ಇರಾನ್-ಅಮೆರಿಕ ನಡುವೆ ಮತ್ತೆ ಯುದ್ಧ
- ಇರಾನ್ ಮೇಲೆ 1,000 ಕ್ಷಿಪಣಿಗಳನ್ನು ಉಡಾಯಿಸುವುದಾಗಿ ಟ್ರಂಪ್ ಖಡಕ್ ವಾರ್ನಿಂಗ್
- ಅಗತ್ಯ ಬಿದ್ದರೆ ಒಂದು ವರ್ಷದವರೆಗೆ ದಾಳಿ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ
- ಅಮೆರಿಕ ನಿಲುವು ಬದಲಾದರೆ ಮಾತ್ರ ಮಾತುಕತೆ ಎಂದ ಇರಾನ್
Iran-US War: ಶಾಂತಿ ಒಪ್ಪಂದಕ್ಕೆ ಅಸ್ತು ಎಂದಿದ್ದ ಅಮೆರಿಕ ಮತ್ತು ಇರಾನ್ ಇದೀಗ ಮತ್ತೆ ಪರಸ್ಪರ ದಾಳಿಗೆ ಮುಂದಾಗಿರುವುದು ಸದ್ಯ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದೆ.
ದಿನದಿಂದ ದಿನಕ್ಕೆ ಯುದ್ಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಇರಾನ್ ಮತ್ತು ಅಮೆರಿಕ ಹೊಸದಾಗಿ ಶ್ರಮಿಸುತ್ತಿರುವುದು ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಇರಾನ್ ಜೊತೆಗಿನ ಕದನ ವಿರಾಮ ಮಾತ್ರ ಕೊನೆಗೊಂಡಿದೆ ಎಂದಿರುವ ಟ್ರಂಪ್, ಅಗತ್ಯವಿದ್ದಲ್ಲಿ 1000 ಕ್ಷಿಪಣಿ ದಾಳಿಗಳನ್ನು ಕೈಗೊಳ್ಳಲು ಯುಎಸ್ ಸಿದ್ಧ. ಒಂದು ವರ್ಷದವರೆಗೆ ನಿರಂತರವಾಗಿ ದಾಳಿಗಳನ್ನು ಮುಂದುವರಿಸುವ ಸಾಮರ್ಥ್ಯವನ್ನು ಅಮೆರಿಕ ಸೇನೆ ಹೊಂದಿದೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಟ್ರಂಪ್ ನೀಡಿರುವ ಎಚ್ಚರಿಕೆಯ ಬೆನ್ನಲ್ಲೇ ಸಿಟ್ಟಿಗೆದ್ದಿರುವ ಇರಾನ್, ಅಮೆರಿಕ ಜತೆಗಿನ ಮಾತುಕತೆ ಅಥವಾ ಒಪ್ಪಂದಗಳು ಇನ್ಮುಂದೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಯುದ್ಧದ ವಿಚಾರದಲ್ಲಿ ಯುಎಸ್ ತನ್ನ ನಿಲುವು ಬದಲಿಸುವವರೆಗೆ ಯಾವುದೇ ಮಾತುಕತೆಗೂ ನಾವು ಮುಂದಾಗುವುದಿಲ್ಲ ಎಂದು ಟ್ರಂಪ್ ಸೊಕ್ಕಿನ ಮಾತುಗಳಿಗೆ ತಿರುಗೇಟು ನೀಡಿದೆ.
ಹೊರ್ಮುಜ್ ಜಲ ಮಾರ್ಗದಲ್ಲಿ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ್ದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಅಮೆರಿಕ ಕೈಗೊಂಡ ದಾಳಿ ಈಗ ಭಾರಿ ಉದ್ವಿಗ್ನತೆಗೆ ಸಾಕ್ಷಿಯಾಗಿದೆ. ಇರಾನಿನ ನಗರಗಳ ಮೇಲೆ ಬಾಂಬ್ ಅಟ್ಯಾಕ್ ಮಾಡಿದ ಟ್ರಂಪ್ ದೇಶದ ಮಿತ್ರ ರಾಷ್ಟ್ರಗಳಾದ ಕತಾರ್, ಬಹ್ರೇನ್ ಮೇಲೆ ಇರಾನ್ ಸರಣಿ ದಾಳಿಗಳನ್ನು ನಡೆಸಿತು. ಸದ್ಯ ಎರಡೂ ರಾಷ್ಟ್ರಗಳ ಮಧ್ಯೆ ಕಿಚ್ಚಿನ ವಾತಾವರಣ ಸೃಷ್ಟಿಯಾಗಿದ್ದು, ಇದ್ಯಾವ ಹಂತಕ್ಕೆ ಹೋಗಲಿದೆ ಎಂಬ ಆತಂಕ ಇತರೆ ದೇಶಗಳಲ್ಲಿ ಕಾಡಲಾರಂಭಿಸಿದೆ,(ಏಜೆನ್ಸೀಸ್).