೋಟಿ
4. ಡೊನಾಲ್ಡ್ ಟ್ರಂಪ್ (ಅಮೆರಿಕ ಅಧ್ಯಕ್ಷ) - 3.70 ಕೋಟಿ
5. ಆಂಥೋನಿ ಅಲ್ಬನೀಸ್ (ಆಸ್ಟ್ರೇಲಿಯಾ ಪ್ರಧಾನಿ) - 3.07 ಕೋಟಿ
6. ಫ್ರೆಡ್ರಿಕ್ ಮೆರ್ಜ್ (ಜರ್ಮನ್ ಛಾನ್ಸ್ಲರ್) - 3.5 ಕೋಟಿ
7. ಕ್ರಿಸ್ಟೋಫರ್ ಲಕ್ಸನ್ (ನ್ಯೂಜಿಲೆಂಡ್ ಪ್ರಧಾನಿ) - 3.2 ಕೋಟಿ
8. ಕ್ರಿಶ್ಚಿಯನ್ ಸ್ಟಾಕರ್ (ಆಸ್ಟ್ರೀಯನ್ ಛಾನ್ಸ್ಲರ್) - 3.1 ಕೋಟಿ
9. ಮಾರ್ಕ್ ಕಾರ್ನಿ (ಕೆನಡ ಪ್ರಧಾನಿ) - 2.8 ಕೋಟಿ
10. ಸನೈ ತಕೈಚಿ (ಜಪಾನ್ ಪ್ರಧಾನಿ) - 2.5 ಕೋಟಿ
ಭಾರತದ ಪ್ರಧಾನಿಗಳ ವಾರ್ಷಿಕ ವೇತನ ಸುಮಾರು 20 ರಿಂದ 35 ಲಕ್ಷ ಎಂದು ಅಂದಾಜಿಸಲಾಗಿದೆ, (ಏಜನ್ಸೀಸ್).