ಕೃತಕ ಬುದ್ಧಿಮತ್ತೆ (ಎಐ) ಜಗತ್ತಿನಲ್ಲಿ ಮುನ್ನಡೆಯುವ ಸ್ಪರ್ಧೆಯು ಈಗ ಮಾಡೆಲ್ ಡಿಸ್ಟಿಲೇಶನ್ ಎನ್ನುವ ಹೊಸ ತಂತ್ರಜ್ಞಾನದವರೆಗೆ ಬಂದು ನಿಂತಿದೆ. ಅಮೆರಿಕ ಮತ್ತು ಅದರ ಪ್ರಮುಖ ಎಐ ಕಂಪನಿಗಳು ಚೀನಾದ ಟೆಕ್ ಕಂಪನಿಗಳ ಮೇಲೆ ತಮ್ಮ ಬೌದ್ಧಿಕ ಆಸ್ತಿ ಕದಿಯುತ್ತಿರುವ ಆರೋಪವನ್ನು ಹೊರಿಸಿವೆ. ದೊಡ್ಡ ಎಐ ಮಾಡೆಲ್ಗಳನ್ನು ಚಲಾಯಿಸಲು ವಿಶಾಲವಾದ ಡೇಟಾ ಸೆಂಟರ್ಗಳು ಮತ್ತು ದುಬಾರಿ ಎಐ ಚಿಪ್ಗಳು (ಎನ್ವಿಡಿಯಾ ಜಿಪಿಯು) ಬೇಕಾಗುತ್ತವೆ. ಆದರೆ ಡಿಸ್ಟಿಲ್ ಮಾಡಿದ (ಸಣ್ಣ) ಮಾಡೆಲ್ಗಳನ್ನು ಸಾಮಾನ್ಯ ಸಾಧನಗಳು, ವಾಹನಗಳು ಅಥವಾ ಸ್ಥಳೀಯ ಸರ್ವರ್ಗಳಲ್ಲಿ ಸುಲಭವಾಗಿ ಚಲಾಯಿಸಬಹುದು. ಎಐ ಉದ್ಯಮದಲ್ಲಿನ ಸ್ಪರ್ಧೆಯು ಮಾಡೆಲ್ಗಳನ್ನು ರಚಿಸುವುದು ಮಾತ್ರವಲ್ಲ, ಅವುಗಳನ್ನು ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುವುದಾಗಿದೆ. ಆದ್ದರಿಂದ ಡಿಸ್ಟಿಲೇಶನ್ ತಂತ್ರಜ್ಞಾನದಲ್ಲಿ ಮೇಲುಗೈ ಸಾಧಿಸಲು ಪೈಪೋಟಿ ಹೆಚ್ಚಿದೆ. ಏನಿದು ವಿವಾದ, ಸಂಘರ್ಷವೇಕೆ ಎಂಬುದರ ವಿವರ ಇಲ್ಲಿದೆ.
ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಮಾಡೆಲ್ ಡಿಸ್ಟಿಲೇಶನ್ ತಂತ್ರಜ್ಞಾನವು ಪ್ರಸ್ತುತ ಜಾಗತಿಕ ಸಂಘರ್ಷಕ್ಕೆ ಕಾರಣವಾಗಿದೆ. ಮಾಡೆಲ್ ಡಿಸ್ಟಿಲೇಶನ್ ಕೇವಲ ತಾಂತ್ರಿಕ ಬೆಳವಣಿಗೆಯಾಗಿ ಉಳಿ ಯದೆ, ಬೌದ್ಧಿಕ ಆಸ್ತಿ ಮತ್ತು ಜಾಗತಿಕ ಮೇಲುಗೈಗೆ ಸಂಬಂಧಿಸಿದ ವಿವಾದವನ್ನು ಹುಟ್ಟುಹಾಕಿದೆ. ಮಾಡೆಲ್ ಡಿಸ್ಟಿಲೇಶನ್ ಎಐ ತಂತ್ರಜ್ಞಾನವನ್ನು ಸಾಮಾನ್ಯರಿಗೂ ಕೈಗೆಟುಕುವಂತೆ ಮಾಡುತ್ತಿದೆ. ಆದರೆ, ಇದು ಬಿಲಿಯನ್ ಡಾಲರ್ ಹೂಡಿಕೆ ಮಾಡಿದ ಅಮೆರಿಕನ್ ಸಂಸ್ಥೆಗಳು ಮತ್ತು ಕಡಿಮೆ ವೆಚ್ಚದಲ್ಲಿ ಅದೇ ಸಾಮರ್ಥ್ಯ ಸಾಬೀತುಪಡಿಸುತ್ತಿರುವ ಚೀನಾ ಕಂಪನಿಗಳ ನಡುವೆ ತೀವ್ರ ಆರ್ಥಿಕ ಹಾಗೂ ತಾಂತ್ರಿಕ ಯುದ್ಧಕ್ಕೆ ಹಾದಿ ಮಾಡಿಕೊಟ್ಟಿದೆ.
ಇದು ಎಐ ಮಾಡೆಲ್ ಅನ್ನು ಚಿಕ್ಕದಾಗಿ ಮತ್ತು ಹೆಚ್ಚು ಸಮರ್ಥವಾಗಿ ಮಾಡುವ ಒಂದು ಪ್ರಕ್ರಿಯೆಯಾಗಿದೆ. ಮಾಡೆಲ್ ಡಿಸ್ಟಿಲೇಶನ್ ಎನ್ನುವುದು ದೊಡ್ಡ, ಹೆಚ್ಚು ಸಾಮರ್ಥ್ಯವಿರುವ ಎಐ ಮಾಡೆಲ್ನಿಂದ ಜ್ಞಾನವನ್ನು ಪಡೆದು, ಅದನ್ನು ಸಣ್ಣ ಹಾಗೂ ವೇಗವಾಗಿ ಕೆಲಸ ಮಾಡುವ ಮಾಡೆಲ್ಗೆ ವರ್ಗಾಯಿಸುವ ಪ್ರಕ್ರಿಯೆ. ಇದರಲ್ಲಿ ದೊಡ್ಡ, ದುಬಾರಿ ಮತ್ತು ಶಕ್ತಿಶಾಲಿ ಮಾಡೆಲ್ ಅನ್ನು ಟೀಚರ್ (ಶಿಕ್ಷಕ) ಹಾಗೂ ಇನ್ನೊಂದು ಸಣ್ಣ ಮಾಡೆಲ್ ಅನ್ನು ಸ್ಟೂಡೆಂಟ್ (ವಿದ್ಯಾರ್ಥಿ) ಎಂದು ಪರಿಗಣಿಸಲಾಗುತ್ತದೆ. ಟೀಚರ್ ಮಾಡೆಲ್ ನೀಡುವ ಸಂಕೀರ್ಣ ಪ್ರಶ್ನೆಗಳ ಉತ್ತರಗಳು ಮತ್ತು ಕೋಡಿಂಗ್ ಹಂತಗಳನ್ನು ಸ್ಟೂಡೆಂಟ್ ಮಾಡೆಲ್ಗೆ ತರಬೇತಿ ನೀಡಲು ಬಳಸಲಾಗುತ್ತದೆ. ಇದರಿಂದಾಗಿ ಸಣ್ಣ ಮಾಡೆಲ್ ಕಡಿಮೆ ವೆಚ್ಚದಲ್ಲಿ ದೊಡ್ಡ ಮಾಡೆಲ್ನಂತೆಯೇ ಕೆಲಸ ಮಾಡುವ ಸಾಮರ್ಥ್ಯವನ್ನು ಕಲಿಯುತ್ತದೆ. ಬೃಹತ್ ಎಐ ಮಾಡೆಲ್ ಅನ್ನು ಒಬ್ಬ ಅನುಭವಿ ಪೊ›ಫೆಸರ್ ಎಂದುಕೊಂಡರೆ, ಅದು ಕೋಟಿಗಟ್ಟಲೇ ಡೇಟಾವನ್ನು ಅಧ್ಯಯನ ಮಾಡಿರುತ್ತದೆ. ಡಿಸ್ಟಿಲೇಶನ್ ಮೂಲಕ ಆ ಪೊ›ಫೆಸರ್ ತನ್ನ ಸಂಪೂರ್ಣ ಜ್ಞಾನದ ಸಾರಾಂಶವನ್ನು ಒಬ್ಬ ಚುರುಕಾದ ವಿದ್ಯಾರ್ಥಿಗೆ ಕಲ್ಪಿಸಿಕೊಡುತ್ತಾನೆ. ಮೂಲ ಬೃಹತ್ ಮಾಡೆಲ್ ನೀಡುವ ಶೇಕಡ 90-95ರಷ್ಟು ನಿಖರವಾದ ಉತ್ತರಗಳನ್ನು ಈ ಚಿಕ್ಕ ಮಾಡೆಲ್ ಅತ್ಯಂತ ಕಡಿಮೆ ಕಂಪ್ಯೂಟಿಂಗ್ ಶಕ್ತಿಯಲ್ಲಿ ನೀಡುತ್ತದೆ. ಮಷಿನ್-ಲರ್ನಿಂಗ್ ತಜ್ಞರ ಪ್ರಕಾರ, ನೀವು ವಿದ್ಯಾರ್ಥಿಗೆ ಗಣಿತದ ಸಂಕೀರ್ಣ ಪ್ರಶ್ನೆಗಳ ಉತ್ತರಗಳನ್ನು ಮಾತ್ರ ನೀಡಿದರೆ ಅವನು ಕಡಿಮೆಯಷ್ಟೇ ಕಲಿಯುತ್ತಾನೆ, ಆದರೆ ಉತ್ತರದ ಪ್ರತಿ ಹಂತವನ್ನು ವಿವರವಾಗಿ ತಿಳಿಸಿದರೆ ಅವನು ವೇಗವಾಗಿ ಕಲಿಯುತ್ತಾನೆ. ಡಿಸ್ಟಿಲೇಶನ್ ತಂತ್ರಜ್ಞಾನವು ಅದನ್ನೇ ಮಾಡುತ್ತದೆ.
ಚೀನಾದ ಡೀಪ್ಸೀಕ್, ಮೂನ್ಶಾಟ್ ಮತ್ತು ಮಿನಿಮ್ಯಾಕ್ಸ್ನಂತಹ ಕಂಪನಿಗಳು ತಮ್ಮ ವಾಣಿಜ್ಯ ಮಾಡೆಲ್ಗಳ (ಕ್ಲೌಡ್ ಮತ್ತು ಚಾಟ್ಜಿಪಿಟಿಯಂತಹ) ಉತ್ತರಗಳನ್ನು ಮತ್ತು ಡೇಟಾವನ್ನು ಅನಧಿಕೃತವಾಗಿ ಬಳಸಿಕೊಳ್ಳುತ್ತಿವೆ ಎಂದು ಆಂಥ್ರೋಪಿಕ್ ಮತ್ತು ಓಪನ್ಎಐನಂತಹ ಅಮೆರಿಕದ ಕಂಪನಿಗಳು ಆರೋಪಿಸಿವೆ. ಭಾರಿ ಪ್ರಮಾಣದ ಚಿಪ್ಗಳು ಮತ್ತು ಕೋಟ್ಯಂತರ ಡಾಲರ್ ಖರ್ಚು ಮಾಡದೆ, ಚೀನಾದ ಕಂಪನಿಗಳು ಅಮೆರಿಕದ ಮಾಡೆಲ್ಗಳ ಸಾಮರ್ಥ್ಯವನ್ನು ನಕಲು ಮಾಡಿ ತಮ್ಮದೇ ಆದ ಅಗ್ಗದ ಮಾಡೆಲ್ಗಳನ್ನು ತಯಾರಿಸುತ್ತಿವೆ. ಅಮೆರಿಕದ ಪ್ರಮುಖ ಮಾಡೆಲ್ಗಳ ಅಕಐ (ಅಟಟ್ಝಜ್ಚಿಚಠಿಜಿಟ್ಞ ಕ್ಟಟಜ್ಟಚಞಞಜ್ಞಿಜ ಐಠಿಛ್ಟಿ್ಛ್ಚ) ಮೂಲಕ ಚೀನಾದ ನವೋದ್ಯಮಗಳು, ಇತರ ಕಂಪನಿಗಳು ಲಕ್ಷಾಂತರ ಪ್ರಶ್ನೆಗಳನ್ನು ಕೇಳಿ, ಬಂದ ಉತ್ತರಗಳನ್ನು (ಖಢ್ಞಠಿಜಛಿಠಿಜ್ಚಿ ಈಚಠಿಚ) ಬಳಸಿಕೊಂಡು ತಮ್ಮದೇ ಆದ ಸಣ್ಣ, ಅತ್ಯಂತ ಅಗ್ಗದ ಡಿಸ್ಟಿಲ್ಡ್ ಮಾಡೆಲ್ಗಳನ್ನು ತರಬೇತಿಗೊಳಿಸುತ್ತಿವೆ. ‘ನಾವು ಶತಕೋಟಿ ಡಾಲರ್ ವೆಚ್ಚ ಮಾಡಿ ಕಂಡುಹಿಡಿದ ಜ್ಞಾನವನ್ನು ಚೀನಾ ಕಂಪನಿಗಳು ಉಚಿತವಾಗಿ/ಕಡಿಮೆ ವೆಚ್ಚದಲ್ಲಿ ಡಿಸ್ಟಿಲ್ ಮಾಡಿಕೊಂಡು ನಮ್ಮ ಬೌದ್ಧಿಕ ಆಸ್ತಿಯನ್ನು ಕದಿಯುತ್ತಿವೆ’ ಎಂಬುದು ಅಮೆರಿಕದ ಪ್ರಮುಖ ದೂರು.
ಅಮೆರಿಕವು ಚೀನಾಕ್ಕೆ ಅತ್ಯಾಧುನಿಕ ಎನ್ವಿಡಿಯಾ ಜಿಪಿಯು ಚಿಪ್ಗಳು ಸಿಗದಂತೆ ಕಠಿಣ ನಿರ್ಬಂಧಗಳನ್ನು ಹೇರಿತ್ತು. ಆದರೆ ಚೀನಾ ಡಿಸ್ಟಿಲೇಶನ್ ತಂತ್ರಜ್ಞಾನ ಬಳಸಿ ಕಡಿಮೆ ಕಂಪ್ಯೂಟಿಂಗ್ ಶಕ್ತಿಯಲ್ಲೇ ಅಮೆರಿಕದ ಮಾಡೆಲ್ಗಳಿಗೆ ಸವಾಲು ನೀಡುವ ಸಣ್ಣ ಮಾಡೆಲ್ಗಳನ್ನು ಸೃಷ್ಟಿಸುತ್ತಿದೆ. ಮಾತ್ರವಲ್ಲ, ಡಿಸ್ಟಿಲ್ ಮಾಡಿದ ಸಣ್ಣ ಮಾಡೆಲ್ಗಳನ್ನು ಓಪನ್ ಸೋರ್ಸ್ (ಉಚಿತವಾಗಿ) ನೀಡುತ್ತಿದ್ದು, ಪ್ರಪಂಚದಾದ್ಯಂತ ಡೆವಲಪರ್ಗಳು ಸ್ವತಂತ್ರವಾಗಿ ಎಐ ಅಪ್ಲಿಕೇಶನ್ಗಳನ್ನು ನಿರ್ವಿುಸಲು ಸಹಾಯವಾಗುತ್ತಿದೆ. ಓಪನ್ಎಐನಂತಹ ಕಂಪನಿಗಳು ತಮ್ಮ ಎಪಿಐ ಬಳಸಿ ಯಾವುದೇ ಹೊಸ ಮಾಡೆಲ್ ತರಬೇತಿಗೊಳಿಸುವುದನ್ನು ನಿಷೇಧಿಸಿ ನಿಯಮಗಳನ್ನು ಬಿಗಿಗೊಳಿಸುತ್ತಿವೆ.
ಓಪನ್ ಸೋರ್ಸ್ ತಂತ್ರ: ಅಮೆರಿಕದ ಓಪನ್ಎಐ ಮತ್ತು ಆಂಥ್ರೋಪಿಕ್ ತಮ್ಮ ಮಾಡೆಲ್ಗಳನ್ನು ಮುಚ್ಚಿದ ವ್ಯವಸ್ಥೆಯಲ್ಲಿ (ಣಟಛ್ಞಿಗಛಿಜಿಜಜಠಿಠ) ಇರಿಸಿವೆ. ಆದರೆ, ಡೀಪ್ಸೀಕ್ ತನ್ನ ಮಾಡೆಲ್ಗಳನ್ನು ಉಚಿತವಾಗಿ ಜಗತ್ತಿಗೆ ನೀಡಿದೆ. ಇದರಿಂದ ಜಾಗತಿಕವಾಗಿ ಲಕ್ಷಾಂತರ ಡೆವಲಪರ್ಗಳು, ಕಂಪನಿಗಳು ಮತ್ತು ಸಂಶೋಧಕರು ಅಮೆರಿಕನ್ ಕಂಪನಿಗಳಿಗೆ ಹಣ ಪಾವತಿಸುವ ಬದಲು ಡೀಪ್ಸೀಕ್ನ ಉಚಿತ ಆವೃತ್ತಿಗಳನ್ನು ತಮ್ಮ ಕಂಪನಿಗಳಲ್ಲೇ ಡೌನ್ಲೋಡ್ ಮಾಡಿ ಬಳಸಲು ಆರಂಭಿಸಿದ್ದಾರೆ.
ತಾಂತ್ರಿಕ ಚಾತುರ್ಯ: ಅಮೆರಿಕದ ಕಂಪನಿಗಳು ದೊಡ್ಡ ಡೇಟಾಸೆಟ್ ಮತ್ತು ಹೆಚ್ಚು ಜಿಪಿಯು ಸೂತ್ರವನ್ನು ನಂಬಿದ್ದರೆ, ಚೀನಾದ ಕಂಪನಿಗಳು ಅಲ್ಗಾರಿದಮ್ ದಕ್ಷತೆಗೆ ಆದ್ಯತೆ ನೀಡಿವೆ. Mಜ್ಡಿಠ್ಠಿ್ಟಟ್ಛಉಟಛ್ಟಿಠಿಠ (Mಟಉ) ತಂತ್ರಜ್ಞಾನದಲ್ಲಿ ಎಐಗೆ ಪ್ರಶ್ನೆ ಕೇಳಿದಾಗ ಇಡೀ ಮಾಡೆಲ್ ಕಾರ್ಯ ನಿರ್ವಹಿಸುವುದಿಲ್ಲ; ಬದಲಾಗಿ ಪ್ರಶ್ನೆಗೆ ಸೂಕ್ತವಾದ ಸಣ್ಣ ಭಾಗ (ಉಟಛ್ಟಿಠಿ ಖ್ಠಚ್ಞಿಛಿಠಿಡಿಟ್ಟk) ಮಾತ್ರ ಸಕ್ರಿಯಗೊಳ್ಳುತ್ತದೆ. ಇದರಿಂದ ವಿದ್ಯುತ್ ಮತ್ತು ಕಂಪ್ಯೂಟಿಂಗ್ ವೆಚ್ಚ ತೀವ್ರವಾಗಿ ಕಡಿಮೆಯಾಗುತ್ತದೆ. ಕಡಿಮೆ ಸಾಮರ್ಥ್ಯದ ಅಥವಾ ಹಳೆಯ ಜಿಪಿಯುಗಳಲ್ಲೇ ಹೆಚ್ಚು ವೇಗವಾಗಿ ಉತ್ತರ ನೀಡುವಂತೆ ಸಾಫ್ಟ್ವೇರ್ ಶ್ರೇಣಿಯನ್ನು ವಿನ್ಯಾಸಗೊಳಿಸಲಾಗಿದೆ.
ಭವಿಷ್ಯದಲ್ಲಿ ಸ್ಮಾರ್ಟ್ಫೋನ್ಗಳು, ಸ್ಮಾರ್ಟ್ ವಾಚ್ಗಳು ಹಾಗೂ ಐಒಟಿ ಸಾಧನಗಳಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲದೆಯೂ ನೇರವಾಗಿ ರನ್ ಆಗುವ ಸಣ್ಣ ಎಐ ಮಾಡೆಲ್ಗಳನ್ನು ನಿರ್ವಿು ಸಲು ಮಾಡೆಲ್ ಡಿಸ್ಟಿಲೇಶನ್ ತಂತ್ರಜ್ಞಾನ ಪ್ರಮುಖ ಆಧಾರವಾಗಲಿದೆ. ದೊಡ್ಡ ಮಾಡೆಲ್ಗಳ ಬದಲಿಗೆ ವೈದ್ಯಕೀಯ, ಕಾನೂನು, ಶಿಕ್ಷಣ ಹಾಗೂ ಹಣಕಾಸು ಕ್ಷೇತ್ರಕ್ಕೆ ಮಾತ್ರ ಸೀಮಿತವಾದ ನಿಖರವಾದ ಸಣ್ಣ ಭಾಷಾ ಮಾಡೆಲ್ಗಳು ಹೆಚ್ಚಾಗಲಿವೆ. ಒಂದಕ್ಕಿಂತ ಹೆಚ್ಚು ದೊಡ್ಡ ಎಐ ಮಾಡೆಲ್ಗಳಿಂದ ಜ್ಞಾನವನ್ನು ಗ್ರಹಿಸಿ ಒಂದೇ ಅತ್ಯುತ್ತಮ ಸಣ್ಣ ಮಾಡೆಲ್ ರೂಪಿಸುವ ತಂತ್ರಜ್ಞಾನ ಬೆಳೆಯುತ್ತಿದೆ.
ಅಮೆರಿಕವು ಚೀನಾಕ್ಕೆ ಅತ್ಯಾಧುನಿಕ ಎನ್ವಿಡಿಯಾ ಜಿಪಿಯು ಚಿಪ್ಗಳು ಸಿಗದಂತೆ ಕಠಿಣ ರಫ್ತು ನಿಯಮ ರೂಪಿಸಿತ್ತು. ಆದರೆ, ಈ ಚಿಪ್ ಕೊರತೆಯನ್ನು ಚೀನಾ ತಾಂತ್ರಿಕ ಆವಿಷ್ಕಾರ ಮತ್ತು ಡಿಸ್ಟಿಲೇಶನ್ ಮೂಲಕ ಸರಿದೂಗಿಸಿ, ಕಡಿಮೆ ಚಿಪ್ನಲ್ಲೂ ಅಮೆರಿಕಕ್ಕೆ ಸವಾಲೆಸೆಯಬಹುದು ಎಂದು ತೋರಿಸಿಕೊಟ್ಟಿದ್ದು ಅಮೆರಿಕದ ಎಐ ಉದ್ಯಮವನ್ನು ಬೆಚ್ಚಿಬೀಳಿಸಿದೆ. ಡೀಪ್ಸೀಕ್ ಅಮೆರಿಕದ ಎಐ ಕಂಪನಿಗಳ ವಾಣಿಜ್ಯ ಮಾದರಿಯನ್ನೇ ಪ್ರಶ್ನಿಸುವಂತೆ ಮಾಡಿದೆ- ಅತ್ಯುತ್ತಮ ಎಐ ನಿರ್ವಿುಸಲು ಬಿಲಿಯನ್ ಡಾಲರ್ ವೆಚ್ಚ ಮಾಡಬೇಕಿಲ್ಲ ಎಂಬುದನ್ನು ಸಾಬೀತುಪಡಿಸಿ, ಜಾಗತಿಕ ಪೈಪೋಟಿಯನ್ನು ತೀವ್ರಗೊಳಿಸಿದೆ.
ದೊಡ್ಡ ಎಐ ಮಾಡೆಲ್ಗಳನ್ನು (ಉದಾಹರಣೆಗೆ ಜಿಪಿಟಿ-4) ನಿರ್ವಹಿಸಲು ಸಾವಿರಾರು ಎನ್ವಿಡಿಯಾ ಜಿಪಿಯುಗಳು ಮತ್ತು ಶತಕೋಟಿ ಡಾಲರ್ ವೆಚ್ಚದ ಡೇಟಾ ಸೆಂಟರ್ಗಳು ಬೇಕು. ಆದರೆ ಡಿಸ್ಟಿಲ್ ಮಾಡಿದ ಸಣ್ಣ ಮಾಡೆಲ್ಗಳು ಎಐ ಚಿತ್ರಣವನ್ನೇ ಬದಲಾಯಿಸುತ್ತಿವೆ. ತರಬೇತಿ ಮತ್ತು ನಿರ್ವಹಣಾ ವೆಚ್ಚ ಶೇಕಡ 80ರಿಂದ 90ರಷ್ಟು ಕಡಿಮೆಯಾಗುತ್ತದೆ. ಸಣ್ಣ ಮಾಡೆಲ್ಗಳನ್ನು ಕ್ಲೌಡ್ ಸರ್ವರ್ ಇಲ್ಲದೆಯೇ ನಿಮ್ಮ ಸ್ಮಾರ್ಟ್ಫೋನ್, ಕಾರು ಅಥವಾ ಲ್ಯಾಪ್ಟಾಪ್ಗಳಲ್ಲಿ ನೇರವಾಗಿ ಚಲಾಯಿಸಬಹುದು. ಉತ್ತರಗಳನ್ನು ತಕ್ಷಣವೇ ನೀಡುತ್ತವೆ ಮತ್ತು ಕಡಿಮೆ ಶಕ್ತಿ ಬಳಸುತ್ತವೆ.
ಭಾರತದಲ್ಲಿ ಮಾಡೆಲ್ ಡಿಸ್ಟಿಲೇಶನ್ ತಂತ್ರಜ್ಞಾನದ ಬಳಕೆ ಮತ್ತು ಅಗತ್ಯ ವೇಗವಾಗಿ ಹೆಚ್ಚುತ್ತಿದೆ. ಭಾರತದಲ್ಲಿ ಕನ್ನಡ, ಹಿಂದಿ, ತಮಿಳು ಸೇರಿದಂತೆ 22 ಪ್ರಾದೇಶಿಕ ಭಾಷೆಗಳಿಗೆ ಎಐ ಬೆಂಬಲ ನೀಡಲು ಸರ್ವಂ ಎಐ, ಭಾರತ್ಜೆನ್, ಕೃತ್ರಿಮ್ಂತಹ ಸಂಸ್ಥೆಗಳು ಬೃಹತ್ ಭಾಷಾ ಮಾಡೆಲ್ಗಳಿಂದ ಜ್ಞಾನವನ್ನು ಪಡೆದು ಪ್ರಾದೇಶಿಕ ಭಾಷೆಗಳ ಸಣ್ಣ ಮಾಡೆಲ್ಗಳನ್ನು ಅಭಿವೃದ್ಧಿಪಡಿಸುತ್ತಿವೆ. ದುಬಾರಿ ಜಿಪಿಯು ಹಾರ್ಡ್ವೇರ್ಗಳ ಕೊರತೆಯನ್ನು ನೀಗಿಸಲು ಮತ್ತು ಕಡಿಮೆ ಖರ್ಚಿನಲ್ಲಿ ಸ್ಥಳೀಯ ಎಐ ಪರಿಹಾರಗಳನ್ನು ನೀಡಲು ಭಾರತ ಸರ್ಕಾರ ಹಾಗೂ ಭಾರತೀಯ ಸ್ಟಾರ್ಟಪ್ಗಳು ಡಿಸ್ಟಿಲೇಶನ್ ತಂತ್ರಜ್ಞಾನವನ್ನೇ ಪ್ರಮುಖವಾಗಿ ನಂಬಿವೆ. ಫಿನ್ಟೆಕ್, ಹೆಲ್ತ್ಟೆಕ್ ಮತ್ತು ಇ-ಕಾಮರ್ಸ್ ಸಂಸ್ಥೆಗಳು ತಮ್ಮ ಗ್ರಾಹಕರ ಡೇಟಾವನ್ನು ಸುರಕ್ಷಿತವಾಗಿಡಲು ಮತ್ತು ಕಡಿಮೆ ವೆಚ್ಚದಲ್ಲಿ 24/7 ಕಸ್ಟಮರ್ ಸಪೋರ್ಟ್ ಬೋಟ್ಗಳನ್ನು ಚಲಾಯಿಸಲು ಡಿಸ್ಟಿಲ್ ಮಾಡಿದ ಮಾಡೆಲ್ಗಳನ್ನು ಬಳಸುತ್ತಿವೆ.