ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ಮಾಸ್ಕೋ: ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿವಾಸವನ್ನು ಗುರಿಯಾಗಿಸಿಕೊಂಡು ಯುಕ್ರೇನ್ ಬೃಹತ್ ಡ್ರೋನ್ ದಾಳಿ ನಡೆಸಿದೆ ಎಂಬ ವರದಿಗಳ ನಡುವೆಯೂ, ಯುಕ್ರೇನ್ ಜೊತೆಗಿನ ಶಾಂತಿ ಮಾತುಕತೆಯ ವಿಷಯದಲ್ಲಿ ತನ್ನ ನಿಲುವು ಬದಲಾಗಿಲ್ಲ ಎಂದು ರಷ್ಯಾ(Russia) ಸ್ಪಷ್ಟಪಡಿಸಿದೆ.
ಶಾಂತಿ ಮಾತುಕತೆ ಬಗ್ಗೆ ರಷ್ಯಾ ಸ್ಪಷ್ಟನೆ
ಈ ಬಗ್ಗೆ ಮಾತನಾಡಿರುವ ರಷ್ಯಾದ ಅಧ್ಯಕ್ಷೀಯ ಭವನವಾದ ಕ್ರೆಮ್ಲಿನ್‌ನ ವಕ್ತಾರ ಡಿಮಿಟ್ರಿ ಪೆಸ್ಕೋವ್, ಯುಕ್ರೇನ್‌ನ ಈ ಪ್ರಚೋದನಾಕಾರಿ ಕ್ರಮಗಳ ಹೊರತಾಗಿಯೂ, ಸಂಘರ್ಷವನ್ನು ಕೊನೆಗೊಳಿಸುವ ಮಾತುಕತೆಯ ಕುರಿತಾದ ರಷ್ಯಾದ ಮೂಲಭೂತ ನಿಲುವು ಬದಲಾಗಿಲ್ಲ. ನಾವು ಶಾಂತಿಗೆ ಸಿದ್ಧರಿದ್ದೇವೆ. ಆದರೆ ನಮ್ಮ ಷರತ್ತುಗಳು ಸ್ಪಷ್ಟವಾಗಿವೆ ಎಂದು ಹೇಳಿದ್ದಾರೆ.
ರಷ್ಯಾ ಅಧ್ಯಕ್ಷರ ನಿವಾಸದ ಮೇಲೆ ನಡೆದ ದಾಳಿಯ ಪ್ರಯತ್ನವನ್ನು ಭಯೋತ್ಪಾದನಾ ಕೃತ್ಯ ಎಂದು ಕರೆದ ಪೆಸ್ಕೋವ್ ತಿಳಿಸಿದ್ದಾರೆ. ಇಂತಹ ಕ್ರಮಗಳು ಯುಕ್ರೇನ್‌ನ ಹತಾಶೆಯನ್ನು ತೋರಿಸುತ್ತವೆ ಎಂದಿದ್ದಾರೆ. ಯುಕ್ರೇನ್ ದಾಳಿಯ ಹಿನ್ನೆಲೆಯಲ್ಲಿ ಅಧ್ಯಕ್ಷ ಪುಟಿನ್ ಅವರ ಎಲ್ಲಾ ನಿವಾಸಗಳು ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಭದ್ರತೆಯನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ ಎಂದು ಡಿಮಿಟ್ರಿ ತಿಳಿಸಿದ್ದಾರೆ.
ರಷ್ಯಾದ ಶಾಂತಿ ಷರತ್ತುಗಳು
ರಷ್ಯಾ ತನ್ನ ನಿಲುವು ಬದಲಾಗಿಲ್ಲ ಎಂದು ಹೇಳುವಾಗ, ಅದು ಈ ಹಿಂದೆ ವಿಧಿಸಿದ್ದ ಪ್ರಮುಖ ಷರತ್ತುಗಳನ್ನೇ ಒತ್ತಿ ಹೇಳುದ್ದಾರೆ
ನ್ಯಾಟೋ ಸೇರ್ಪಡೆ ಬೇಡ: ಯುಕ್ರೇನ್ ಯಾವುದೇ ಕಾರಣಕ್ಕೂ ನ್ಯಾಟೋ (NATO) ಮಿಲಿಟರಿ ಒಕ್ಕೂಟವನ್ನು ಸೇರಬಾರದು.
ಪ್ರದೇಶಗಳ ಮೇಲಿನ ಹಕ್ಕು: ರಷ್ಯಾ ಈಗಾಗಲೇ ವಶಪಡಿಸಿಕೊಂಡಿರುವ ಡೊನೆಟ್ಸ್ಕ್, ಲುಹಾನ್ಸ್ಕ್, ಖೆರ್ಸನ್ ಮತ್ತು ಜಪೋರಿಝಿಯಾ ಪ್ರದೇಶಗಳನ್ನು ಯುಕ್ರೇನ್ ಅಧಿಕೃತವಾಗಿ ರಷ್ಯಾದ ಭಾಗ ಎಂದು ಒಪ್ಪಿಕೊಳ್ಳಬೇಕು.
ಸೇನಾ ಕಡಿತ: ಉಕ್ರೇನ್ ತನ್ನ ಮಿಲಿಟರಿ ಶಕ್ತಿಯನ್ನು ಸೀಮಿತಗೊಳಿಸಬೇಕು.
ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ
ಪುಟಿನ್ ನಿವಾಸದ ಮೇಲಿನ ದಾಳಿಯ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ, ಈ ಘಟನೆಯಿಂದ ತಾವು ಆಕ್ರೋಶಗೊಂಡ ಕಾಣಿಸಿಕೊಂಡ.
ಪುಟಿನ್ನೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ ಟ್ರಂಪ್, ಇದು ಅತ್ಯಂತ ಸೂಕ್ಷ್ಮ ಸಮಯವಾಗಿದೆ. ಜೊತೆಗೆ, ಅಧ್ಯಕ್ಷರ ನಿವಾಸದ ಮೇಲೆ ದಾಳಿ ಮಾಡುವುದು ಸರಿಯಲ್ಲ. ಈ ಬಗ್ಗೆ ನಾನು ಪುಟಿನ್ ಅವರಿಂದ ತಿಳಿದುಕೊಂಡೆ ಮತ್ತು ನನಗೆ ಕೋಪ ಬಂದಿದೆ ಎಂದು ಹೇಳಿದರು.
ಸಂದರ್ಭದ ಗಂಭೀರತೆ
ಈ ಬೆಳವಣಿಗೆಯು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಧಾನ ಪ್ರಯತ್ನಗಳ ನಡುವೆಯೇ ಬಂದಿದೆ. ಟ್ರಂಪ್ ಯುದ್ಧವನ್ನು ತಕ್ಷಣ ನಿಲ್ಲಿಸಲು ಒತ್ತು ನೀಡುತ್ತಿದ್ದಾರೆ. ಈ ಹಂತದಲ್ಲಿ ರಷ್ಯಾ ನಿಲುವು ಬದಲಾಗಿಲ್ಲ ಎಂದು ಹೇಳಿರುವುದು, ಅದು ಸಂಧಾನದ ಮೇಜಿನ ಮೇಲೆ ತನ್ನ ಹಿಡಿತವನ್ನು ಸಡಿಲಗೊಳಿಸುವುದಿಲ್ಲ ಎಂಬ ಸಂದೇಶವನ್ನು ಪಾಶ್ಚಿಮಾತ್ಯ ದೇಶಗಳಿಗೆ ರವಾನಿಸಿದಂತಿದೆ,(ಏಜೆನ್ಸೀಸ್).