ಲಾಸ್ ಏಂಜಲೀಸ್: ( catherine ohara) ಖ್ಯಾತ ಹಾಲಿವುಡ್ ನಟಿ ಮತ್ತು ಎಮ್ಮಿ ಪ್ರಶಸ್ತಿ ವಿಜೇತೆ ಕ್ಯಾಥರೀನ್ ಒ'ಹಾರಾ (71) ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಗಳಿಂದಾಗಿ ಅವರು ಲಾಸ್ ಏಂಜಲೀಸ್‌ನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಹಾಲಿವುಡ್ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಿಂದ ಗಮನಾರ್ಹರಾದ ನಟಿ ಕ್ಯಾಥರೀನ್ 'ಹೋಮ್ ಅಲೋನ್' ಸರಣಿಯಲ್ಲಿ ತಾಯಿಯ ಪಾತ್ರ ಮತ್ತು 'ಶಿಟ್ಸ್ ಕ್ರೀಕ್' ಸರಣಿಯಲ್ಲಿ ಮೊಯಿರಾ ರೋಸ್ ಪಾತ್ರಕ್ಕಾಗಿ ಅವರು ಜಾಗತಿಕ ಗಮನ ಸೆಳೆದಿದ್ದಾರೆ.
1976-84ರ ಅವಧಿಯಲ್ಲಿ ಟೊರೊಂಟೊದಲ್ಲಿ ನಡೆದ ಸ್ಕೆಚ್ ಹಾಸ್ಯ ಸರಣಿ ಸೆಕೆಂಡ್ ಸಿಟಿ ಟೆಲಿವಿಷನ್‌ನಲ್ಲಿ ತಮ್ಮ ನಟನೆಗೆ ಪಾದಾರ್ಪಣೆ ಮಾಡಿದರು.
1990 ರ ಚಲನಚಿತ್ರ 'ಹೋಮ್ ಅಲೋನ್' ನಲ್ಲಿ ಮೆಕಾಲೆ ಕಲ್ಕಿನ್ ಪಾತ್ರ ಕೆವಿನ್ ನ ತಾಯಿಯಾಗಿ ಕ್ಯಾಥರೀನ್ ಅವರ ಅಭಿನಯವು ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿತು. ಅವರು ಎಮ್ಮಿ ಪ್ರಶಸ್ತಿ ಮತ್ತು ಅತ್ಯುತ್ತಮ ನಟಿಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ.
ಹಾಸ್ಯದಲ್ಲಿ ವಿಶಿಷ್ಟ ಶೈಲಿಯನ್ನು ಅನುಸರಿಸಿದರು ಮತ್ತು ಕೆನಡಿಯನ್-ಅಮೇರಿಕನ್ ಚಲನಚಿತ್ರ ಜಗತ್ತಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಪತಿ ಪ್ರಸಿದ್ಧ ನಿರ್ಮಾಣ ವಿನ್ಯಾಸಕ ಬೊ ವೆಲ್ಷ್. ಮ್ಯಾಥ್ಯೂ ಮತ್ತು ಲ್ಯೂಕ್ ಅವರ ಪುತ್ರರು.