Cole Thomas Allen 
ವಿದೇಶ

ಟ್ರಂಪ್​ ಗುರಿಯಾಗಿಸಿ ಗುಂಡಿನ ದಾಳಿಗೆ ಯತ್ನಿಸಿದ್ದು ಒಬ್ಬ​​​ ಶಿಕ್ಷಕ; ಕೋಲ್ ಥಾಮಸ್ ಅಲೆನ್​​ ಬಂಧನ..Cole Thomas Allen

ಪ್ರಮುಖ ಮುಖ್ಯಾಂಶಗಳು

  • ಟ್ರಂಪ್​ ಮೇಲೆ ದಾಳಿ ಮಾಡಲು ಯತ್ನಿಸಿದ್ದು ಕೋಲ್ ಥಾಮಸ್ ಅಲೆನ್​ ಎಂದು ಪತ್ತೆ
  • ಹಿಲ್ಟನ್​ ಹೋಟೆಲ್​ನಲ್ಲೇ ಕೊಠಡಿ ಪಡೆದುಕೊಂಡಿದ್ದ ಕೋಲ್ ಥಾಮಸ್ ಅಲೆನ್
  • ಗುಂಡಿನ ದಾಳಿಗೆ ಕಾರಣ ಏನು ಎಂಬುದರ ತನಿಖೆ ಮುಂದುವರೆಸಿದ ಪೊಲೀಸರು
ವಾಷಿಂಗ್ಟನ್​: ಅಮೆರಿಕದ ಅಧ್ಯಕ್ಷ ಟ್ರಂಪ್​ ಮತ್ತು ಮೆಲಾನಿಯಾ ಭಾಗವಹಿಸಿದ್ದ ಹೈ ಪ್ರೊಫೈಲ್ ಭೋಜನಕೂಟದ ಹಾಲ್​ನ ಹೊರಗೆ ಗುಂಡಿನ ದಾಳಿ ನಡೆಸಿದ 31 ವರ್ಷದ ಕೋಲ್ ಥಾಮಸ್ ಅಲೆನ್​​ನ ಬಂಧಿಸಲಾಗಿದೆ. ಅರೆಬೆತ್ತಲೆಯಾಗಿಸಿ, ಆತನ ಕೈ ಮತ್ತು ಕಾಲನ್ನು ಬಿಗಿಯಾಗಿ ಕಟ್ಟಿ ನೆಲಕ್ಕೆ ಕೆಡವಿರುವ ವಿಡಿಯೋ, ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

ಏನಿದು ಘಟನೆ?

ವಾಷಿಂಗ್ಟನ್​ನ ಹಿಲ್ಟನ್​ ಹೋಟೆಲ್​ನಲ್ಲಿ ವೈಟ್​ ಹೌಸ್​ ಕರೆಸ್ಪಾಂಡೆಂಟ್ಸ್​​ ಡಿನ್ನರ್​ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಪತ್ನಿ ಮೆಲಾನಿಯಾ, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಆಗಮಿಸಿದ್ದರು. ರಾತ್ರಿ ಸುಮಾರು 9ರ ಹೊಟ್ಟಿಗೆ ಇಂಟರ್​ ನ್ಯಾಷನಲ್​ ಬಾಲ್​ರೂಂನಲ್ಲಿ ಅತಿಥಿಗಳು ಕುಳಿತು ಮಾತನಾಡುವ ವೇಳೆ ಹೋಟೆಲ್​ ಹೊರಭಾಗದಲ್ಲಿ ಸುಮಾರು ನಾಲ್ಕರಿಂದ ಎಂಟು ಬಾರಿ ಗುಂಡಿನ ಶಬ್ಧ ಕೇಳಿಬಂದಿದೆ.
ಆ ಕೂಡಲೇ ಸೀಕ್ರೇಟ್​​ ಏಜೆಂಟ್​ಗಳು ಅಧ್ಯಕ್ಷ ಟ್ರಂಪ್​ ಅವರ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಗುಂಡಿನ ಶಬ್ಧ ಕೇಳಿ ಹೆದರಿದ ಗಣ್ಯರು ಸೇರಿದಂತೆ ಪ್ರತ್ರಕರ್ತರು ಟೇಬಲ್​ ಕೆಳಗೆ ಅವಿತು ಕುಳಿತಿರುವ ವಿಡಿಯೋಗಳು ಹರಿದಾಡುತ್ತಿದೆ.

ಯಾರು ಈ ಶೂಟರ್?

ಇನ್ನು ದಾಳಿ ನಡೆಸಿದ 31 ವರ್ಷದ ಶೂಟರ್​ ಕೋಲ್ ಥಾಮಸ್ ಅಲೆನ್​ನನ್ನು ಕ್ಯಾಲಿಫೋರ್ನೊಯಾದ ಟೊರೆನ್ಸ್ ನಿವಾಸಿ ಎಂದು ಗುರುತಿಸಲಾಗಿದೆ. ಕೋಲ್​ ಅಲೆನ್​​​ ಕಾರ್ಯಕ್ರಮಕ್ಕೂ ಮುನ್ನವೇ ಹಿಲ್ಟನ್​​ ಹೋಟೆಲ್​ನಲ್ಲಿ ಕೊಠಡಿ ಪಡೆದುಕೊಂಡಿದ್ದನಂತೆ, ಹೀಗಾಗಿ ಆತ ಸುಲಭವಾಗಿ ಒಳಗೆ ಪ್ರವೇಶಿಸಲು ಸಾಧ್ಯಾಯಿತು.
ಲಿಂಕ್ಡಿನ್​ನಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ ಆತ ಮೆಕ್ಯಾನಿಕಲ್​ ಎಂಜಿನಿಯರ್​, ಕಂಪ್ಯೂಟರ್​ ಸೈನ್ಸ್​ನಲ್ಲಿ ಪದವಿ ಪಡೆದಿರುವ ಈತ ಗೇಮ್​ ಡೆವಲಪರ್​ನ ಎಂಡಿ ಹಾಗೂ ಲಾಸ್ ಏಂಜಲೀಸ್‌ನಲ್ಲಿ ಅರೆಕಾಲಿಕ ಶಿಕ್ಷಕನಾಗಿಯೂ ಕೆಲಸ ಮಾಡುತ್ತಿದ್ದನು. ಇಷ್ಟೇ ಅಲ್ಲದೆ, 2014ರಲ್ಲಿ ಕೋಲ್ ಅಲೆನ್​ ನಾಸಾದಲ್ಲಿಯು ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿನಲ್ಲಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.

ಎರಡು ಕೇಸ್ ದಾಖಲು

ಬಂದೂಕು ಬಳಸಿದ್ದಕಾಗಿ, ಅಪಾಯಕಾರಿ ಆಯುಧದೊಂದಿಗೆ ದಾಳಿ ನಡೆಸಿದ ಸಲುವಾಗಿ ಅಲೆನ್ ವಿರುದ್ಧ ಎರಡು ಕೇಸ್ ದಾಖಲಿಸಲಾಗುವುದು. ಸೋಮವಾರ ಕೋರ್ಟ್​ ಮುಂದೆ ಹಾಜರುಪಡಿಸಲಾಗುವುದು ಎಂದು ಕೊಲಂಬಿಯಾ ಜಿಲ್ಲೆಯ ಯುಎಸ್ ಅಟಾರ್ನಿ ಜೀನೈನ್ ಪಿರೊ ಮಾಹಿತಿ ಹಂಚಿಕೊಂಡಿದ್ದಾರೆ.
2,500 ಅತಿಥಿಗಳು ಭಾಗಿಯಾದ ಕಾರ್ಯಕ್ರಮಕ್ಕೆ ಅಲೆನ್​​ ನುಗ್ಗಲು ಯತ್ನಿಸಿದ್ದಾನೆ. ಭದ್ರತಾ ಸಿಬ್ಬಂದಿ ಆತನನ್ನು ತಡೆದರು, ಈ ವೇಳೆ ಆತ ತನ್ನ ಬಳಿ ಇದ್ದ ಗನ್ ಮೂಲಕ ದಾಳಿ ನಡೆಸಿದ್ದಾನೆ. ಅ ಲೆನ್ ಬಳಿ ಶಾಟ್​ ಮತ್ತು ಹ್ಯಾಂಡ್ ಗನ್​, ಚಾಕು ಇರುವುದು ಪತ್ತೆಯಾಗಿದೆ. ಈ ಗುಂಡಿನ ಚಕಮಕಿಯಲ್ಲಿ ಭದ್ರತಾ ಸಿಬ್ಬಂದಿಗೆ ಗುಂಡು ತಗಲಿದ್ದು, ಬುಲೆಟ್ ಪ್ರೂಫ್​ ಜಾಕೆಟ್​ ಧರಿಸಿದ್ದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ, (ಏಜೆನ್ಸೀಸ್).