ಸಾಂದರ್ಭಿಕ ಚಿತ್ರ 
ವಿದೇಶ

ಹಾರ್ಮೊಜ್‌ ಮೇಲೆ ಟ್ರಂಪ್ ಕಣ್ಣು? ಇರಾನ್‌ ತಿರುಗೇಟು | Iran hits back at Trump

ಪ್ರಮುಖ ಮುಖ್ಯಾಂಶಗಳು

  • ಹಾರ್ಮೊಜ್‌ ಕುರಿತ ಟ್ರಂಪ್‌ ಹೇಳಿಕೆಗೆ ಇರಾನ್ ತಿರುಗೇಟು
  • ಈ ಜಲಸಂಧಿ ಇರಾನ್‌ಗೆ ಸೇರಿದ್ದು ಎಂದ ಕಾಜೆಮ್ ಘರೀಬಾಬಾದಿ
  • ಹಾರ್ಮೊಜ್‌ ತೆರೆಯುವುದು ನಮ್ಮ ನಿರ್ಧಾರ, ಇರಾನ್‌ ವಾರ್ನ್​
Hormuz: ಹಾರ್ಮೊಜ್‌ ಜಲಸಂಧಿಯನ್ನು ಶೀಘ್ರದಲ್ಲೇ ಅಮೆರಿಕದ ಪ್ರದೇಶ ಎಂದು ಘೋಷಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಇರಾನ್ ಖಡಕ್ ತಿರುಗೇಟು ನೀಡಿದೆ.
ಇರಾನ್‌ನ ಉಪ ವಿದೇಶಾಂಗ ಸಚಿವ ಕಾಜೆಮ್ ಘರೀಬಾಬಾದಿ, ‘ಹಾರ್ಮೊಜ್‌ ಜಲಸಂಧಿ ಇರಾನ್‌ಗೆ ಸೇರಿದ್ದು, ಮುಂದೆಯೂ ಇರಾನ್‌ದ್ದೇ ಆಗಿರುತ್ತದೆ’ ಎಂದು ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಇರಾನ್​, ‘ಒಂದು ಟ್ವೀಟ್‌ನಿಂದ ಅಥವಾ ವಾರ್ನ್ ಮಾಡುವುದರಿಂದ ಹಾರ್ಮುಜ್ ಜಲಸಂಧಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಹಾರ್ಮೊಜ್‌ ಯಾವಾಗ ತೆರೆಯಬೇಕು, ಯಾವಾಗ ಮುಚ್ಚಬೇಕು ಅನ್ನೋದನ್ನು ನಾವು ನಿರ್ಧರಿಸುತ್ತೇವೆ’ ಎಂದು ಟಾಂಗ್​ ಕೊಟ್ಟಿದ್ದಾರೆ.

ಹಾರ್ಮೊಜ್‌ ಅಮೆರಿಕದ ಭಾಗ

ಇದಕ್ಕೂ ಮುನ್ನ ಟ್ರಂಪ್, ಇರಾನ್ ಯುದ್ಧದಲ್ಲಿ ಅಮೆರಿಕ ಗೆಲುವು ಸಾಧಿಸಿದ ಬಳಿಕ ಹಾರ್ಮೊಜ್‌ ಜಲಸಂಧಿಯನ್ನು ಅಮೆರಿಕದ ಭಾಗವೆಂದು ಘೋಷಿಸುವುದಾಗಿ ಹೇಳಿದ್ದರು. ಜಾಗತಿಕ ತೈಲ ಸಾಗಣೆಯಲ್ಲಿ ಹಾರ್ಮೊಜ್‌ ಜಲಸಂಧಿ ಅತ್ಯಂತ ಪ್ರಮುಖ ಮಾರ್ಗವಾಗಿದೆ. ಟ್ರಂಪ್ ಹೇಳಿಕೆ ಬಳಿಕ ಶ್ವೇತಭವನದ ಅಧಿಕಾರಿಯೊಬ್ಬರು, ಅವರು ಈ ಮಾತನ್ನು ತಮಾಷೆಯಾಗಿ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ.

ಹಾರ್ಮೊಜ್‌ ಇರಾನ್‌ನ ವಶದಲ್ಲಿದೆ

ಇದೇ ವೇಳೆ, ಇರಾನ್ ಸೇನೆಯ ವಕ್ತಾರರು, ಹಾರ್ಮೊಜ್‌ ಜಲಸಂಧಿ ಸಂಪೂರ್ಣವಾಗಿ ಇರಾನ್‌ನ ನಿಯಂತ್ರಣದಲ್ಲಿದೆ. ಅನುಮತಿ ಇಲ್ಲದೆ ಯಾವುದೇ ಹಡಗು ಅಥವಾ ತೈಲ ಟ್ಯಾಂಕರ್ ಸುರಕ್ಷಿತವಾಗಿ ಹೋಗಲು ಸಾಧ್ಯವಿಲ್ಲ ಎಂದೂ ತಿಳಿಸಿದ್ದಾರೆ ಎಚ್ಚರಿಕೆ ನೀಡಿದ್ದಾರೆ. ಇನ್ನೊಂದೆಡೆ ಹಾರ್ಮೊಜ್‌ ವಿಚಾರದಲ್ಲಿ ಅಮೆರಿಕ ದೊಡ್ಡ ತಪ್ಪು ಮಾಡುತ್ತಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಕೂಡ ಟೀಕಿಸಿದ್ದಾರೆ,(ಏಜೆನ್ಸೀಸ್​).