ನದಿಗೆ ಜಿಗಿದು ಮೊಸಳೆಗೆ ಹಲ್ಲುಜ್ಜಿದ ಬಾಲಕ! ಇದು ಎಐ ವಿಡಿಯೋ ಅಲ್ಲ, ಅಸಲಿ ಸಂಗತಿ ಇಲ್ಲಿದೆ...Crocodile  
ವಿದೇಶ

ನದಿಗೆ ಜಿಗಿದು ಮೊಸಳೆಗೆ ಹಲ್ಲುಜ್ಜಿದ ಬಾಲಕ! ಇದು ಎಐ ವಿಡಿಯೋ ಅಲ್ಲ, ಅಸಲಿ ಸಂಗತಿ ಇಲ್ಲಿದೆ...Crocodile

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ
  • ಬಾಲಕನೊಬ್ಬ ನಿರ್ಭಯವಾಗಿ ನದಿಗೆ ಜಿಗಿದು, ಬ್ರಷ್​ನಿಂದ ಮೊಸಳೆಯ ಹಲ್ಲುಜ್ಜಿದ್ದಾನೆ
  • ಆಶ್ಚರ್ಯದ ಸಂಗತಿಯೆಂದರೆ, ಆ ಕ್ರೂರ ಪ್ರಾಣಿಯು ಸಹ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನೆ ಮಲಗಿರುತ್ತದೆ
  • ಮಗುವಿನ ಮುಗ್ಧತೆ ಮತ್ತು ಪ್ರಾಣಿಯ ಅಪಾಯಕಾರಿ ಗುಣಗಳ ನಡುವಿನ ಈ ವಿಚಿತ್ರ ಸನ್ನಿವೇಶ ಎಲ್ಲರ ಗಮನ ಸೆಳೆದಿದೆ
Crocodile : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ. ಆ ವಿಡಿಯೋದಲ್ಲಿ ಬಾಲಕನೊಬ್ಬ ನಿರ್ಭಯವಾಗಿ ನದಿಗೆ ಜಿಗಿದು, ಬ್ರಷ್​ನಿಂದ ಮೊಸಳೆಯ ಹಲ್ಲನ್ನು ಉಜ್ಜುವ ಭಯಾನಕ ದೃಶ್ಯವಿದೆ. ಅಷ್ಟಕ್ಕೂ ಈ ವಿಡಿಯೋ ನಿಜಾನಾ? ಅಥವಾ ಇದೊಂದು ಎಐ ವಿಡಿಯೋನಾ? ಈ ಕುರಿತಾದ ಒಂದು ಇಂಟ್ರೆಸ್ಟಿಂಗ್​ ಸುದ್ದಿ ಇಲ್ಲಿದೆ.
ವಿಡಿಯೋದಲ್ಲಿ ಕೊಲಂಬಿಯಾದ ಹಿಮಾರ್ ಎಂಬ ಬಾಲಕ ತನ್ನ ಕೈಯಲ್ಲಿ ಟೂತ್‌ಬ್ರಷ್ ಹಿಡಿದು ನದಿ ದಡದ ನೀರಿನಲ್ಲಿ ಕುಳಿತುಕೊಳ್ಳುತ್ತಾನೆ. ಆರಂಭದಲ್ಲಿ ಬಾಲಕ ನೀರಿನಲ್ಲಿ ಆಟವಾಡುವಂತೆ ಕಾಣುತ್ತದೆ. ಆದರೆ, ಇದ್ದಕ್ಕಿದ್ದಂತೆ ಒಂದು ಮೊಸಳೆ ಬಾಯಿ ಬಿಟ್ಟುಕೊಂಡು ಆ ಬಾಲಕನ ಬಳಿ ಬರುತ್ತದೆ. ತಕ್ಷಣ ಬಾಲಕ ಬ್ರಷ್​ನಿಂದ ಮೊಸಳೆಯ ಹಲ್ಲು ಉಜ್ಜಲು ಆರಂಭಿಸುತ್ತಾನೆ.
ಸಾಮಾನ್ಯವಾಗಿ ಯಾರಾದರೂ ಮೊಸಳೆಯನ್ನು ಕಂಡರೆ ದೂರ ಓಡುತ್ತಾರೆ, ಆದರೆ ಈ ಮಗು ಮಾತ್ರ ಯಾವುದೋ ಸಾಕುಪ್ರಾಣಿಯ ಜೊತೆ ಆಟವಾಡುವಂತೆ ಅತ್ಯಂತ ಸಹಜವಾಗಿ ಅದರ ಹತ್ತಿರ ಹೋಗಿ ಹಲ್ಲು ಉಜ್ಜುವುದನ್ನು ನೋಡಿದರೆ ಎಂಥವರ ಎದೆಯಲ್ಲೂ ನಡುಕ ಉಂಟಾಗುತ್ತದೆ.
ಆಶ್ಚರ್ಯದ ಸಂಗತಿಯೆಂದರೆ, ಆ ಕ್ರೂರ ಪ್ರಾಣಿಯು ಸಹ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನೆ ಮಲಗಿರುತ್ತದೆ. ಮಗುವಿನ ಮುಗ್ಧತೆ ಮತ್ತು ಪ್ರಾಣಿಯ ಅಪಾಯಕಾರಿ ಗುಣಗಳ ನಡುವಿನ ಈ ವಿಚಿತ್ರ ಸನ್ನಿವೇಶವು ವಿಶ್ವಾದ್ಯಂತ ಜನರ ಗಮನ ಸೆಳೆದಿದೆ. ಆದರೂ, ಇಂತಹ ಅಪಾಯಕಾರಿ ಸಾಹಸಗಳನ್ನು ಪ್ರಾಣಿಗಳ ಜೊತೆ ಮಾಡುವುದು ಎಂದಿಗೂ ಸುರಕ್ಷಿತವಲ್ಲ ಎಂಬ ಎಚ್ಚರಿಕೆಯನ್ನೂ ಇದು ನೀಡುತ್ತದೆ.
ಮಕ್ಕಳಲ್ಲಿರುವ ಸಹಜವಾದ ಭಯವಿಲ್ಲದ ಗುಣವು ಈ ವಿಡಿಯೋದಲ್ಲಿ ಕುತೂಹಲ ಮೂಡಿಸಿದರೂ, ಇದು ಅತ್ಯಂತ ಅಪಾಯಕಾರಿ ಸನ್ನಿವೇಶವಾಗಿದೆ. ಒಂದು ಕಾಡು ಪ್ರಾಣಿ ಅಥವಾ ಮೊಸಳೆಯನ್ನು ಸಾಕುಪ್ರಾಣಿಯಂತೆ ಕಾಣುವುದು ಸರಿಯಲ್ಲ. ಇಂತಹ ಪ್ರಾಣಿಗಳ ವರ್ತನೆಯನ್ನು ಊಹಿಸಲು ಸಾಧ್ಯವಿಲ್ಲ. ಆದ್ದರಿಂದಲೇ, ವಿಡಿಯೋ ನೋಡಲು ಆಪ್ತವಾಗಿ ಕಂಡರೂ, ಅಪರಿಚಿತ ಕಾಡು ಪ್ರಾಣಿಗಳಿಂದ ದೂರವಿರುವುದು ಮತ್ತು ಅವುಗಳನ್ನು ಎಂದಿಗೂ ಹತ್ತಿರದಿಂದ ಸಂಪರ್ಕಿಸಬಾರದು ಎಂಬ ಎಚ್ಚರಿಕೆಯನ್ನು ಸಹ ಇಲ್ಲಿ ನೀಡಲಾಗಿದೆ. ಅಂದಹಾಗೆ, ಇದು ಎಐ ವಿಡಿಯೋವಲ್ಲ, ಇದೊಂದು ನಿಜವಾದ ವಿಡಿಯೋ ಆಗಿದೆ.

ನೆಟ್ಟಿಗರು ಹೇಳಿದ್ದೇನು?

ಇನ್ನೂ ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಈ ಹುಡುಗ ಬಾಲ್ಯದಿಂದಲೂ ಮೊಸಳೆಯೊಂದಿಗೆ ಸ್ನೇಹಿತನಾಗಿರಬಹುದು ಎಂದು ಕೆಲವರು ನಂಬುತ್ತಾರೆ. ಆದ್ದರಿಂದ, ಅದು ಅವನಿಗೆ ಯಾವುದೇ ಹಾನಿ ಮಾಡಲಿಲ್ಲ. ಆದಾಗ್ಯೂ, ಇತರರು ಇದು ತುಂಬಾ ಅಪಾಯಕಾರಿ ಎಂದಿದ್ದಾರೆ. ಮೊಸಳೆಯೊಂದಿಗೆ ಈ ರೀತಿ ಆಡುವುದು ಸರಿಯಲ್ಲ ಎಂದು ಎಚ್ಚರಿಸಿದ್ದಾರೆ, (ಏಜೆನ್ಸೀಸ್​).