ಫಿಫಾ ವಿಶ್ವಕಪ್ ಫೈನಲ್​​ 2026 
ವಿದೇಶ

ಫಿಫಾ ವಿಶ್ವಕಪ್ ಫೈನಲ್​ ಪಂದ್ಯಕ್ಕೆ ಡೊನಾಲ್ಡ್ ಟ್ರಂಪ್​; ಅರ್ಜೆಂಟೀನಾಗೆ ಮಗ್ಗುಲ ಮುಳ್ಳಾದ ಮ್ಯಾಚ್​ ರೆಫರಿ

ಪ್ರಮುಖ ಮುಖ್ಯಾಂಶಗಳು

  • ಮೆಟ್​ಲೈಫ್​ ಕ್ರೀಡಾಂಗಣದಲ್ಲಿ ಫಿಫಾ ವಿಶ್ವಕಪ್ 2026ರ ಫೈನಲ್
  • ಅಂತಿಮ ಹಣಾಹಣಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಟ್ರಿ
  • ಪಂದ್ಯದ ರೆಫರಿಯಾಗಿ ಸ್ಲೋವನ್ ವಿನ್ಸಿಚ್, ಅರ್ಜೆಂಟೀನಾಗೆ ಶುರುವಾಯಿತು ಹೊಸ ತಲೆಬಿಸಿ
FIFA WC Final: ಜಾಗತಿಕ ಫುಟ್ಬಾಲ್ ಅಭಿಮಾನಿಗಳು ಫಿಫಾ ವಿಶ್ವಕಪ್ ಫೈನಲ್ ಪಂದ್ಯಕ್ಕಾಗಿ ಬಹಳ ಕಾತರದಿಂದ ಕಾಯುತ್ತಿದ್ದು, ಭಾನುವಾರ ತಡರಾತ್ರಿ ಯಾರಿಗೆ 2026ರ ಚಾಂಪಿಯನ್ಸ್ ಪಟ್ಟ ಮುಡಿಗೇರಲಿದೆ ಎಂಬುದನ್ನು ತಿಳಿಯಲು ತೀರ ಉತ್ಸುಕರಾಗಿದ್ದಾರೆ. ಬಹುನಿರೀಕ್ಷಿತ ಅಂತಿಮ ಹಣಾಹಣಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಎಂಟ್ರಿಯ ಬೆನ್ನಲ್ಲೇ ಪಂದ್ಯದ ರೆಫರಿ ಯಾರೆಂಬ ವಿಷಯ ಕೇಳಿ ಸದ್ಯ ಅರ್ಜೆಂಟೀನಾ ತಂಡಕ್ಕೆ ಹೊಸ ತಲೆಬಿಸಿ ಶುರುವಾಗಿದೆ.
ಈ ಪಂದ್ಯವು ಅರ್ಜೆಂಟೀನಾ ಮತ್ತು ಸ್ಪೇನ್ ನಡುವೆ ನ್ಯೂಜೆರ್ಸಿಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ, ಪಂದ್ಯವು ಭಾನುವಾರ ಮಧ್ಯರಾತ್ರಿ 12.30ಕ್ಕೆ ಆರಂಭವಾಗಲಿದೆ. ಡೊನಾಲ್ಡ್ ಟ್ರಂಪ್ ಶುಕ್ರವಾರ ನ್ಯೂಯಾರ್ಕ್‌ನ ಟ್ರಂಪ್ ಟವರ್‌ನಲ್ಲಿ ಫಿಫಾ ಆಯೋಜಿಸಿರುವ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಭಾನುವಾರ ಅಂತಿಮ ಪಂದ್ಯವನ್ನು ನೇರವಾಗಿ ವೀಕ್ಷಿಸಲಿದ್ದಾರೆ.
ಮತ್ತೊಂದೆಡೆ, ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸತತ ಎರಡನೇ ಬಾರಿಗೆ ಫಿಫಾ ವಿಶ್ವಕಪ್ ಎತ್ತಿಹಿಡಿಯಲು ಲಿಯೋನಲ್​ ಮೆಸ್ಸಿ ಪಡೆ ದೃಢಸಂಕಲ್ಪ ಹೊಂದಿದೆ. ಆದಾಗ್ಯೂ, ತಂಡಕ್ಕೆ ಹೊಸ ಸಮಸ್ಯೆ ಎದುರಾಗಿದ್ದು, ಫೈನಲ್ ಪಂದ್ಯದ ರೆಫರಿಯಾಗಿ ಸ್ಲೋವನ್ ವಿನಿಕ್ ಆಯ್ಕೆ ಆಗಿದ್ದಾರೆ. ಇದೇ ಈಗ ಅರ್ಜೆಂಟೀನಾ ತಂಡಕ್ಕೆ ಹೊಸ ಸಮಸ್ಯೆಯಾಗಿ ಎದುರಾಗಿದೆ.
ಕಾರಣ, ಈ ಹಿಂದೆ ಸ್ಲೋವೆನ್ ರೆಫರಿಯಾಗಿದ್ದ ಪಂದ್ಯದಲ್ಲಿ ಅರ್ಜೆಂಟೀನಾ ಹೀನಾಯ ಸೋಲನ್ನು ಅನುಭವಿಸಿತು. ಈ ವಿಶ್ವಕಪ್‌ನಲ್ಲಿ ಪಂದ್ಯ ಆಯೋಜಕರು ಮತ್ತು ರೆಫರಿಗಳು ಇಲ್ಲಿಯವರೆಗೆ ಅರ್ಜೆಂಟೀನಾ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ ಎಂಬ ವಾದ, ಆರೋಪಗಳ ಬೆನ್ನಲ್ಲೇ ಫಿಫಾ ಈ ನಿರ್ಧಾರ ತೆಗೆದುಕೊಂಡಿದೆ. ಇದರೊಟ್ಟಿಗೆ ಸಾಕಷ್ಟು ವಿವಾದಗಳಲ್ಲಿ ಸಿಲುಕಿದ್ದ ಸ್ಲೋವೆನ್​, ಮೆಸ್ಸಿ ತಂಡದೊಂದಿಗೆ ಹೆಚ್ಚಾಗಿ ಕಿರಿಕಿರಿಯನ್ನೇ ಮಾಡಿಕೊಂಡಿದ್ದಾರೆ. ಇದೊಂದು ರೀತಿ ಶಾಪವಿದ್ದಂತೆ ಎಂಬುದು ಸದ್ಯ ಅರ್ಜೆಂಟೀನಾ ಅಭಿಮಾನಿಗಳ ಮನದ ಮಾತು,(ಏಜೆನ್ಸೀಸ್).