ಇರಾನ್‌ನ ತೈಲ ಹಾಗೂ ಪರಮಾಣು ಘಟಕಗಳ ಮೇಲೆ ಅಮೆರಿಕ ಭೀಕರ ವೈಮಾನಿಕ ದಾಳಿ 
ವಿದೇಶ

ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧ ಆರಂಭ: ಇರಾನ್​ ಮೇಲೆ ಅಮೆರಿಕ ಭೀಕರ ವಾಯುದಾಳಿ; 14 ನಾಗರಿಕರು ಬಲಿ, 78 ಜನರಿಗೆ ಗಾಯ! America Airstrike Iran

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ ಅಂತ್ಯ!
  • ಇರಾನ್‌ನ ತೈಲ ಹಾಗೂ ಪರಮಾಣು ಘಟಕಗಳ ಮೇಲೆ ಅಮೆರಿಕ ಭೀಕರ ವೈಮಾನಿಕ ದಾಳಿ
  • 14 ನಾಗರಿಕರು ಸಾವನ್ನಪ್ಪಿದ್ದು, 78 ಜನ ಗಾಯಗೊಂಡಿರುವುದಾಗು ಮಾಹಿತಿ
ತೆಹ್ರಾನ್​: ಕಳೆದ ನಾಲ್ಕೈದು ತಿಂಗಳುಗಳಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿದ್ದ ಸಂಘರ್ಷಕ್ಕೆ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿತ್ತು. ಹಾಗೆಯೇ ಶಾಶ್ವತ ಪರಿಹಾರಕ್ಕಾಗಿ ಅಮೆರಿಕ ಮತ್ತು ಇರಾನ್​ ಮಾತುಕತರಯನ್ನು ನಡೆಸುತ್ತಿತ್ತು.
ಆದರೆ ನಿನ್ನೆ (ಬುಧವಾರ, ಜು.8) ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನಾವು ಇರಾನ್ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಹೇಳಿ ತೆಹ್ರಾನ್​ ಮೇಲೆ ದಾಳಿ (America Airstrike Iran) ನಡೆಸಿದ್ದಾರೆ. ಈ ವೈಮಾನಿಕ ದಾಳಿಯಲ್ಲಿ ಸುಮಾರು 14 ಜನ ಸಾವನ್ನಪ್ಪಿದ್ದು, 78 ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆಂದು ಇರಾನಿನ ಮಾಧ್ಯಮಗಳು ವರದಿಮಾಡಿವೆ.

ಅಮೆರಿಕ ಒಪ್ಪಂದ ಮುರಿದಿದೆ!

ಅಮೆರಿಕದ ದಾಳಿಯನ್ನು ವಿರೋಧಿಸಿರುವ ಇರಾನ್​ ಆರೋಗ್ಯ ಸಚಿವಾಲಯದ ವಕ್ತಾರ, ಅಮೆರಿಕ ನಮ್ಮೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಮೀರಿದೆ. ಅಷ್ಟೇ ಅಲ್ಲದೆ ಹೊರ್ಮುಜ್​ ಸುತ್ತಲಿನ ಆಯ್ದ ಐದು ಪ್ರದೇಶಗಳ ಮೇಲೆ ದಾಳಿ ಮಾಡಿದ್ದು, ಇದರಲ್ಲಿ ಸುಮಾರು 14 ಜನ ಸಾವನ್ನಪ್ಪಿದ್ದು 78 ಜನ ಆಸ್ಪತ್ರೆಯಲ್ಲಿ ಸಾವು- ಬದುಕಿನ ಹೋರಾಟ ಮುಂದುವರಿಸಿದ್ದಾರೆಂದು ಹೇಳಿದ್ದಾರೆ.
ಅಮೆರಿಕ ಈ ದಾಳಿಯನ್ನು ನಮ್ಮ ಮಿಲಿಟರಿ ಪಡೆಗಳ ಮೇಲೆ ಅಲ್ಲ, ಬದಲಾಗಿ ತನ್ನ ತೈಲ ಘಟಕ, ಪರಮಾಣು ಘಟಕ ಹಾಗೂ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿದ್ದು, ಇದು ಅಂತಾರಾಷ್ಟ್ರೀಯ ಯುದ್ಧ ನೀತಿಯ ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಟ್ರಂಪ್​ ಹೇಳಿದ್ದೇನು?
ಟರ್ಕಿ ದೇಶದಲ್ಲಿ ನಡೆಯುತ್ತಿದ್ದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಇರಾನ್​ನ ನಾಯಕರು ಮಾನಸಿಕ ಅಸ್ವಸ್ಥರು, ಅವರೊಂದಿಗೆ ಮಾತುಕತೆ ನಡೆಸುವುದು ವ್ಯರ್ಥ, ಹೀಗಾಗಿ ನಾವು ಕದನ ವಿರಾಮವನ್ನು ಕೊನೆಗೊಳಿಸುತ್ತಿದ್ದೆವೆ ಎಂದಿದ್ದಾರೆ.
ಅದರೆ ಇರಾನ್​ ಜೊತೆಗಿನ ರಾಜತಾಂತ್ರಿಕ ಮಾತುಕತೆ ಮುಂದುವರಿಯಲು ಅನುಮತಿ ನೀಡಲಾಗಿದೆ, ನಮ್ಮ ಸಂಧಾನಕಾರರು ಅವರ ಪ್ರಯತ್ನವನ್ನು ನಡೆಸುತ್ತಿದ್ದಾರೆ, ಆದರೆ ಈ ಇರಾನ್​ನ ಆಡಳಿತಗಾರರು ಸರಿಯಿಲ್ಲ ಎಂದು ಟ್ರಂಪ್​ ಕಠಿಣ ಶಬ್ದಗಳನ್ನು ಪ್ರಯೋಗಿಸಿದ್ದಾರೆ.
ಟ್ರಂಪ್​ನ ಈ ಹೇಳಿಕೆಯಿಂದಾಗಿ ಜಾಗತಿಕ ಷೇರು, ತೈಲ ಹಾಗೂ ಚಿನ್ನದ ಮಾರಿಕಟ್ಟೆಯಲ್ಲಿ ಭಾರಿ ಹಿಂಜರೆತ ಕಂಡುಬಂದಿದೆ. ಇದರೊಟ್ಟಿಗೆ ಮತ್ತೆ ಹೊರ್ಮುಜ್​ ಜಲಸಂಧಿ ಮುಚ್ಚಿದರೆ, ಆಮದು-ರಫ್ತು ಯಾವ ರೀತಿ ನಡೆಯಲಿದೆ? ಎಂಬ ಯಕ್ಷ ಪ್ರಶ್ನೆ ಎಲ್ಲರ ನಿದ್ದೆಯನ್ನು ಹಾಳುಮಾಡುತ್ತಿದೆ, (ಏಜನ್ಸೀಸ್​).