ವಿಶ್ವದ ಅತಿಯುದ್ಧ ಪ್ರಯಾಣದ ರೈಲು
- 13 ದೇಶಗಳನ್ನು ಹಾದುಹೋಗುವ ವಿಶೇಷ ಹಾಗೂ ವಿಶ್ವದ ಅತಿಯುದ್ಧ ರೈಲು ಪ್ರಯಾಣವಿದು
- 18,755 ಕಿಮೀ ಪ್ರಯಾಣವನ್ನು ಮುಗಿಸಲು 21 ದಿನಗಳೇ ಬೇಕು
- ಯಾವೆಲ್ಲ ದೇಶಗಳನ್ನು ಹಾದುಹೋಗುತ್ತೆ ಎಂಬುದರ ಡಿಟೇಲ್ಸ್ ಇಲ್ಲಿದೆ
Worlds Longest Train Journey: ಕಾರು, ಬಸ್ಗಳಲ್ಲಿ ಹೆಚ್ಚು ದೂರ ಪ್ರಯಾಣಿಸಿಲು ಕಷ್ಟಸಾಧ್ಯ. ಆದರೆ, ಅದೇ ನಮ್ಮ ಭಾರತೀಯ ರೈಲುಗಳಲ್ಲಿ ಪ್ರಯಾಣ ಮಾಡುವುದು ಎಂದರೆ ಅದೇನೋ ಕೆಲವರಿಗೆ ವಿಪರೀತ ಖುಷಿ. ಕಾರಣ, ರೈಲುಗಳಲ್ಲಿ ಸ್ಲೀಪರ್ ಕೋಚ್, ಎಸಿ ಕೋಚ್ ಮತ್ತು ಜನರಲ್ ವಿಭಾಗಗಳ ಮೇಲಿನ ಸೀಟುಗಳಲ್ಲಿ ಆರಾಮದಾಯಕವಾಗಿ ನಿದ್ರೆ ಮಾಡುತ್ತಲೇ ನಾವು ತಲುಪಬೇಕಾದ ಸ್ಥಳವನ್ನು ನಿಗದಿತ ಸಮಯದಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ತಲುಪಬಹುದು.
ಈಗೆಲ್ಲ ಟೆಕ್ನಾಲಜಿಯು ಶರವೇಗದಲ್ಲಿ ಸಾಗುತ್ತಿರುವ ಹಿನ್ನೆಲೆ ದೇಶದಲ್ಲಿ ಸೆಮಿ ಹೈಸ್ಪೀಡ್ ರೈಲುಗಳನ್ನು ಪರಿಚಯಿಸಲು ರೈಲ್ವೆ ಇಲಾಖೆ ಪಣತೊಟ್ಟಿದೆ. ಈಗಾಗಲೇ ಚಾಲ್ತಿಯಲ್ಲಿರುವ ವಂದೇ ಭಾರತ್ ಸೇರಿದಂತೆ ಬುಲೆಟ್ ಟ್ರೈನ್ಗಳು ಶೀಘ್ರದಲ್ಲೇ ಜನರ ಸಂಚಾರಕ್ಕೆ ಮುಕ್ತವಾಗಲಿವೆ. ಈ ರೈಲುಗಳ ಮೂಲಕ 400ರಿಂದ 500 ಕಿಮೀ ಪ್ರಯಾಣವನ್ನು ಸುಲಭವಾಗಿಸಬಹುದು. ರೈಲು ಪಯಣವನ್ನು ಬಹಳ ಆನಂದಿಸುವ ಮಂದಿಗೆ ಜಗತ್ತಿನಲ್ಲಿ ಇನ್ನೂ ಅನೇಕ ಅದ್ಭುತ ರೈಲು ಪ್ರಯಾಣಗಳಿವೆ ಎಂಬುದು ಗೊತ್ತಿದೆ. ಆದರೆ, ನಾವಿಲ್ಲಿ ಹೇಳಲು ಹೊರಟಿರುವ ರೈಲಿನ ಬಗ್ಗೆ ಖಂಡಿತ ಅಷ್ಟಾಗಿ ತಿಳಿದಿರುವ ಸಾಧ್ಯವಿಲ್ಲ ಬಿಡಿ.
ಕೆಲವೊಂದು ರೈಲಿನ ಪ್ರಯಾಣ ನಮ್ಮ ಜೀವನಪೂರ ಮರೆಯಲಾಗದ ಅನುಭವಗಳನ್ನು ನೀಡುತ್ತವೆ. ಅವುಗಳಲ್ಲಿ ಒಂದು ಈ ಪೋರ್ಚುಗಲ್-ಸಿಂಗಾಪುರ ರೈಲು. ಇದು ವಿಶ್ವದ ಅತಿಯುದ್ಧ ರೈಲು ಪ್ರಯಾಣ ಎಂದು ಗುರುತಿಸಿಕೊಂಡಿದೆ. ವಿಶೇಷತೆ ಎಂದರೆ, ಒಟ್ಟು 13 ದೇಶಗಳನ್ನು ಸುತ್ತುವ ಈ ಟ್ರೈನ್, ಗಮ್ಯ ಸ್ಥಳವನ್ನು ತಲುಪುವುದರ ನಡುವೆ ತನ್ನ ಪ್ರಯಾಣಿಕರಿಗೆ ಪ್ರಪಂಚದ ವಿವಿಧ ಸಂಸ್ಕೃತಿಗಳು, ನೈಸರ್ಗಿಕ ಸೌಂದರ್ಯ ಮತ್ತು ಜೀವನಶೈಲಿಯನ್ನು ಬಹಳ ಹತ್ತಿರದಿಂದ ನೋಡುವ ಅಪರೂಪದ ಅವಕಾಶವನ್ನು ಒದಗಿಸುತ್ತದೆ.
ಪೋರ್ಚುಗಲ್ ಟು ಸಿಂಗಾಪುರ
ಈ ಮಾರ್ಗವು ಪೋರ್ಚುಗಲ್‌ನಲ್ಲಿ ಆರಂಭವಾಗಿ ಸ್ಪೇನ್, ಫ್ರಾನ್ಸ್, ಜರ್ಮನಿ, ಪೋಲೆಂಡ್, ಬೆಲಾರಸ್, ರಷ್ಯಾ, ಮಂಗೋಲಿಯಾ, ಚೀನಾ, ಲಾವೋಸ್, ಥೈಲ್ಯಾಂಡ್, ಮಲೇಷ್ಯಾ ಮೂಲಕ ಹಾದುಹೋಗುತ್ತದೆ ಮತ್ತು ಅಂತಿಮವಾಗಿ ಸಿಂಗಾಪುರವನ್ನು ತಲುಪುತ್ತದೆ. ಇದು ಒಟ್ಟು 18,755 ಕಿಮೀ ಅನ್ನು ಒಳಗೊಂಡಿದೆ. ಈ ದೀರ್ಘ ಪ್ರಯಾಣವನ್ನು ಪೂರ್ಣಗೊಳಿಸಲು ಬರೋಬ್ಬರಿ 21 ದಿನಗಳೇ ಬೇಕಿದೆ.
ಒಂದು ಟಿಕೆಟ್ ಬೆಲೆ...
ಈ ರೈಲಿನ ಟಿಕೆಟ್ ವೆಚ್ಚವು ಕಾಲ ಮತ್ತು ಬುಕಿಂಗ್ ಸಮಯವನ್ನು ಆಧರಿಸಿ ಬದಲಾಗುತ್ತದೆ. ಸಾಮಾನ್ಯವಾಗಿ, ಒಂದು ಟಿಕೆಟ್ಗೆ 1.02 ಲಕ್ಷ ರೂ. ತಗಲುತ್ತದೆ. ಆದಾಗ್ಯೂ, ಪ್ರಯಾಣದ ಸಮಯದಲ್ಲಿ ವಸತಿ, ಆಹಾರ ಮತ್ತು ಇತರ ವೆಚ್ಚಗಳು ಪ್ರತ್ಯೇಕ ಎನ್ನಲಾಗಿದೆ. ಈ ಪ್ರಯಾಣದಲ್ಲಿರುವ ಪ್ರತಿಯೊಂದು ದೇಶವು ತನ್ನ ವಿಶಿಷ್ಟತೆಯಿಂದ ಪ್ರಯಾಣಿಕರ ಮನಸೂರೆಗೊಳಿಸುತ್ತದೆ. ಯುರೋಪ್ನ ಹೈಟೆಕ್ ಸಿಟಿ, ರಷ್ಯಾದ ವಿಶಾಲ ಬಯಲು ಪ್ರದೇಶಗಳು, ಮಂಗೋಲಿಯಾದ ನೈಸರ್ಗಿಕ ಸೌಂದರ್ಯ, ಚೀನಾದಲ್ಲಿನ ಆಧುನಿಕ ರೈಲ್ವೆ ವ್ಯವಸ್ಥೆ ಮತ್ತು ಏಷ್ಯಾದ ದೇಶಗಳ ಸಂಸ್ಕೃತಿಯು ಹೊಸ ಅನುಭವವನ್ನು ನೀಡುತ್ತದೆ,(ಏಜೆನ್ಸೀಸ್).