Switzerland: ಹೊಸ ವರ್ಷದ ಹಿಂದಿನ ದಿನ ಸಂಭವಿಸಿದ ಭೀಕರ ಬೆಂಕಿಯಿಂದ ನಾಶವಾದ ಸ್ವಿಸ್ ಸ್ಕೀ ರೆಸಾರ್ಟ್ನ ಮಾಲೀಕರು ಎಲ್ಲಾ ಸುರಕ್ಷತಾ ನಿಯಮಗಳನ್ನು ನಾವು ಪಾಲಿಸಿದ್ದೇವೆ ಎಂದು ತಿಳಿಸಿದ್ದು, ತನಿಖಾಧಿಕಾರಿಗಳು ದುರಂತದ ಕಾರಣದ ತನಿಖೆ ಮುಂದುವರಿಸಿದ್ದಾರೆ.
ಕ್ರಾನ್ಸ್-ಮೊಂಟಾನಾದಲ್ಲಿ ತನ್ನ ಪತ್ನಿ ಜೆಸ್ಸಿಕಾ ಜೊತೆ ಲೆ ಕಾನ್ಸ್ಟೆಲೇಷನ್ ಬಾರ್ನ್ನು ನಡೆಸುತ್ತಿರುವ ಫ್ರೆಂಚ್ ಪ್ರಜೆ ಜಾಕ್ವೆಸ್ ಮೊರೆಟ್ಟಿ ಶುಕ್ರವಾರ(ಜ.2) ನಾವು ಸುರಕ್ಷತೆಯ ಎಲ್ಲಾ ನಿಯಮಗಳನ್ನು ಪಾಲಿಸಿದ್ದೇವು ಎಂದು ಹೇಳಿದ್ದಾರೆ. ಈ ದುರಂತದಿಂದ ನಾವು ತೀವ್ರ ಆಘಾತಕ್ಕೊಳಗಾಗಿದ್ದಾವೆ ನಮಗೆ ಸರಿಯಾಗಿ ನಿದ್ರೆ, ಊಟ ಮಾಡಲೂ ಸಹ ಆಗುತ್ತಿಲ್ಲ ಎಂದು ಹೇಳಿದ್ದು, ತನಿಖಾಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದಾವೆ ಎಂದು ಹೇಳಿದರು.
ಕಾರಣಗಳನ್ನು ಸ್ಪಷ್ಟಪಡಿಸಲು ನಾವು ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ. ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನಾವು ಎಲ್ಲವನ್ನೂ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬಾರ್‌ನ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಾಗಿನಿಂದ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗಿದೆಯೇ ಎಂಬ ಪ್ರಶ್ನೆ ಕೇಳಿಬರುತ್ತಿತ್ತು. ಶುಕ್ರವಾರ ಬಿಡುಗಡೆಯಾದ ಪೊಲೀಸ್ ಅಂಕಿಅಂಶಗಳ ಪ್ರಕಾರ, ಬೆಂಕಿಯಲ್ಲಿ 40 ಜನರು ಸಾವನ್ನಪ್ಪಿದ್ದು, 119 ಜನರು ಗಾಯಗೊಂಡಿದ್ದಾರೆ.
ಬಾರ್‌ನ ವ್ಯವಸ್ಥಾಪಕರು ಯಾವುದೇ ಹಾನಿಯಾಗದಂತೆ ಪಾರಾಗಿದ್ದಾರೆ ಮತ್ತು ಪ್ರಸ್ತುತ ಸಾಕ್ಷಿಗಳಾಗಿ ಪ್ರಶ್ನಿಸಲ್ಪಡುತ್ತಿದ್ದಾರೆ. ಈ ಹಂತದಲ್ಲಿ ಯಾವುದೇ ಹೊಣೆಗಾರಿಕೆಯನ್ನು ಸ್ಥಾಪಿಸಲಾಗಿಲ್ಲ. ತನಿಖಾಧಿಕಾರಿಗಳು ಸ್ಥಳದ ವಿನ್ಯಾಸ, ಇತ್ತೀಚಿನ ನವೀಕರಣಗಳ ವಿವರಗಳು, ಅದರ ಅನುಮತಿಸಲಾದ ಸಾಮರ್ಥ್ಯ ಮತ್ತು ನೆಲಮಾಳಿಗೆಯಲ್ಲಿ ಬಳಸಲಾದ ಧ್ವನಿ ನಿರೋಧಕ ಫೋಮ್ ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ,(ಏಜನ್ಸೀಸ್).