ಮೆಲ್ಬೋರ್ನ್: ಆಸ್ಟ್ರೇಲಿಯಾ ಮಕ್ಕಳು ಸಾಮಾಜಿಕ ಮಾಧ್ಯಮ ಬಳಸುವ ಮೇಲೆ ನಿಷೇಧ ಹೇರುವ ಜಗತ್ತಿನ ಪ್ರಪ್ರಥಮ ದೇಶವಾಗಲಿದ್ದು ಬುಧವಾರ ಈ ನಿಯಮ ಜಾರಿಗೆ ಬರಲಿದೆ.
ಈ ನಿಯಮದಿಂದಾಗಿ ದೂರ ಪ್ರದೇಶಗಳಲ್ಲಿರುವ ಸಂಬಂಧಿಕರು ಹಾಗೂ ಗೆಳೆಯರೊಂದಿಗೆ ಹೇಗೆ ಸಂಪರ್ಕ ಇಟ್ಟುಕೊಳ್ಳುವುದೆಂದು 15 ವರ್ಷದ ಶಾಲಾ ಬಾಲಕ ರಿಲೇ ಅಲೆನ್ ಚಿಂತೆಗೀಡಾಗಿದ್ದಾನೆ. ತನ್ನ ಮಗ ಈ ನಿಷೇಧವನ್ನು ಉಲ್ಲಂಘಿಸಲು ಅವಕಾಶ ನೀಡುವುದಿಲ್ಲವೆಂದು ಶಾಲಾ ಶಿಕ್ಷಕಿಯಾಗಿರುವ ಅಲೆನ್ ತಾಯಿ ಸೋನಿಯಾ ಅಲೆನ್ ಹೇಳಿದ್ದಾಳೆ. ಸಿಡ್ನಿಯ ಶಾಲಾ ಬಾಲಕ ನೋಹ್ ಜೋನ್ಸ್ ಸಹಿತ ಹಲವು ಮಕ್ಕಳು ಸರ್ಕಾರದ ನಿಷೇಧ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಹೈ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.