ಉಕ್ರೇನ್: ಶನಿವಾರ (ಡಿ.27) ರಷ್ಯಾ (Russia) ಉಕ್ರೇನ್‌ನ ರಾಜಧಾನಿ ಕೈವ್ ಸೇರಿ ಇತರ ಪ್ರದೇಶಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ ಎಂದು ವರದಿಯಾಗಿದೆ. ಸುಮಾರು ನಾಲ್ಕು ವರ್ಷಗಳ ಕಾಲ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದವನ್ನು ತಲುಪುವ ಗುರಿಯನ್ನು ಹೊಂದಿರುವ ಸಭೆ ನಡೆಸುವುದಾಗಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಹೇಳಿಕೆ ನೀಡಿದ ಬೆನ್ನಲೇ ರಷ್ಯಾ ವಾಯುದಾಳಿ ನಡೆಸಿದೆ.
ರಷ್ಯಾದ ಡ್ರೋನ್‌ಗಳು ರಾಜಧಾನಿ ಕೈವ್ ಮತ್ತು ಈಶಾನ್ಯ ಮತ್ತು ದಕ್ಷಿಣದ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಉಕ್ರೇನ್‌ನ ಮಿಲಿಟರಿ ತಿಳಿಸಿದೆ. ಹಾನಿ ಅಥವಾ ವಿದ್ಯುತ್ ಕಡಿತದ ಬಗ್ಗೆ ಮಾಹಿತಿ ಇನ್ನು ಸ್ಪಷ್ಟವಾಗಿಲ್ಲ ಹಾಗೆಯೇ ದಾಳಿಯ ಬಗ್ಗೆ ರಷ್ಯಾ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.
ಶಾಂತಿ ಯೋಜನೆಯನ್ನು ಭದ್ರಪಡಿಸಿಕೊಳ್ಳಲು ಅಮೆರಿಕ ನಡೆಸುತ್ತಿರುವ ಅಭಿಯಾನದಲ್ಲಿ 20 ಅಂಶಗಳ ಕರಡು 90% ಪೂರ್ಣಗೊಂಡಿದೆ ಎಂದು ಝೆಲೆನ್ಸ್ಕಿ ಕೈವ್‌ನಲ್ಲಿ ಪತ್ರಕರ್ತರಿಗೆ ತಿಳಿಸಿದರು. ಉಕ್ರೇನ್ ಪ್ರಸ್ತುತ ಮುಂಚೂಣಿಯಲ್ಲಿ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದು, ಉಕ್ರೇನ್ ಡೊನೆಟ್ಸ್ಕ್‌ನ ಕೆಲವು ಭಾಗಗಳನ್ನು ಬಿಟ್ಟುಕೊಟ್ಟರೆ ಯುಎಸ್ ರಾಜಿ ಮುಕ್ತ ಆರ್ಥಿಕ ವಲಯವನ್ನು ಪ್ರಸ್ತಾಪಿಸುತ್ತದೆ. ಆದಾಗ್ಯೂ, ಪ್ರಸ್ತಾವಿತ ರಾಜಿಯ ವಿವರಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.
ಝೆಲೆನ್ಸ್ಕಿಯೊಂದಿಗಿನ ಮುಂಬರುವ ಸಭೆ ಚೆನ್ನಾಗಿ ನಡೆಯುತ್ತದೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸಹ ಮಾತನಾಡಲು ಸಾಧ್ಯವಾಗುತ್ತದೆ ಎಂದು ಎಂದು ಟ್ರಂಪ್ ಹೇಳಿದ್ದರು,(ಏಜನ್ಸೀಸ್).