ಇರಾನ್ ವಿರುದ್ಧ ಬೇಹುಗಾರಿಕೆ ನಡೆಸುತ್ತಿದ್ದ 30 ಜನರ ಬಂಧನ  
ವಿದೇಶ

ಇಸ್ರೇಲ್ ಪರ ಗೂಢಚರ್ಯೆ: ಇರಾನ್‌ನಲ್ಲಿ 30 ಮಂದಿ ಅರೆಸ್ಟ್; ಯುದ್ಧದ ನಡುವೆ ಶುರುವಾದ ಬೇಹುಗಾರರ ಬೇಟೆ! Spies Arrest

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಸಂಘರ್ಷ
  • ಇರಾನ್ ವಿರುದ್ಧ ಬೇಹುಗಾರಿಕೆ ನಡೆಸುತ್ತಿದ್ದ 20 ಜನರ ಬಂಧನ
  • ಇಸ್ರೇಲ್​ಗೆ ಮಾಹಿತಿ ತಲುಪಿಸುತ್ತಿದ್ದಾಗಿ ಶಂಕೆ
ಟೆಹ್ರಾನ್​: ಮಧ್ಯಪ್ರಾಚ್ಯದಲ್ಲಿ ಇರಾನ್​ ಹಾಗೂ ಅಮೆರಿಕ ಮತ್ತು ಇಸ್ರೇಲ್​ ನಡುವೆ ಸಂಘರ್ಷ ಆರಂಭವಾಗಿ ಹೆಚ್ಚು ಕಡಿಮೆ ಅರ್ಧ ತಿಂಗಳು ಕಳೆದಿದ್ದು, ಸದ್ಯ ಈ ಯುದ್ಧ ಕೊನೆಗಾಣುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಇಂದು (ಭಾನುವಾರ,ಮಾ.15) ಇರಾನ್​ ಬಗ್ಗೆ ಇಸ್ರೇಲ್​ಗೆ ಮಾಹಿತಿ ನೀಡುತ್ತಿದ್ದ ಶಂಕೆಯ ಮೇರೆಗೆ ಸುಮಾರು 30 ಜನ ಗೂಢಾಚಾರರನ್ನು (Spies Arrest) ಬಂಧಿಸಿರುವುದಾಗಿ ಇರಾನಿನ ಮಾಧ್ಯಮಗಳು ವರದಿ ಮಾಡಿವೆ.
ವರದಿ ಪ್ರಕಾರ, ಶಂಕಿತರು ಇರಾನಿನ ಭದ್ರತೆ ಹಾಗೂ ಮಿಲಿಟರಿ ಸಂಬಂಧಿತ ಮಾಹಿತಿಗಳನ್ನು ಶತ್ರು ದೇಶಕ್ಕೆ ರವಾನಿಸುತ್ತಿದ್ದರೆಂದು ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್​ ಈ ಮೊದಲು ಸಹ ತನ್ನ ದೇಶದ ನಿಗೂಢ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದವರನ್ನು ಬಂಧಿಸಿರುವ ಬಗ್ಗೆ ಸರ್ಕಾರ ಹೇಳಿಕೊಂಡಿದೆ, ಆದರೆ ಸಾರ್ವಜನಿಕವಾಗಿ ಪುರಾವೆಗಳನ್ನು ಇಲ್ಲಿವರೆಗೆ ಬಿಡುಗಡೆಮಾಡಿಲ್ಲ.
ಇರಾನ್​ ಮೇಲೆ ಇಸ್ರೇಲ್​ ಮತ್ತೊಮ್ಮೆ ದಾಳಿ ಮಾಡಿದ ತರುವಾಯ ಈ ಬಂಧನ ನಡೆದಿದ್ದು, ಬಂಧನಕ್ಕೂ ಮೊದಲು ನಡೆದಿದ್ದ ದಾಳಿಗೆ ಈ ಜನರೇ ಮಾಹಿತಿ ನೀಡಿದ್ದಾರೆ ಎಂಬ ಅನುಮಾನ ಇದೆ ಎಂದು ಇರಾನಿನ ಅಧಿಕಾರಿಗಳು ನಂಬಿದ್ದಾರೆ ಎಂದು ಹೇಳಲಾಗುತ್ತಿದೆ.
ಇರಾನ್​ ಮೇಲೆ ನಡೆಯುತ್ತಿರುವ ದಾಳಿಯಲ್ಲಿ ನಾವು ಯಾವುದೇ ಸಾರ್ವಜನಿಕರನ್ನು ಗುರಿಯಾಗಿಸಿಲ್ಲ. ನಾವು ಕೇವಲ ಇರಾನಿನಲ್ಲಿ ನಡೆದಿದ್ದ ಪ್ರತ್ರಿಭಟನೆಗೆ ಯಾರು ತೊಂದರೆ ಮಾಡಿದ್ದರೊ ಅವರನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದೆವೆ ಎಂದು ಅಮೆರಿಕ ಮತ್ತು ಇಸ್ರೇಲ್​ ಮಾಧ್ಯಮ ಹೇಳಿಕೆ ನೀಡಿವೆ.

ನಾನಂತೂ ಖುಷಿಯಾಗಿಲ್ಲ: ಟ್ರಂಪ್ ಗುಡುಗು

ಈ ಬಗ್ಗೆ ಫಾಕ್ಸ್ ನ್ಯೂಸ್ ವಾಹಿನಿಯೊಂದಿಗೆ ಮಾತನಾಡಿದ ಅಧ್ಯಕ್ಷ ಟ್ರಂಪ್, ಮೊಜ್ತಾಬಾ ಖಮೇನಿಯವರ ನೇಮಕದ ಬಗ್ಗೆ ನೇರವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ನಾನು ಈ ನಿರ್ಧಾರದಿಂದ ಸಂತೋಷವಾಗಿಲ್ಲ ಎಂದು ಹೇಳುವ ಮೂಲಕ, ಇರಾನ್‌ನ ಆಂತರಿಕ ನಿರ್ಧಾರಗಳ ಮೇಲೆ ಅಮೆರಿಕದ ಪ್ರಭಾವ ಇರಲಿದೆ ಎಂಬ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮತ್ತೊಂದು ಬಾಂಬ್ ಸಿಡಿಸಿರುವ ಟ್ರಂಪ್, ಇರಾನ್‌ನ ನೂತನ ನಾಯಕನಿಗೆ ನಮ್ಮ ಅನುಮೋದನೆ ಬೇಕೇ ಬೇಕು ಎಂದು ಹಠ ಹಿಡಿದಿದ್ದಾರೆ.

ಇಸ್ರೇಲ್ ಜೊತೆ ಚರ್ಚಿಸಿ ಮುಂದಿನ ತೀರ್ಮಾನ

ಯುದ್ಧ ನಿಲ್ಲಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ನಾನು ಮತ್ತು ಬೆಂಜಮಿನ್ ನೆತನ್ಯಾಹು ಇಲ್ಲದಿದ್ದರೆ ಇರಾನ್ ಇಷ್ಟೊತ್ತಿಗಾಗಲೇ ಇಸ್ರೇಲ್ ಅನ್ನು ನಾಶಪಡಿಸುತ್ತಿತ್ತು ಎಂದು ಹೇಳಿದ್ದಾರೆ.
ಇರಾನ್ ಮೇಲಿನ ಯುದ್ಧವನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ಚರ್ಚಿಸಿದ ನಂತರವೇ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಸರಿಯಾದ ಸಮಯದಲ್ಲಿ ನಾವು ನಿರ್ಧಾರ ಕೈಗೊಳ್ಳುತ್ತೇವೆ, ಪ್ರತಿಯೊಂದು ಅಂಶವನ್ನೂ ನಾವು ಗಮನಿಸುತ್ತಿದ್ದೇವೆ ಎಂದು ಟ್ರಂಪ್ ತಿಳಿಸಿದ್ದಾರೆ,(ಏಜನ್ಸೀಸ್​).