- ವರ್ಷಪೂರ್ತಿ ಕಷ್ಟಪಟ್ಟು ದುಡಿದರೂ ಕೆಲವೊಮ್ಮೆ ಹತ್ತು ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇರಲ್ಲ
- ಸಂಸಾರವೆಂಬ ಬಂಡಿಯನ್ನು ಸಾಗಿಸಲು ಕೆಲವರು ತಮ್ಮ ಜೀವನವನ್ನೇ ಮುಡಿಪಾಗಿ ಇಡುತ್ತಾರೆ
- ಇಲ್ಲೊಬ್ಬ ಯುವತಿ ಕೆಲಸ ಅಥವಾ ಬಿಜಿನೆಸ್ ಮಾಡದೆ ಕೇವಲ 3 ವರ್ಷಗಳಲ್ಲಿ 900 ಕೋಟಿ ಗಳಿಸಿದ್ದಾಳೆ
Sophie Rain : ವರ್ಷಪೂರ್ತಿ ಕಷ್ಟಪಟ್ಟು, ಬೆವರು ಹರಿಸಿ ದುಡಿದರು ಕೂಡ ಹತ್ತು ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇಟ್ಟುಕೊಳ್ಳದ ಅನೇಕ ಜನರಿದ್ದಾರೆ. ಎಷ್ಟೇ ಸಂಪಾದಿಸಿದರೂ ಅದು ಕೈಯಲ್ಲೇ ಉಳಿಯುವುದೇ ಇಲ್ಲ. ಎಲ್ಲವೂ ಖರ್ಚಾಗಿ ಬಿಡುತ್ತದೆ. ಹೀಗಾಗಿ, ಇಂದು ಬಹುತೇಕರ ಚಿಂತೆ ಹಣ ಉಳಿತಾಯವೇ ಆಗಿದೆ. ಸಂಸಾರವೆಂಬ ಬಂಡಿಯನ್ನು ಸಾಗಿಸಲು ತಮ್ಮ ಜೀವನವನ್ನೇ ಮುಡಿಪಾಗಿ ಇಡುತ್ತಾರೆ. ಹೀಗಿರುವಾಗ ಇಲ್ಲೊಬ್ಬ ಯುವತಿ, ಯಾವುದೇ ಕೆಲಸ ಅಥವಾ ಬಿಜಿನೆಸ್ ಮಾಡದೆ ಕೇವಲ ಮೂರು ವರ್ಷಗಳಲ್ಲಿ 900 ಕೋಟಿ ರೂ. ಗಳಿಸಿದ್ದಾಳೆ. ಇದನ್ನು ಕೇಳಲು ನಿಮ ಆಶ್ಚರ್ಯ ಎನಿಸಬಹುದು. ಆದರೆ, ಇದೇ ಸತ್ಯ. ಅಷ್ಟಕ್ಕೂ ಈ ಯುವತಿ ಅದು ಹೇಗೆ ಹಣ ಸಂಪಾದನೆ ಮಾಡಿದಳು ಎಂದು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದ್ದರೆ ಈ ಸುದ್ದಿಯನ್ನು ಪೂರ್ತಿ ಓದಿ.
ಆಕೆಯ ಹೆಸರು ಸೋಫಿಯಾ ರೈನ್. 18 ವರ್ಷ ತುಂಬಿದಾಗಲೇ ತನ್ನ ವೃತ್ತಿ ಜೀವನದ ಮೇಲೆ ಈಕೆ ಗಮನ ಹರಿಸಿದಳು. ಅದರಲ್ಲೂ ಸುಲಭವಾಗಿ ಹಣ ಗಳಿಸುವ ಮಾರ್ಗಗಳನ್ನು ಹುಡುಕಿಕೊಂಡಳು. ಆಗ ಅವಳಿಗೆ 'ಓನ್ಲಿಫ್ಯಾನ್ಸ್' ಅಕೌಂಟ್ ಬಗ್ಗೆ ತಿಳಿಯಿತು. ತಕ್ಷಣ ಆಕೆ ಒಂದು ಅಕೌಂಟ್ ತೆರೆದಳು. ಆರಂಭದಲ್ಲಿ, ಆ ಅಕೌಂಟ್ನಲ್ಲಿ ತನ್ನ ಮೇಕಪ್, ವ್ಯಾಯಾಮ, ಡ್ರೆಸ್ಸಿಂಗ್ ಮತ್ತು ಮಾಡೆಲಿಂಗ್‌ನಂತಹ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಳು. ತನ್ನ ಸಾಂಪ್ರದಾಯಿಕ ಮತ್ತು ಮಾದಕ ಶೈಲಿಯ ಫೋಟೋ ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಳು. ಆದರೆ, ಆ ಅಕೌಂಟ್ಗೆ ಹೆಚ್ಚು ಸಬ್ಸ್ಕ್ರೈಬರ್ಸ್ ಬರಲಿಲ್ಲ. ಇದರಿಂದ, ಆಕೆ ಪ್ಲಾನ್ ಬಿ ಅನ್ನು ಕಾರ್ಯಗತಗೊಳಿಸಿದಳು.
ಏನದು ಪ್ಲಾನ್ ಬಿ?
ಆ ಪ್ಲಾನ್ ಬಿ ಏನೆಂದರೆ, ಅಶ್ಲೀಲತೆಯನ್ನು ಪ್ರದರ್ಶಿಸಲು ಶುರು ಮಾಡಿದಳು. ಇದರಿಂದ, ಸಬ್ಸ್ಕ್ರೈಬರ್ಸ್ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು. ಆಕೆಯನ್ನು ಬೆತ್ತಲೆಯಾಗಿ ನೋಡಲು ಅನೇಕ ಜನರು ಆಕೆಯ ಅಕೌಂಟ್ಗೆ ಮುಗಿ ಬೀಳುತ್ತಿದ್ದರು. ಇದರೊಂದಿಗೆ, ಆಕೆ ರಾತ್ರೋರಾತ್ರಿ ಕೋಟ್ಯಾಧಿಪತಿಯಾದಳು. ತನ್ನ ಸಂಪಾದನೆಯ ಹಿಂದೆ ಅಶ್ಲೀಲತೆ ಇದೆ ಅನ್ನೋದು ಆಕೆಗೆ ಚೆನ್ನಾಗಿ ಗೊತ್ತಿದೆ. ಆದರೆ, ಆಕೆ ಮಾತ್ರ ಅದನ್ನು ಒಪ್ಪಲು ತಯಾರಿಲ್ಲ. ತನ್ನ ಮೂರು ವರ್ಷಗಳ ಕಠಿಣ ಪರಿಶ್ರಮದಿಂದ ಇಷ್ಟೊಂದು ಸಂಪಾದನೆ ಮಾಡಿದ್ದೇನೆ ಎಂದು ಹುಚ್ಚು ಸಮರ್ಥನೆ ಮಾಡಿಕೊಳ್ಳುತ್ತಾಳೆ. ಇತ್ತೀಚೆಗೆ, ತನ್ನ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುವಾಗಲೂ ಇದೇ ಮಾತನ್ನು ಹಾಡಿದ್ದಾಳೆ.
912 ಕೋಟಿ ರೂಪಾಯಿ
ನಾನು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಲಿಲ್ಲ, ಕಳೆದ ಮೂರು ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ ಈ ಆದಾಯ ಗಳಿಸಿದ್ದೇನೆ ಎಂದು ಸೋಫಿಯಾ ಹೇಳಿದ್ದಾಳೆ. ಅಲ್ಲದೇ, ಇದೇ ಸಂದರ್ಭದಲ್ಲಿ, ಆಕೆ ತಮ್ಮ 'ಓನ್ಲಿಫ್ಯಾನ್ಸ್' ವೆಬ್‌ಸೈಟ್ ಖಾತೆಯನ್ನು ಸಹ ತೋರಿಸಿದಳು. ಅದರಲ್ಲಿ, ಆಕೆಯ ಆದಾಯ 100 ಮಿಲಿಯನ್ ಡಾಲರ್. ಅಂದರೆ, ಪ್ರಸ್ತುತ ಭಾರತೀಯ ಕರೆನ್ಸಿಯ ಪ್ರಕಾರ ಸರಿಸುಮಾರು 912 ಕೋಟಿ ರೂಪಾಯಿ.
ಅಂದಹಾಗೆ, ಸೋಫಿಯಾಗೆ ಪ್ರಸ್ತುತ 21 ವರ್ಷ. ಆಕೆ 2022 ರಿಂದ ಓನ್ಲಿಫ್ಯಾನ್ಸ್‌ನಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದಳು. ಖಾಸಗಿ ವಿಡಿಯೋಗಳು ಮತ್ತು ಫೋಟೋಗಳನ್ನು ತನ್ನ ಚಂದಾದಾರರಿಗೆ ಕಳುಹಿಸುವ ಮೂಲಕ ಆಕೆ ಹಣ ಗಳಿಸುತ್ತಿದ್ದಾಳೆ. ಕೇವಲ ಚಂದಾದಾರಿಕೆಗಳಿಂದಲೇ ತಿಂಗಳಿಗೆ 11 ಕೋಟಿ ರೂ. ಗಳಿಸುತ್ತಿದ್ದಾಳೆ ಎಂದು ವರದಿಯಾಗಿದೆ.
ನಾನು ಇಂದಿಗೂ ವರ್ಜಿನ್
ಸೋಫಿಯಾಗೆ ಒಂದೇ ಒಂದು ವಿಷಯ ಮಾತ್ರ ಖಚಿತವಾಗಿದೆ. ಅದೇನೆಂದರೆ, ಆಕೆ ಇಲ್ಲಿಯವರೆಗೆ ತನ್ನ ಓನ್ಲಿ ಫ್ಯಾನ್ಸ್ ಖಾತೆಯಲ್ಲಿ ಒಂದೇ ಒಂದು ಇಂಟಿಮೇಟ್ ವಿಡಿಯೋ ಪೋಸ್ಟ್ ಮಾಡಿಲ್ಲ. ಆಕೆ ತನ್ನ ಆತ್ಮತೃಪ್ತಿಯ ವಿಡಿಯೋಗಳನ್ನು ಮಾತ್ರ ಪೋಸ್ಟ್ ಮಾಡುತ್ತಾಳೆ. ಅವುಗಳನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ. ತನ್ನ ವಿಡಿಯೋದಲ್ಲಿ ಆಕೆ ಯಾರನ್ನೂ ಪಾರ್ಟ್ನರ್ ಆಗಿ ಸೇರಿಸಿಕೊಂಡಿಲ್ಲ. ಆಕೆ ತನ್ನ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಹಣ ಗಳಿಸುತ್ತಿದ್ದಾಳೆ. ಇಂತಹ ವಿಡಿಯೋಗಳನ್ನು ಮಾಡುವ ಯಾವುದೇ ಹುಡುಗಿ ಖಂಡಿತವಾಗಿಯೂ ಕನ್ಯೆಯಲ್ಲ ಎಂದು ಜನರು ಭಾವಿಸುತ್ತಾರೆ. ಆದರೆ, ಆಕೆ ಮಾತ್ರ ನಾನು ಇಂದಿಗೂ ವರ್ಜಿನ್ ಎಂದು ಹೇಳಿಕೊಳ್ಳುತ್ತಿದ್ದಾಳೆ.
ನನ್ನನ್ನು ಅನುಸರಿಸಬೇಡಿ
ನನ್ನ ಆದಾಯವನ್ನು ನೋಡಿ ಅನೇಕ ಜನರು ನನ್ನಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ. ನನ್ನಂತೆಯೇ ಸಂಪಾದನೆ ಮಾಡಲು ಓನ್ಲಿಫ್ಯಾನ್ಸ್‌ಗೆ ಸೇರುತ್ತಿದ್ದಾರೆ. ಅಂತಹವರಿಗೆ ನಾನು ನೀಡುವ ಒಂದೇ ಒಂದು ಸಲಹೆ ಏನೆಂದರೆ, ಎಲ್ಲರೂ ಭಾವಿಸುವಂತೆ ಇದು ಸುಲಭದ ಕೆಲಸವಲ್ಲ. ಎಲ್ಲರೂ ನನ್ನಂತೆ ಸಂಪಾದಿಸಲು ಸಾಧ್ಯವಿಲ್ಲ. ಕೆಲವರು 11 ಸಾವಿರ ರೂ.ಗಿಂತ ಹೆಚ್ಚು ಗಳಿಸುವುದಿಲ್ಲ. ಅದೃಷ್ಟವಂತರಾಗಿದ್ದರೆ ಮಾತ್ರ ನಾವು ಇದರಲ್ಲಿ ಹಣ ಗಳಿಸಬಹುದು. ಅಲ್ಲದೆ, ಇದರಲ್ಲಿ ನಾವು ಅನೇಕ ರೀತಿಯ ಕಿರುಕುಳಗಳನ್ನು ಎದುರಿಸಬೇಕಾಗುತ್ತದೆ. ಸಮಾಜವು ನಮ್ಮನ್ನು ಕೆಟ್ಟ ಜನರೆಂದು ನಿರ್ಣಯಿಸುತ್ತದೆ. ಇದೆಲ್ಲವನ್ನೂ ಸಹಿಸಿಕೊಳ್ಳುವುದು ತುಂಬಾ ಕಷ್ಟ. ಯಾರೂ ಅಂತಹ ಮಾರ್ಗವನ್ನು ಆರಿಸಬಾರದು ಎಂದು ಸೋಫಿಯಾ ಹೇಳಿದ್ದಾರೆ. ಆಕೆ ಹೇಳಿದ್ದು ಕೂಡ ನಿಜವೇ, ಯಾರೂ ಆಕೆಯನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳದಿರುವುದು ಉತ್ತಮ.
ಏನಿದು ಓನ್ಲಿಫ್ಯಾನ್ಸ್?
ನಾವು ಪ್ರಸ್ತುತ ಬಳಸುತ್ತಿರುವ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಂತೆಯೇ ಓನ್ಲಿಫ್ಯಾನ್ಸ್ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ನಾವು ಬಳಸುವ ಸಾಮಾಜಿಕ ಜಾಲತಾಣದಲ್ಲಿ ನಗ್ನತೆಗೆ ಅವಕಾಶವಿಲ್ಲ. ಆದರೆ, ಓನ್ಲಿಫ್ಯಾನ್ಸ್‌ನಲ್ಲಿ ಅಂತಹ ಯಾವುದೇ ಅಡೆತಡೆಗಳಿಲ್ಲ. ಖಾತೆ ಹೊಂದಿರುವವರು ಏನು ಬೇಕಾದರೂ ಮಾಡಬಹುದು. ಅವರು ಏನು ಬೇಕಾದರೂ ತೋರಿಸಬಹುದು. ಅದು ಅವರಿಗೆ ಆದಾಯ ಗಳಿಸುವಂತೆ ಮಾಡುತ್ತದೆ. ಅವರು ಚಂದಾದಾರರ ಮೂಲಕ ಆದಾಯ ಗಳಿಸುತ್ತಾರೆ, (ಏಜೆನ್ಸೀಸ್).