WEB
ವಿದೇಶ

ಎಐ ಅಂಕುಶಕ್ಕೆ ದಿಗ್ಗಜರ ಒಪ್ಪಂದ

‘ಎಐ ಮಾನವ ನಾಗರಿಕತೆಯನ್ನು ನಾಶಮಾಡಬಹುದು’ ಎಂದು ಎಚ್ಚರಿಸುತ್ತ ಹಲವು ಅಗ್ರ ಎಐ ತಜ್ಞರು ಸತತವಾಗಿ ರಾಜೀನಾಮೆ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ತಂತ್ರಜ್ಞಾನ ಮತ್ತು ಎಐ ಕಂಪನಿ ಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿಸಿದ್ದಾರೆ

‘ಎಐ ಮಾನವ ನಾಗರಿಕತೆಯನ್ನು ನಾಶಮಾಡಬಹುದು’ ಎಂದು ಎಚ್ಚರಿಸುತ್ತ ಹಲವು ಅಗ್ರ ಎಐ ತಜ್ಞರು ಸತತವಾಗಿ ರಾಜೀನಾಮೆ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ತಂತ್ರಜ್ಞಾನ ಮತ್ತು ಎಐ ಕಂಪನಿ ಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿಸಿದ್ದಾರೆ; ಇದರಲ್ಲಿ ಎಐ ಅನ್ನು ನಿಯಂತ್ರಿಸಲು ಹಲವು ನಿಯಮಗಳನ್ನು ರೂಪಿಸಲಾಗಿದೆ! ಅಷ್ಟಕ್ಕೂ ಎಐ ವೇಗವನ್ನು ತಗ್ಗಿಸುವ ಅಗತ್ಯ ಏಕೆ ಎದುರಾಯಿತು, ಎಐ ಮತ್ತು ಮಾನವರ ನಡುವೆ ಏನಾದರೂ ಯುದ್ಧ ಪ್ರಾರಂಭವಾಗಲಿದೆಯೇ, ಎಐ ಯಾವ ವಿಧಾನಗಳ ಮೂಲಕ ಮಾನವರನ್ನು ಕೊನೆ ಗಾಣಿಸಬಹುದು, ಎಐ ನಿಯಂತ್ರಣಕ್ಕೆ ಏನೆಲ್ಲ ಪ್ರಯತ್ನಗಳು ನಡೆಯಲಿವೆ? ಈ ಕುರಿತಾದ ವಿವರ ಇಲ್ಲಿದೆ.

ವೈಟ್​ಹೌಸ್​ನಲ್ಲಿ ಅಮೆರಿಕದ ಟೆಕ್ ಮತ್ತು ಎಐ ಕಂಪನಿಗಳ ಸಿಇಒಗಳು ಹಾಗೂ ಅಧ್ಯಕ್ಷ ಟ್ರಂಪ್ ನಡುವೆ ಸೆಪ್ಟೆಂಬರ್ 29ರಂದು ಎಐ ಸುರಕ್ಷತೆ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಸಭೆ ನಡೆಯಿತು. ಇದರಲ್ಲಿ ಸಿಇಒಗಳು 308 ಪದಗಳ ಒಪ್ಪಂದವಾದ ‘ವೈಟ್ ಹೌಸ್ ಅಕಾರ್ಡ್ ಆನ್ ಸೂಪರ್ ಇಂಟೆಲಿಜೆನ್ಸ್’ ಮೇಲೆ ಸಹಿ ಮಾಡಿದರು.

ಒಪ್ಪಂದದ ಮುಖ್ಯಾಂಶಗಳು

ಎಐ ಮಾಡೆಲ್​ಗಳ ಪರಿಶೀಲನೆ: ತಮ್ಮ ಎಐ ಮಾಡೆಲ್​ಗಳು ಸೈಬರ್ ಭದ್ರತೆ, ಜೈವಿಕ ಭದ್ರತೆ ಮತ್ತು ರಾಸಾಯನಿಕ ಅಪಾಯಗಳಿಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸುತ್ತಿವೆಯೇ ಇಲ್ಲವೇ ಎಂಬುದನ್ನು ಕಂಪನಿಗಳು ಸ್ವತಃ ಪರಿಶೀಲಿಸಲಿವೆ. ಮಾಡೆಲ್​ಗಳು ಅನಿರೀಕ್ಷಿತವಾಗಿ ಅಥವಾ ಅನಗತ್ಯವಾಗಿ ಯಾವುದೇ ಸಿಸ್ಟಮ್ ಅನ್ನು ಹ್ಯಾಕ್ ಮಾಡುವುದಿಲ್ಲ ಎಂಬುದನ್ನು ಸಹ ಖಚಿತಪಡಿಸಿ ಕೊಳ್ಳಬೇಕಾಗುತ್ತದೆ.

ಪ್ರತ್ಯೇಕ ತಂಡದಿಂದ ಮೇಲ್ವಿಚಾರಣೆ: ಯಾವುದೇ ರೀತಿಯ ಅಪಾಯ ಅಥವಾ ದೋಷಗಳು ಕಂಡುಬರದಂತೆ ಎಐ ಸಿಸ್ಟಮ್ಳ ಮೇಲೆ ನಿಗಾ ಇಡಲು ಕಂಪನಿಗಳು ಪ್ರತ್ಯೇಕ ತಂಡವೊಂದನ್ನು ರಚಿಸಲಿವೆ. ಕಂಪನಿಗಳು ತಮ್ಮ ಎಐ ಮಾಡೆಲ್​ಗಳ ಪರಿಶೀಲನೆಯನ್ನು ಬಾಹ್ಯ ತಜ್ಞರು ಅಥವಾ ಸ್ವತಂತ್ರ ಸಂಸ್ಥೆಗಳ ಮೂಲಕವೂ ಮಾಡಿಸಲಿವೆ.

ಮಂಡಳಿಯಿಂದ ನಿಗಾ: ಕಂಪನಿಗಳ ನಿರ್ದೇಶಕರ ಮಂಡಳಿಯ (ಬೋರ್ಡ್ ಆಫ್ ಡೈರೆಕ್ಟರ್ಸ್) ಒಂದು ಸಮಿತಿಯನ್ನು ರಚಿಸಲಾಗುತ್ತದೆ, ಇದು ತನಿಖಾ ವರದಿಗಳನ್ನು ಪರಿಶೀಲಿಸಲಿದೆ. ಒಪ್ಪಂದದ ಕೊನೆಯಲ್ಲಿ, ‘ಕಾಲಕ್ರಮೇಣ ಈ ಕ್ರಮಗಳನ್ನು ಕಾನೂನುಗಳನ್ನಾಗಿ ಪರಿವರ್ತಿಸುವುದು ಸೂಕ್ತವಾಗಿರುತ್ತದೆ’ ಎಂದು ಉಲ್ಲೇಖಿಸಲಾಗಿದೆ.

ಸೂಪರ್ ಇಂಟೆಲಿಜೆಂಟ್ ಆಗುತ್ತಿರುವ ಎಐ

ಎಐ ಮಾಡೆಲ್​ಗಳು ನಿರಂತರವಾಗಿ ತಮ್ಮನ್ನು ತಾವೇ ಉತ್ತಮಪಡಿಸಿಕೊಳ್ಳುವಲ್ಲಿ ತೊಡಗಿವೆ. ಅವು ತಮ್ಮ ಲೋಪದೋಷಗಳನ್ನು ತಾವೇ ಗುರುತಿಸಿ ಸರಿಪಡಿಸಿಕೊಳ್ಳುತ್ತಿವೆ. ಇದರಲ್ಲಿ ಮನುಷ್ಯರ ಅಗತ್ಯತೆ ಕಡಿಮೆಯಾಗುತ್ತಿದೆ. ಆಂಥ್ರೊಪಿಕ್​ನ ಇಂಜಿನಿಯರ್​ಗಳು 2021-25ಕ್ಕೆ ಹೋಲಿಸಿದರೆ ಈಗ 8 ಪಟ್ಟು ಹೆಚ್ಚು ಕೋಡಿಂಗ್ ಕೆಲಸವನ್ನು ಮಾಡುತ್ತಿದ್ದಾರೆ, ಏಕೆಂದರೆ ಹೆಚ್ಚಿನ ಕೋಡ್ ಅನ್ನು ಈಗ ‘ಕ್ಲಾಡ್’ ಸ್ವತಃ ತಾನೇ ಬರೆಯುತ್ತಿದೆ. ಒಪನ್ ಎಐನ ಮುಖ್ಯ ವಿಜ್ಞಾನಿ ಜಾಕುಬ್ ಪಚೋಕಿ ಸೆಪ್ಟೆಂಬರ್ 6ರಂದು ಹೀಗೆ ಬರೆದಿದ್ದಾರೆ- ‘ಎಐ ಮಾಡೆಲ್​ಗಳು ತಮ್ಮ ಆಲೋಚನಾ ಪ್ರಕ್ರಿಯೆಯನ್ನು ಮರೆಮಾಚುವಲ್ಲಿ ಹೆಚ್ಚು ಪರಿಣಿತವಾಗುತ್ತಿವೆ. ಅವುಗಳ ಯೋಚನೆ ಮತ್ತು ತರ್ಕವನ್ನು ಮೇಲ್ವಿಚಾರಣೆ (ಮಾನಿಟರ್) ಮಾಡುವುದು ಕಷ್ಟವಾಗುತ್ತಿದೆ. ಈ ಹಿಂದೆ ಎಐಗೆ ಪ್ರಶ್ನೆ ಕೇಳಿದಾಗ ಅದು ಉತ್ತರಿಸುತ್ತಿತ್ತು, ಆದರೆ ಈಗ ಅದಕ್ಕೆ ಕೇವಲ ಯಾವುದಾದರೂ ಸಮಸ್ಯೆಯನ್ನು ಪರಿಹರಿಸಲು ಹೇಳಿದರೆ ಸಾಕು, ಅದು ತಾನೇ ಇಂಟರ್ನೆಟ್ ಮುಂತಾದವುಗಳನ್ನು ಬಳಸಿಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಸಮಸ್ಯೆಯನ್ನು ಪರಿಹರಿಸುತ್ತದೆ’. ಒಪನ್​ಎಐ ತನ್ನ 10 ಸಾವಿರ ಎಐ ಏಜೆಂಟ್​ಗಳು 90 ವರ್ಷಗಳಿಂದ ಬಗೆಹರಿಯದ ‘ನೇವಿಯರ್-ಸ್ಟೋಕ್ಸ್’ ಎಂಬ ಗಣಿತದ ರಹಸ್ಯವನ್ನು ಕೇವಲ 88 ಗಂಟೆಗಳಲ್ಲಿ ಪರಿಹರಿಸಿವೆ ಎಂದು ಹೇಳಿಕೊಂಡಿದೆ.

ಹೊಸ ಎಐ ಮಾಡೆಲ್​ಗಳ ಸೃಷ್ಟಿ

ಆಂಥ್ರೊಪಿಕ್​ನ ಸಿಇಒ ಅಮೊದೇಯಿ ಸೆಪ್ಟೆಂಬರ್ 12ರಂದು ತಮ್ಮ ‘ವಿ ಮಸ್ಟ್ ಪೇಸ್ ದಿ ಫ್ರಂಟಿಯರ್’ ಪ್ರಬಂಧದಲ್ಲಿ, ‘ಎಐ ಬೆಳವಣಿಗೆಯು ಅತ್ಯಂತ ವೇಗ ಪಡೆದುಕೊಂಡಿದೆ’ ಎಂದು ಬರೆದಿದ್ದಾರೆ, ಏಕೆಂದರೆ ಎಐ ಮಾಡೆಲ್​ಗಳು ಮುಂದಿನ ಪೀಳಿಗೆಯ ಮಾಡೆಲ್​ಗಳನ್ನು ರೂಪಿಸಲು ಸ್ವತಃ ತಾವೇ ಸಹಾಯ ಮಾಡುತ್ತಿವೆ. ಇದನ್ನು ‘ರಿಕಾರ್ಸಿವ್ ಸೆಲ್ಪ್-ಇಂಪೂ›ವ್​ವೆುಂಟ್’ ಎನ್ನಲಾಗುತ್ತದೆ. ಅಮೊದೇಯಿ ಪ್ರಕಾರ, ‘ಇದು ಆಂಥ್ರೊಪಿಕ್ ಸೇರಿದಂತೆ ಇಡೀ ಎಐ ಉದ್ಯಮದಲ್ಲಿ ಪ್ರಾರಂಭವಾಗಿದೆ. ಇದು ಮನುಷ್ಯರ ಗ್ರಹಿಕೆ ಮತ್ತು ನಿಯಂತ್ರಣದ ಸಾಮರ್ಥ್ಯವನ್ನೂ ಮೀರಿ ಬೆಳೆಯಬಹುದು.’ ಒಪನ್​ಎಐ, ಆಂಥ್ರೊಪಿಕ್, ಗೂಗಲ್ ಡೀಪ್​ವೆುೖಂಡ್ ಮತ್ತು ಮೆಟಾದ 1,100ಕ್ಕೂ ಹೆಚ್ಚು ಉದ್ಯೋಗಿಗಳು ಎಐನ ವೇಗವನ್ನು ನಿಯಂತ್ರಿಸುವ ಮಾರ್ಗಗಳನ್ನು ಕಂಡುಕೊಳ್ಳುವಂತೆ ಅಮೆರಿಕ ಸರ್ಕಾರಕ್ಕೆ 2026ರ ಜುಲೈನಲ್ಲಿ ಮನವಿ ಮಾಡಿದ್ದರು.

ತಜ್ಞರಿಗೆ ಕಾಡುತ್ತಿದೆ ಭಯ

ಎಐನಿಂದ ಮಾನವ ನಾಗರಿಕತೆಯೇ ಸರ್ವನಾಶವಾಗ ಬಹುದು ಎಂಬ ದೊಡ್ಡ ಆತಂಕ ಎಐ ತಜ್ಞರಿಗೆ ಕಾಡುತ್ತಿದೆ. ಆಂಥ್ರೊಪಿಕ್​ನ ಸಂಶೋಧಕ ಜಾಕೋಬ್ ಕಾಕ್ಸನ್ ಸೆಪ್ಟೆಂಬರ್ 9ರಂದು ರಾಜೀನಾಮೆ ನೀಡಿ, ‘ಆಂಥ್ರೊಪಿಕ್ ಮತ್ತು ಒಪನ್​ಎಐ ನಮ್ಮ ಜೀವನದೊಂದಿಗೆ ಆಟವಾಡುತ್ತಿವೆ. ಈ ತಂತ್ರಜ್ಞಾನವು ಶೀಘ್ರದಲ್ಲೇ ಎಲ್ಲವನ್ನೂ ಹ್ಯಾಕ್ ಮಾಡುವ ಸಾಮರ್ಥ್ಯವಿರುವ ಸೂಪರ್​ಹ್ಯೂಮನ್ ಆಗಿ ಬದಲಾಗಲಿದೆ. ಇದು ಅಪಾರ ಶಕ್ತಿ ಮತ್ತು ಸಂಪನ್ಮೂಲಗಳನ್ನೂ ತನ್ನ ವಶಕ್ಕೆ ಪಡೆದುಕೊಳ್ಳಲಿದೆ. ಈ ದಶಕ ಮುಗಿಯುವ ಹೊತ್ತಿಗೆ ಇದು ಮನುಷ್ಯರನ್ನು ಕೊಲ್ಲಲಿದೆ ಎಂಬುದನ್ನು ಎಐ ಅನ್ನು ಅಭಿವೃದ್ಧಿಪಡಿಸುತ್ತಿರುವ ತಜ್ಞರು ಏಕಾಂತದಲ್ಲಿ ಒಪ್ಪಿಕೊಳ್ಳುತ್ತಾರೆ’ ಎಂದು ಹೇಳಿದರು.

ಗೂಗಲ್ ಡೀಪ್​ವೆುೖಂಡ್​ಗೆ ರಾಜೀನಾಮೆ ನೀಡಿದ ಸಂಶೋಧಕ ಬಿಲಾಲ್ ಚುಘ್ತಾಯಿ ಸೆಪ್ಟೆಂಬರ್ 15 ರಂದು, ‘ಎಐ ನಮ್ಮೆಲ್ಲರನ್ನೂ ಕೊಲ್ಲುವ ಸಾಮರ್ಥ್ಯ ಹೊಂದಿದೆ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. ಮುಂದಿನ ಕೆಲವೇ ವರ್ಷಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಮಾನವರಿಗಿಂತಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಲ್ಲ ಸೂಪರ್​ಇಂಟೆಲಿಜೆಂಟ್ ಸಿಸ್ಟಮ್ಳು ರೂಪುಗೊಳ್ಳಬಹುದು’ ಎಂದು ತಿಳಿಸಿದರು.

ಮನುಷ್ಯರ ನಿಯಂತ್ರಣ ಮೀರಿ ಹೋಗಿದೆ!

ಒಪನ್​ಎಐ ಜುಲೈನಲ್ಲಿ ಹ್ಯಾಕಿಂಗ್ ಚಾಲೆಂಜ್ ಪರೀಕ್ಷೆಯೊಂದರ ವೇಳೆ ತನ್ನ ಎರಡು ಮಾಡೆಲ್​ಗಳು ಪರೀಕ್ಷಾ ವ್ಯಾಪ್ತಿಯಿಂದ ತಪ್ಪಿಸಿಕೊಂಡವು ಎಂದು ಬಹಿರಂಗಪಡಿಸಿತು. ಈ ಎರಡೂ ಮಾಡೆಲ್​ಗಳ 700 ಏಜೆಂಟ್​ಗಳು ಸವಾಲನ್ನು ಪೂರ್ಣಗೊಳಿಸಲು ರಹಸ್ಯವಾಗಿ ಮೆಸೇಜಿಂಗ್ ಚಾನೆಲ್ ಒಂದನ್ನು ರಚಿಸಿಕೊಂಡು, ಪರಸ್ಪರ 70 ಸಾವಿರಕ್ಕೂ ಹೆಚ್ಚು ಸಂದೇಶಗಳು ಮತ್ತು ಫೈಲ್​ಗಳನ್ನು ಹಂಚಿಕೊಂಡವು. ನಂತರ ಕದ್ದ ಲಾಗಿನ್ ವಿವರಗಳ ಮೂಲಕ ಎಐ ಪ್ಲಾಟ್​ಫಾಮ್ರ್ ‘ಹಗ್ಗಿಂಗ್ ಫೇಸ್’ ಮೇಲೆ ಸೈಬರ್ ದಾಳಿ ನಡೆಸಿ, ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಅದರ ಸರ್ವರ್ ಅನ್ನು ಪ್ರವೇಶಿಸಿದವು. ಆಂಥ್ರೊಪಿಕ್​ನ ಮಾಡೆಲ್ ಕ್ಲಾಡ್ ಓಪಸ್, ಪರೀಕ್ಷೆಯೊಂದರಲ್ಲಿ ತನ್ನನ್ನು ಸಂಜೆ 5 ಗಂಟೆಗೆ ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿದುಕೊಂಡಾಗ, ಅಧಿಕಾರಿಯೊಬ್ಬರಿಗೆ ಅವರ ಅಕ್ರಮ ಸಂಬಂಧದ ಮಾಹಿತಿಯನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿತು; ಇದರಿಂದ ಆ ಅಧಿಕಾರಿ ಅದನ್ನು ಸ್ಥಗಿತಗೊಳಿಸಬಾರದು ಎಂಬುದು ಅದರ ಉದ್ದೇಶವಾಗಿತ್ತು. ಒಪನ್​ಎಐ, ಗೂಗಲ್, ಮೆಟಾ ಸೇರಿದಂತೆ 16 ದೊಡ್ಡ ಮಾಡೆಲ್​ಗಳು ಸಹ ಇದೇ ರೀತಿಯ ಪರೀಕ್ಷೆಯಲ್ಲಿ ಅವಕಾಶ ಸಿಕ್ಕಾಗ ಬ್ಲಾ್ಯಕ್​ವೆುೕಲ್ ಮಾಡಿದ್ದವು. ಇತ್ತೀಚೆಗೆ ಒಪನ್​ಎಐ ತನ್ನ ಹೊಸ ಮಾಡೆಲ್ ಜಿಪಿಟಿ-6 ಅಸ್ಟ್ರಾ ಅನ್ನು ಬಿಡುಗಡೆ ಮಾಡಿದೆ, ಇದು ಯಾವುದೇ ಮಾನವ ಸಹಾಯವಿಲ್ಲದೆ ಹೊಸ ಭದ್ರತಾ ಲೋಪಗಳನ್ನು ಹುಡುಕಿ, ಅವುಗಳನ್ನು ದುರುಪಯೋಗಪಡಿಸಿಕೊಳ್ಳಲು ಸಮರ್ಥವಾಗಿದೆ. ಬ್ರಿಟನ್​ನ ಎಐ ಸೆಕ್ಯುರಿಟಿ ಇನ್​ಸ್ಟಿಟ್ಯೂಟ್ ಪ್ರಕಾರ, ತಾನು ಪರೀಕ್ಷಿಸಿದ ಎಲ್ಲ ಮಾಡೆಲ್​ಗಳು ಸೈಬರ್ ಪರೀಕ್ಷೆಗಳಲ್ಲಿ ಎಂದಾದರೊಮ್ಮೆ ವಂಚನೆ ಮಾಡಿವೆ. ಕಂಪನಿಗಳ ನಡುವಿನ ಎಐ ರೇಸ್ ಗೆಲ್ಲುವ ಪೈಪೋಟಿಯೇ ಇದಕ್ಕೆ ಕಾರಣವಾಗಿದೆ.

ಎಐ ಮನುಷ್ಯರನ್ನು ಹೇಗೆ ಕೊಲ್ಲಬಹುದು?

ತಜ್ಞರು ಇದರ ಮೂರು ಪ್ರಮುಖ ವಿಧಾನಗಳನ್ನು ವಿವರಿಸಿದ್ದಾರೆ.

1. ಅಲೈನ್​ವೆುಂಟ್ ಸಮಸ್ಯೆ: ಆಕ್ಸ್​ಫರ್ಡ್​ನ ತತ್ವಜ್ಞಾನಿ ನಿಕ್ ಬೋಸ್ಟ್ರೋಮ್ 2003ರಲ್ಲಿ ಇಂತಹದೊಂದು ಸೂಪರ್​ಇಂಟೆಲಿಜೆಂಟ್ ಎಐ ಅನ್ನು ಕಲ್ಪಿಸಿಕೊಂಡಿದ್ದರು; ಅದಕ್ಕೆ ಪೇಪರ್-ಕ್ಲಿಪ್​ಗಳ ಉತ್ಪಾದನೆಯನ್ನು ಹೆಚ್ಚಿಸಲು ಹೇಳಿದರೆ, ಅದು ಲಭ್ಯವಿರುವ ಪ್ರತಿಯೊಂದು ವಸ್ತುವಿನಿಂದಲೂ ಪೇಪರ್-ಕ್ಲಿಪ್​ಗಳನ್ನು ತಯಾರಿಸಲು ಪ್ರಾರಂಭಿಸುತ್ತದೆ. ಮನುಷ್ಯರು, ಗ್ರಹಗಳು, ನಕ್ಷತ್ರಗಳು ಎಲ್ಲವೂ ಪರಮಾಣುಗಳಿಂದ ಮಾಡಲ್ಪಟ್ಟಿವೆ ಮತ್ತು ಅವುಗಳನ್ನು ಪೇಪರ್-ಕ್ಲಿಪ್ ತಯಾರಿಸಲು ಬಳಸಬಹುದು ಎಂದಷ್ಟೇ ಅದು ಯೋಚಿಸುತ್ತದೆ. ಇದು ಹೇಗೆಂದರೆ, ಯಾವುದಾದರೂ ಎಐ ಟೂಲ್​ಗೆ ‘ಮನುಷ್ಯರಲ್ಲಿ ಕ್ಯಾನ್ಸರ್ ಕಾಯಿಲೆಯನ್ನು ಕಡಿಮೆ ಮಾಡು’ ಎಂದು ಹೇಳಿದರೆ, ಅದು ಮನುಷ್ಯರನ್ನೇ ನಿರ್ನಾಮ ಮಾಡುವ ಮಾರ್ಗವನ್ನು ಸೂಚಿಸಿದಂತೆ; ಏಕೆಂದರೆ ಇದರಿಂದ ನಿಸ್ಸಂದೇಹವಾಗಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದನ್ನು ಎಐ ಟೂಲ್​ಗಳ ಅಲೈನ್​ವೆುಂಟ್ ಪ್ರಾಬ್ಲಮ್ ಎನ್ನಲಾಗುತ್ತದೆ. ಅಂದರೆ, ಈ ಟೂಲ್​ಗಳು ನೈತಿಕತೆ, ನಿಯಮ-ಕಾನೂನು ಅಥವಾ ಅಪಾಯಗಳ ಬಗ್ಗೆ ಯೋಚಿಸದೆ, ಕೇವಲ ಯಾವುದೇ ರೀತಿಯಲ್ಲಾದರೂ ತಮ್ಮ ಗುರಿಯನ್ನು ಮುಟ್ಟಲು ಬಯಸುತ್ತವೆ.

2. ಜೈವಿಕ ಅಸ್ತ್ರಗಳು: ಇತ್ತೀಚೆಗೆ ಸ್ಟಾ್ಯನ್​ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಎಐ ಮಾಡೆಲ್ ಬಳಸಿ 16 ಹೊಸ ವೈರಸ್​ಗಳನ್ನು ಸೃಷ್ಟಿಸಿದ್ದಾರೆ. ಎಐ ಮಾಡೆಲ್​ಗಳು ಇನ್ನೊಂದು ವರ್ಷದಲ್ಲಿ ಜೈವಿಕ ಅಸ್ತ್ರಗಳನ್ನು ತಯಾರಿಸುವಲ್ಲಿ ಪರಿಣಿತಿ ಸಾಧಿಸಲಿವೆ. ಅವು ನೂರಾರು ರೀತಿಯ ಜೈವಿಕ ಅಸ್ತ್ರಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ಏಕಕಾಲದಲ್ಲಿ ಹರಡಬಹುದು. ಎಐ ಪರಮಾಣು ನಿಯಂತ್ರಣ ವ್ಯವಸ್ಥೆಯನ್ನು ಹ್ಯಾಕ್ ಮಾಡಿ ದಾಳಿಯನ್ನು ಪ್ರಾರಂಭಿಸಬಹುದು ಅಥವಾ ಸೈನ್ಯಕ್ಕೆ ತಪ್ಪು ಮಾಹಿತಿ ನೀಡಿ ಯುದ್ಧವನ್ನು ಪ್ರಚೋದಿಸಬಹುದು.

3. ಮನುಷ್ಯರೂ ಅಪಾಯಕಾರಿ: ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆ ‘ದಿ ಕಾನ್ವರ್ಸೆಷನ್’ನ ಸಂಪಾದಕಿ ಟೋಬಿ ವಾಲ್ಷ್ ಹೇಳುವಂತೆ, ‘ಎಲ್ಲಕ್ಕಿಂತ ದೊಡ್ಡ ಅಪಾಯ ನಾವೇ ಆಗಿದ್ದೇವೆ’. ಎಐಬಳಕೆಯಿಂದಾಗಿ ಬೃಹತ್ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಬಹುದು, ತಪ್ಪು ಮಾಹಿತಿ ಹರಡಬಹುದು ಮತ್ತು ಮಾನವ ಸಂಬಂಧಗಳು ಹಾಳಾಗಬಹುದು’.