ಅಮೆರಿಕದ ಲಾಂಗ್ ಐಲ್ಯಾಂಡ್ ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿ ನರಕದರ್ಶನ! 
ವಿದೇಶ

ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿ ನರಕದರ್ಶನ: 3 ಗಂಟೆಗಳ ಕಾಲ ಆಕಾಶದಲ್ಲೇ ಲಾಕ್ ಆದ 15 ಮಕ್ಕಳು; ವಿಡಿಯೋ ವೈರಲ್​! Roller Coaster Rescue

ಪ್ರಮುಖ ಮುಖ್ಯಾಂಶಗಳು

  • ಅಮೆರಿಕದ ಲಾಂಗ್ ಐಲ್ಯಾಂಡ್ ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿ ನರಕದರ್ಶನ!
  • ರೋಲರ್ ಕೋಸ್ಟರ್ ಕೈಕೊಟ್ಟು 3 ಗಂಟೆಗಳ ಕಾಲ ಆಕಾಶದಲ್ಲೇ ತೂಗಾಡಿದ 15 ಮಕ್ಕಳು
  • ನ್ಯೂಯಾರ್ಕ್ ಅಗ್ನಿಶಾಮಕ ದಳದ ಸಾಹಸಮಯ ರಕ್ಷಣಾ ಕಾರ್ಯಾಚರಣೆ
ಲಾಂಗ್​ ಐಲ್ಯಾಂಡ್​: ಶುಕ್ರವಾರ (ಜೂ. 19) ಸುಮಾರು 15 ಜನ ಮಕ್ಕಳು ಅಮ್ಯೂಸ್​ಮೆಂಟ್​ ಪಾರ್ಕ್​ನಲ್ಲಿ ಸುಮಾರು 3 ಗಂಟೆಗಳವರೆಗೆ ಒಂದೇ ಸ್ಥಳದಲ್ಲಿ ಸಿಲುಕಿಕೊಂಡಿದ್ದು, ನಂತರ ಅವರನ್ನು ರಕ್ಷಿಸಿದ ಘಟನೆ ಅಮೆರಿಕದ ಲಾಂಗ್​ ಐಲ್ಯಾಂಡ್​ನಲ್ಲಿ ನಡೆದಿದೆ.
ಲಾಂಗ್​ ಐಲ್ಯಾಂಡ್​ನಲ್ಲಿರುವ ರೋಲರ್​​ ಕೋಸ್ಟರ್ (Roller Coaster Rescue) ​​ನ್ನು 15 ಜನ ಮಕ್ಕಳು ಹಾಗೂ ಒಬ್ಬ ವಯಸ್ಕ ವ್ಯಕ್ತಿ ಏರಿದ್ದರು. ಆದರೆ ಆ ರೋಲರ್​ ಕೋಸ್ಟರ್​ ಯಂತ್ರ ಮಧ್ಯದಲ್ಲೇ ಕೈಕೊಟ್ಟ ಕಾರಣ ಸುಮಾರು 3 ರಿಂದ 4 ಗಂಟೆಗಳ ವರೆಗೆ ಅಲ್ಲಿಯೇ ಸಿಲುಕಿಕೊಂಡಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದೆ.

ನಾಲ್ಕು ಗಂಟೆ ನಂತರ ರಕ್ಷಣೆ!

ಅಮೆರಿಕದ ನ್ಯೂಯಾರ್ಕ್​ನ ಲಾಂಗ್​ ಐಲ್ಯಾಂಡ್​​ನಲ್ಲಿರುವ ಅಮ್ಯೂಸ್​ಮೆಂಟ್​ ಪಾರ್ಕಿನ ರೋಲರ್​ ಕೋಸ್ಟರ್​​ ರೈಡ್​ ಏರಿದ ಮಕ್ಕಳು ಹತ್ತಿದಾಗ ಸಾಹಸಭರಿತ ಪ್ರಯಾಣವನ್ನು ಅನುಭವಿಸಿದ್ದಾರೆ. ಆದರೆ ಕೆಲ ಸಮಯದ ಬಳಿಕ ವಾಹನ ನಿಧಾನವಾಗುತ್ತಾ ಬಂದಿದೆ.
ನಂತರ ಎತ್ತರದ ಸ್ಥಾನವೊಂದನ್ನು ತಲುಪಿ ನಿಂತು ಬಿಟ್ಟಿದೆ. ಆಗ ರೋಲರ್​ ಕೋಸ್ಟರ್​ನಲ್ಲಿದ್ದ 15 ಮಕ್ಕಳು ಹಾಗೂ ಒಬ್ಬ ವಯಸ್ಕ ವ್ಯಕ್ತಿ ಆಘಾತಕ್ಕೊಳಗಾಗಿದ್ದಾರೆ. ರೈಡ್​ಗೆ ಬಳಕೆಯಾಗುವ ಯಂತ್ರದಲ್ಲಿ ಏನೋ ಸಮಸ್ಯೆ ತಲೆದೂರಿದ ಹಿನ್ನಲೆ ಹೀಗೆ ಆಗಿದೆ ಎಂದು ತಿಳಿದು ಬಂದಿದೆ.
ಆದರೆ ಎಷ್ಟು ಪ್ರಯತ್ನ ಪಟ್ಟರೂ ವಾಹನ ಪ್ರಾರಂಭವಾಗದ ಹಿನ್ನಲೆ, ನಂತರ ನ್ಯೂಯಾರ್ಕ್​ನಿಂದ ಅಗ್ನಿಶಾಮಕ ದಳದವರನ್ನು ಕರೆತರಲಾಗಿದೆ.
ರೈಡ್​​ನಲ್ಲಿ ಸಿಲುಕಿದ್ದವರು ಚಿಕ್ಕ ಮಕ್ಕಳಾಗಿರುವ ಕಾರಣ ಅವರಿಗೆ ಪಾರ್ಕ್​ ಸಿಬ್ಬಂದಿ ನಿರಂತರವಾಗಿ ಧೈರ್ಯ ತುಂಬಿದ್ದಾರೆ. ನಂತರ ಅಗ್ನಿಶಾಮಕ ದಳದವರು ಸುಮಾರು ನಾಲ್ಕು ಗಂಟೆಗಳ ನಂತರ ಮಕ್ಕಳನ್ನು ಹಾಗೂ ಒರ್ವ ವಯಸ್ಕನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ, (ಏಜನ್ಸೀಸ್​).