ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಹೆಚ್ಚಾದ ಪಾಕ್ ಸೇನೆಯ ದಬ್ಬಾಳಿಕೆ 
ವಿದೇಶ

ನಮ್ಮ ರಕ್ಷಣೆಗೆ ಧಾವಿಸಿ: PoK ಯಲ್ಲಿ ಪಾಕ್​ ಸೇನೆ ಅಟ್ಟಹಾಸ; ಭಾರತದ ನೆರವು ಕೇಳಿ ಹರಿಬಿಟ್ಟ ವಿಡಿಯೋ ವೈರಲ್​! PoK Viral Video

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಹೆಚ್ಚಾದ ಪಾಕ್ ಸೇನೆಯ ದಬ್ಬಾಳಿಕೆ
  • ರಕ್ಷಣೆಗಾಗಿ ಭಾರತದ ನೆರವು ಕೋರಿ ಸ್ಥಳೀಯರಿಂದ ವಿಡಿಯೋ ಬಿಡುಗಡೆ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ಪಿಓಕೆ: ಪಾಕ್​ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನಿ ಸೈನಿಕರು ಕ್ರೌರ್ಯದ ಎಲ್ಲಾ ಗಡಿಯನ್ನು ದಾಟಿದ್ದು, ಕಂಡ ಕಂಡಲ್ಲಿ ಕಾಶ್ಮೀರಿಗಳನ್ನು ಗುಂಡಿಕ್ಕಿ ಕೊಲ್ಲುತ್ತಿದ್ದಾರೆಂದು ಅಲ್ಲಿನ ಮಾಧ್ಯಮಗಳು ವರದಿ ಮಾಡುತ್ತಿವೆ.
ಇದರ ಹಿನ್ನಲೆ ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ಸೇರಿರುವ ಮಹಿಳೆಯೊಬ್ಬಳು ಭಾರತದ ಸಹಾಯ ಹಸ್ತ ಕೇಳಿರುವ ವಿಡಿಯೋವೊಂದು ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್ (PoK Viral Video)​ ಆಗುತ್ತಿದೆ.

ನಮ್ಮನ್ನು ದಯವಿಟ್ಟು ರಕ್ಷಿಸಿ!

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ಯುವತಿಯೊಬ್ಬಳು, ಪಾಕಿಸ್ತಾನದ ಸೈನಿಕರು ನಮ್ಮನ್ನು ಕೊಲ್ಲುತ್ತಿದ್ದಾರೆ. ಮಕ್ಕಳು, ಮಹಿಳೆಯರು ಎನ್ನುವುದನ್ನು ನೋಡದೆ ಗುಂಡಿನ ಮಳೆ ಸುರಿಸುತ್ತಿದ್ದಾರೆ. ಭಾರತ ಸರ್ಕಾರ ದಯವಿಟ್ಟು ನಮ್ಮ ಸಹಾಯಕ್ಕೆ ಬನ್ನಿ, ನಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಸಹಾಯಮಾಡಿ ಎಂದು ಮನವಿ ಮಾಡಿದ್ದಾಳೆ.
ಆದರೆ, ಈ ವಿಡಿಯೋ ಪಾಕ್​ ಆಕ್ರಮಿತ ಕಾಶ್ಮೀರದ ಮಹಿಳೆಯೇ ಮಾಡಿದ್ದಾಳೆ ಎನ್ನುವುದಕ್ಕೆ ಯಾವುದೇ ಅಧಿಕೃತ ಸಾಕ್ಷಿ ಅಥವಾ ಪುರಾವೆಗಳು ಇಲ್ಲಿವರೆಗೆ ದೊರೆತಿಲ್ಲ. ಆದರೆ ಪಾಕ್​ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಹಿಂಸಾಚಾರ ನಡೆಯುತ್ತಿರುವುದು ನಿಜವಾಗಿದೆ.

ಬೀದಿಯಲ್ಲಿ ಹೆಣದ ರಾಶಿ!

ಇಸ್ಲಾಮಬಾದ್​ ಸರ್ಕಾರ, ಪಾಕ್​ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಮಲತಾಯಿ ಧೋರಣೆಯನ್ನು ತಾಳಿದೆ, ಇಲ್ಲಿನ ಜನರಿಗೆ ಉದ್ಯೋಗ, ಶಿಕ್ಷಣ ಅಷ್ಟೇ ಅಲ್ಲ ತಿನ್ನಲು ಸರಿಯಾಗಿ ಊಟವನ್ನು ಕೊಡುತ್ತಿಲ್ಲ ಎನ್ನುವುದು ಅಲ್ಲಿಯ ಜನರ ಆರೋಪವಾಗಿದೆ.
ಹೀಗಾಗಿ ಅವರು ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದಿದ್ದು, ಇವರನ್ನು ಹತ್ತಿಕ್ಕಲು ಪಾಕ್​ ಸರ್ಕಾರ ಸೇನೆಯನ್ನು ಕಳುಹಿಸಿದೆ. ಈ ಭದ್ರತಾ ಸಿಬ್ಬಂದಿಗಳು ನಾಗರಿಕರ ಮೇಲೆ ನೇರವಾಗಿ ಗುಂಡಿನ ದಾಳಿಗೆ ಇಳಿದಿದ್ದು, ಮಂಗಳವಾರ (ಜು.28) ನಡೆದ ಶೂಟೌಟ್​ನಲ್ಲಿ ಸುಮಾರು 20 ಕ್ಕೂ ಹೆಚ್ಚಿನ ಜನ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಹಾಗೆಯೇ ಈ ಪ್ರತಿಭಟನೆ ಪ್ರಾರಂಭವಾಗಿ ಎರಡು-ಮೂರು ತಿಂಗಳು ಕಳೆದಿದ್ದು, ಇಲ್ಲಿವರೆಗೆ ಸುಮಾರು 300 ಕ್ಕೂ ಅಧಿಕ ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆಂದು ಅಂದಾಜಿಸಲಾಗಿದೆ, (ಏಜನ್ಸೀಸ್​).