Russia  
ವಿದೇಶ

ಪುಟಿನ್ ಅಪಹರಣಕ್ಕೆ ಸಂಚು? ಬ್ರಿಟನ್ ಸಚಿವನ ಹೇಳಿಕೆಗೆ ಕೆಂಡಾಮಂಡಲವಾದ ರಷ್ಯಾ ...Russia

ಮಾಸ್ಕೋ: ಉಕ್ರೇನ್ ವಿರುದ್ಧದ ಸಮರ ಮುಂದುವರಿಯುತ್ತಿರುವ ನಡುವೆಯೇ, ರಷ್ಯಾ ( Russia ) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅಪಹರಿಸುವ (Kidnap) ಕುರಿತು ಯುಕೆ ರಕ್ಷಣಾ ಸಚಿವ ಜಾನ್ ಹೀಲಿ ನೀಡಿರುವ ಹೇಳಿಕೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಕಿಚ್ಚು ಹಚ್ಚಿದೆ. ಬ್ರಿಟನ್‌ನ ಈ ನಡೆಯನ್ನು ರಷ್ಯಾ ಅತ್ಯಂತ ಕಟು ಶಬ್ದಗಳಿಂದ ಟೀಕಿಸಿದ್ದು, ಇದನ್ನು "ವಿಕೃತ ಕಾಮುಕರ ಒದ್ದೆ ಕನಸುಗಳು" (Moist fantasies of perverts) ಎಂದು ಕರೆದು ಅಪಹಾಸ್ಯ ಮಾಡಿದೆ.

ವಿವಾದಕ್ಕೆ ಕಾರಣವೇನು?

ಬ್ರಿಟನ್‌ನ ರಕ್ಷಣಾ ಸಚಿವ ಜಾನ್ ಹೀಲಿ ಅವರು ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಪುಟಿನ್ ಅವರನ್ನು ಬಂಧಿಸುವ ಅಥವಾ ವಿಶೇಷ ಕಾರ್ಯಾಚರಣೆಯ ಮೂಲಕ ಸೆರೆಹಿಡಿಯುವ ಸಾಧ್ಯತೆಯ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದರು ಎನ್ನಲಾಗಿದೆ. ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನದ ಉದಾಹರಣೆಯನ್ನು ಉಲ್ಲೇಖಿಸಿ, ಯುದ್ಧಾಪರಾಧಗಳಿಗಾಗಿ ಪುಟಿನ್ ಅವರನ್ನು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಒಪ್ಪಿಸುವ ಬಗ್ಗೆ ಚರ್ಚೆ ನಡೆಸಿದ್ದರು.
ಬ್ರಿಟನ್‌ನ ಈ ಪ್ರಚೋದನಾಕಾರಿ ಮಾತುಗಳು ಎರಡು ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸುತ್ತವೆ ಮತ್ತು ಇದು ಅಪರಾಧದ ಹಂತದ ಅಜಾಗರೂಕತೆ. ಬ್ರಿಟನ್ ಸಚಿವರ ಈ ಹೇಳಿಕೆ ಹೊರಬೀಳುತ್ತಿದ್ದಂತೆ ರಷ್ಯಾ ಕೆಂಡಾಮಂಡಲವಾಗಿದೆ. ರಷ್ಯಾದ ಪ್ರಭಾವಿ ನಾಯಕರು ಮತ್ತು ರಾಜತಾಂತ್ರಿಕರು ಬ್ರಿಟನ್ ವಿರುದ್ಧ ಮುಗಿಬಿದ್ದಿದ್ದಾರೆ ಎಂದು ರಷ್ಯಾದ ರಾಯಭಾರ ಕಚೇರಿ ಎಚ್ಚರಿಸಿದೆ.
ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ ಅವರು ಹೀಲಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ಬ್ರಿಟನ್ ಸರ್ಕಾರದ ರಾಜತಾಂತ್ರಿಕ ದಿವಾಳಿತನವನ್ನು ತೋರಿಸುತ್ತದೆ. ವಿಕೃತರ ಕಲ್ಪನೆಗಳು ಎಂದು ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
2026ರ ಈ ವರ್ಷದಲ್ಲಿ ಉಕ್ರೇನ್-ರಷ್ಯಾ ಯುದ್ಧ ಹೊಸ ತಿರುವು ಪಡೆಯುತ್ತಿರುವ ಸಂದರ್ಭದಲ್ಲೇ ಇಂತಹ ಹೇಳಿಕೆಗಳು ಹೊರಬರುತ್ತಿವೆ. ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ICC) ಈಗಾಗಲೇ ಪುಟಿನ್ ವಿರುದ್ಧ ವಾರೆಂಟ್ ಹೊರಡಿಸಿದೆ. ಆದರೆ, ವಿಶ್ವದ ಬಲಿಷ್ಠ ರಾಷ್ಟ್ರವೊಂದರ ಅಧ್ಯಕ್ಷರನ್ನು ಅಪಹರಿಸುವ ಅಥವಾ ಬಂಧಿಸುವ ಮಾತುಗಳು ವಿಶ್ವ ಸಮರದ ಭೀತಿಯನ್ನು ಹೆಚ್ಚಿಸಿವೆ ಎಂಬ ಆತಂಕ ವ್ಯಕ್ತವಾಗಿದೆ.