- ಇಸ್ರೇಲ್-ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದ ನಾಯಕನ ಇನ್ನಿಲ್ಲ
- ಟ್ರಂಪ್ಗೆ ಸವಾಲೆಸೆದಿದ್ದ ಇರಾನ್ ನಾಯಕನನ್ನು ಮುಗಿಸಿದ ಇಸ್ರೇಲ್
- ಎಚ್ಚರಿಕೆ ಬೆನ್ನಲ್ಲೇ ಇರಾನ್ ನಾಯಕರ ಸರಣಿ ಕೊಲೆ
ಟೆಹ್ರಾನ್: ಇರಾನ್-ಇಸ್ರೇಲ್ ನಡುವಿನ ಯುದ್ಧವು ಸದ್ಯ ಯಾವುದೇ ಕಾರಣಕ್ಕೂ ನಿಲ್ಲುವಂತೆ ತೋರುತ್ತಿಲ್ಲ. ಸೇಡು ತೀರಿಸಿಕೊಳ್ಳಲು ಪಣತೊಟ್ಟಿರುವ ಇರಾನ್ ತಮ್ಮ ಸೇನೆಯ ಮತ್ತೊಬ್ಬ ಅಧಿಕಾರಿಯನ್ನು ಕಳೆದುಕೊಂಡಿದೆ. ಅಮೆರಿಕಕ್ಕೆ ಸವಾಲು ಹಾಕಿದ್ದ ಇರಾನಿನ ನಾಯಕರು, ಇದೀಗ ಮಸಣದ ಹಾದಿ ಹಿಡಿರುವುದು ಸಂಘರ್ಷದ ತೀವ್ರತೆಗೆ ಕಾರಣವಾಗಿದೆ.
ಇಸ್ರೇಲ್ಗೆ ಸರ್ಪ್ರೈಸ್ ಕಾದಿದೆ ಎಂದ ಬೆನ್ನಲ್ಲೇ ಉಡೀಸ್
ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಮತ್ತೊಂದು ಜಂಟಿ ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮತ್ತು ಪ್ರಮುಖ ವಕ್ತಾರ ಅಲಿ ಮೊಹಮ್ಮದ್ ನೈನಿ ಸಾವಿಗೀಡಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಐಆರ್ಜಿಸಿಯೂ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದೆ. "ಇರಾನ್ನ ಕ್ರಾಂತಿಕಾರಿ ವಕ್ತಾರ ಅಲಿ ಮೊಹಮದ್ ನೈನಿ, ಕೊಲ್ಲಿಯಲ್ಲಿ ನೌಕಾ ಹಕ್ಕುಗಳ ಪ್ರಶ್ನಿಸಿ, ಮಾತನಾಡಿದ್ದರು. ಇದರ ಬೆನ್ನಲ್ಲೇ ಅಮೆರಿಕ-ಇಸ್ರೇಲ್ ನಡೆಸಿದ ಹೇಡಿತನದ ದಾಳಿಯಲ್ಲಿ ನಮ್ಮ ಧೀರ ನಾಯಕ ಹುತಾತ್ಮರಾಗಿದ್ದಾರೆ" ಎಂದು ತಿಳಿಸಿದೆ.
ನೈನಿ ಹೇಳಿದ್ದೇನು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಿದ ಮಾತಿಗೆ ಸಿಟ್ಟಾಗಿದ್ದ ನೈನಿ, "ಟ್ರಂಪ್ ಇರಾನ್ ಸಂಪೂರ್ಣ ನೆಲಸಮವಾಗಿದೆ ಎಂದು ಹೇಳಿದ್ದಾರಾ? ಅವರಿಗೆ ಧೈರ್ಯವಿದ್ದರೆ, ತಮ್ಮ ನೌಕಾ ಪಡೆಯನ್ನು ಪರ್ಷಿಯನ್ ಕೊಲ್ಲಿಯನ್ನು ಮುಟ್ಟುವಂತಹ ವ್ಯವಸ್ಥೆಯನ್ನು ಮಾಡಿಕೊಳ್ಳಲಿ ಎಂದು ಸವಾಲು ಹಾಕಿದ್ದರು. ಹೀಗೆಂದ ಕೆಲವೇ ದಿನಗಳಲ್ಲಿ ನೈನಿ ಕಥೆಯನ್ನು ಟ್ರಂಪ್ ಮುಗಿಸಿದ್ದಾರೆ.
ಸರಣಿ ಹತ್ಯೆ
ಇರಾನ್ನ ಸರ್ವೋಚ್ಚ ನಾಯಕ ಅಯೋತಲ್ಲಾ ಅಲಿ ಖಮೇನಿಯವರ ಹತ್ಯೆಯ ಬಳಿಕ ಇರಾನಿನ ನಾಯಕರ ಸರಣಿ ಕೊಲೆ ನಡೆಯುತ್ತಿದೆ. ಸೇನಾ ಪಡೆಯ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳೇ ಇಸ್ರೇಲ್-ಅಮೆರಿಕ ಪಡೆಗಳಿಗೆ ಟಾರ್ಗೆಟ್. ಇರಾನ್ನ ಗುಪ್ತಚರ ಸಚಿವ ಎಸ್ಮಾಯಿಲ್ ಖತಾಮ್, ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ, ಬಸಿಜ್ ನಾಯಕ ಫಲಮುಜ್ರಾ ಸುಲೈಮಾನಿ ಉಸಿರು ಚೆಲ್ಲಿದ್ದಾರೆ,(ಏಜೆನ್ಸೀಸ್).