Guinness World Record 
ವಿದೇಶ

65 ವರ್ಷ ಒಂದೇ ಕಂಪನಿಯಲ್ಲಿ ಕೆಲಸ ಮಾಡಿ ಗಿನ್ನೆಸ್ ದಾಖಲೆ ಬರೆದ ಮಹಿಳೆ! Guinness World Record

ಜಪಾನ್​: ( Guinness World Record)  ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ಜಪಾನ್‌ನ 96 ವರ್ಷದ ಯಾಸುಕೊ ತಮಕಿ  ಅವರು ಸಾಬೀತುಪಡಿಸಿದ್ದಾರೆ. ಅವರು ಒಂದೇ ಕಂಪನಿಯಲ್ಲಿ ದೀರ್ಘಕಾಲ ಕೆಲಸ ಮಾಡುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಯಾಸುಕೊ ತಮಕಿ ಅವರು 'ಒಂದೇ ಕಂಪನಿಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಅತಿ ವಯಸ್ಸಿನ ಕಚೇರಿ ಮ್ಯಾನೇಜರ್' (Oldest Office Manager) ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಪಡೆದಿದ್ದಾರೆ.
1956 ರಿಂದ ಜಪಾನ್‌ನ 'ಸನ್ಕೊ ಇನ್‌ಫಿನಿಟ್' (Sunco Industries) ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂದರೆ ಕಳೆದ 65 ವರ್ಷಗಳಿಂದ ಅವರು ಒಂದೇ ಸಂಸ್ಥೆಗೆ ನಿಷ್ಠರಾಗಿದ್ದಾರೆ.
 96ನೇ ವಯಸ್ಸಿನಲ್ಲೂ ಅವರು ವಾರಕ್ಕೆ ಐದು ದಿನ ಕಚೇರಿಗೆ ಬರುತ್ತಾರೆ. ಪ್ರತಿ ದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಕ್ರಿಯವಾಗಿ ಕೆಲಸ ಮಾಡುತ್ತಾರೆ. ಆಧುನಿಕ ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಬಳಸುವಲ್ಲಿಯೂ ನಿಪುಣರಾಗಿದ್ದಾರೆ.
ವೃದ್ಧಾಪ್ಯದಲ್ಲೂ ಅವರು ಕಚೇರಿಗೆ ಉತ್ಸಾಹದಿಂದ ಆಗಮಿಸಿದಾಗ ಅವರ ಸಹೋದ್ಯೋಗಿಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಗಿನ್ನೆಸ್ ದಾಖಲೆ ಪಡೆದ ಸಂದರ್ಭದಲ್ಲಿ ಅವರಿಗೆ ಈ ಅದ್ಭುತ ಸ್ವಾಗತ ದೊರೆಯಿತು. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಆಶ್ಚರ್ಯಕರವಾಗಿದೆ ಎಂದು ಅನೇಕ ಜನರು ಕಾಮೆಂಟ್ ಮಾಡಿದ್ದಾರೆ. 
ತಮ್ಮ ಈ ಸುದೀರ್ಘ ವೃತ್ತಿಜೀವನದ ಬಗ್ಗೆ ಮಾತನಾಡಿರುವ ಯಾಸುಕೊ, "ನಾನು ಪ್ರತಿ ವರ್ಷವನ್ನು ಪ್ರಾಮಾಣಿಕವಾಗಿ ಕಳೆಯುತ್ತಾ ಬಂದೆ, ಅಷ್ಟರಲ್ಲಿ 65 ವರ್ಷಗಳಾಗಿವೆ. ಕೆಲಸ ಮಾಡುವುದು ನನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿಟ್ಟಿದೆ. ಕೆಲಸದ ಬಗ್ಗೆ ನನಗಿರುವ ಪ್ರೀತಿಯೇ ನನ್ನ ಯಶಸ್ಸಿನ ಗುಟ್ಟು," ಎಂದು ಹೇಳಿದ್ದಾರೆ.
ಕಂಪನಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಯಾಸುಕೊ ಅವರನ್ನು ಕೇವಲ ಉದ್ಯೋಗಿಯಾಗಿ ನೋಡದೆ, ಒಬ್ಬ ಮಾರ್ಗದರ್ಶಕಿಯಾಗಿ ಗೌರವಿಸುತ್ತಾರೆ. ಇಂದಿನ ಪೀಳಿಗೆಗೆ ಅವರ ಬದ್ಧತೆ ಮತ್ತು ಶಿಸ್ತು ದೊಡ್ಡ ಮಾದರಿಯಾಗಿದೆ.