ಯೂಕ್ರೇನ್‌ನ ಡ್ನಿಪ್ರೊ ರೈಲ್ವೆ ನಿಲ್ದಾಣದ ಪ್ಲ್ಯಾಟ್‌ಫಾರ್ಮ್‌ಗೆ ಅಪ್ಪಳಿಸಿದ ರಷ್ಯನ್ ಡ್ರೋನ್; ಭೀಕರ ಸ್ಫೋಟಕ್ಕೆ 13 ನಾಗರಿಕರು ದುರ್ಮರಣ. 
ವಿದೇಶ

ರೈಲ್ವೆ ಪ್ಲ್ಯಾಟ್‌ಫಾರ್ಮ್‌ಗೆ ಅಪ್ಪಳಿಸಿದ ರಷ್ಯನ್​ ಡ್ರೋನ್: ಯೂಕ್ರೇನ್‌ನಲ್ಲಿ 13 ಮಂದಿ ದುರ್ಮರಣ! Russian drone

ಯೂಕ್ರೇನ್​​​: ರಷ್ಯಾದ ಡ್ರೋನ್​ವೊಂದು, ಯೂಕ್ರೇನ್​ ದೇಶದ ರೈಲ್ವೆ ನಿಲ್ದಾಣದ ಪ್ಲ್ಯಾಟ್​ಫಾರ್ಮ್​ವೊಂದಕ್ಕೆ ಅಪ್ಪಳಿಸಿದ ಹಿನ್ನಲೆ 13 ಜನ ದುರ್ಮರಣ ಹೊಂದಿದ್ದಾಗಿ ಜಾಗತಿಕ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ದುರ್ಘಟನೆಯು ಡ್ನಿಪ್ರೊ (Dnipro) ರೈಲು ನಿಲ್ದಾಣದಲ್ಲಿ ನಡೆದಿದ್ದು, ಪ್ಲ್ಯಾಟ್​ಫಾರ್ಮಗೆ ರೈಲು ಬಂದು ನಿಲ್ಲುತ್ತಿದ್ದಂತೆ ರಷ್ಯಾದ ಡ್ರೋನ್​ ಸ್ಫೋಟಗೊಂಡ ಹಿನ್ನಲೆ ಹತ್ತಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಮಾಹಿತಿ ಪ್ರಕಾರ, ಸ್ಥಳಕ್ಕೆ ರಕ್ಷಣಾ ಸಿಬ್ಬಂದಿಗಳು ಆಗಮಿಸಿದ್ದು, ಅಪಘಾತದಲ್ಲಿ ತುತ್ತಾದ ಜನರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎನ್ನಲಾಗಿದೆ. ಈ ಕುರಿತು ದೇಶದ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ವೊಲೊಡಿಮಿರ್ ಝೆಲೆನ್ಸ್ಕಿ ಸಂತಾಪ

ಈ ದುರ್ಘಟನೆಗೆ ಪ್ರತಿಕ್ರಿಯೆ ನೀಡಿರುದ ಯೂಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ನಮ್ಮ ರೈಲ್ವೆ ನಿಲ್ದಾಣದ ಮೇಲೆ ರಷ್ಯಾದ ಡ್ರೋನ್​ವೊಂದು ಅಪ್ಪಳಿಸಿದ ಪರಿಣಾಮ 13 ಜನ ಸಾವನ್ನಪ್ಪಿರುವ ಸುದ್ದಿ ದೊರೆತಿದೆ. ಈ ನಿಲ್ದಾಣದ ಸಾಮಾನ್ಯ ಜನರಿಗೆ ಸೇರಿದ್ದಾಗಿತ್ತು. ಇದು ಮುಗ್ದ ನಾಗರಿಕೆ ಮೇಲೆ ಮಾಡಿರುವ ನೇರ ದಾಳಿಯಾಗಿದೆ. ಈ ಘಟನೆಯಲ್ಲಿ ಸಾವನ್ನಪ್ಪಿದ ದುರ್ದೈವಿಗಳ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬದವರಿಗೆ ದುಃಖ ಭರಿಸಿವ ಶಕ್ತಿದೊರೆಯಲಿ ಎಂದು ಟ್ವೀಟ್​ ಮಾಡಿದ್ದಾರೆ.

ನಮಗೆ ಯುದ್ಧ ಬೇಡ; ಶಾಂತಿ ಬೇಕು!

ಕೆಲ ದಿನಗಳ ಹಿಂದೆ, ಖಾಸಗಿ ಮಾಧ್ಯಮವೊಂದರ ಜತೆ ಮಾತನಾಡಿದ್ದ ಯೂಕ್ರೇನ್​ ಅಧ್ಯಕ್ಷ, ವೊಲೊಡಿಮಿರ್ ಝೆಲೆನ್ಸ್ಕಿ, ಯೂಕ್ರೇನ್​ನ ಶೇ.25 ರಷ್ಟು ಭೂಪ್ರದೇಶವನ್ನು ರಷ್ಯಾಗೆ ಬಿಟ್ಟುಕೊಡಲು ಸಿದ್ಧರಾಗಿದ್ದಾರೆಂದು ಜಾಗತಿಕ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ.

ಅಲ್ಲಿ ತಿಳಿಸಿರುವಂತೆ ಕಳೆದ 5 ವರ್ಷಗಳಿಂದ ಈ ಸಂಘರ್ಷ ನಡೆಯುತ್ತಿದ್ದು, ಉಭಯ ಪಕ್ಷಗಳು ಭಾರೀ ನಷ್ಟ ಅನುಭವಿಸುತ್ತಿವೆ. ಹೀಗಾಗಿ ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು. ಹೀಗಾಗಿ ನಮ್ಮ ಕೆಲ ಭೂಪ್ರದೇಶವನ್ನು ರಷ್ಯಾಗೆ ನೀಡಿದರೆ, ಯುದ್ಧ ನಿಲ್ಲುತ್ತದೆ ಎಂದರೆ ಅದಕ್ಕೂ ತಾವು ಸಿದ್ಧವಿರುವುದಾಗಿ ಝೆಲೆನ್ಸ್ಕಿಹೇಳಿದ್ದಾರೆ ಎನ್ನಲಾಗುತ್ತಿದೆ.

ಈ ಯುದ್ಧವನ್ನು ರಷ್ಯಾ ಗೆದ್ದಿಲ್ಲ!

ನಾವು, ಕೇವಲ ಯುದ್ಧವನ್ನು ನಿಲ್ಲಿಸಿ ಪ್ರದೇಶದಲ್ಲಿ ಶಾಂತಿ ಸ್ಥಾಪನೆ ಉದ್ದೇಶದಿಂದ, ಭೂಪ್ರದೇಶವನ್ನು ನೀಡುತ್ತಿದ್ದೆವೇ ಹೊರತು, ಈ ಸಂಘರ್ಷದಲ್ಲಿ ರಷ್ಯಾ ಗೆದ್ದಿದೆ ಎಂದಲ್ಲ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ನಮಗೆ, ನಮ್ಮ ಜನಕ್ಕೆ ಶಾಂತಿ ಮುಖ್ಯವಾಗಿದೆ. ಹೀಗಾಗಿ ನಾನು, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜತೆಗೆ ಸಭೆ ನಡೆಸಿ ಈ ಯುದ್ಧವನ್ನು ನಿಲ್ಲಿಸುವ ಕುರಿತು ಮಾತುಕತೆ ನಡೆಸಲಿದ್ದೇನೆ. ಇದಕ್ಕೆ ರಷ್ಯಾ ಕೂಡ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ, (ಏಜೆನ್ಸೀಸ್​).