ಆಮ್‌ಸ್ಟರ್‌ಡ್ಯಾಮ್: ನೆದರ್‌ಲ್ಯಾಂಡ್ಸ್‌ನ ಪ್ರಥಮ ಬಹಿರಂಗ ಸಲಿಂಗಿ ಪ್ರಧಾನಿಯಾಗಿ ಗುರುತಿಸಿಕೊಂಡಿರುವ ರಾಬ್ ಜೆಟ್ಟನ್, ತಾವು ಮುಂದಿನ ವರ್ಷ ತಂದೆ ಆಗಲಿದ್ದೇನೆ ಎಂದು ಹಂಚಿಕೊಂಡಿರುವ ಒಂದಷ್ಟು ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ತಮ್ಮ ಸಂಗಾತಿ ನಿಕೋಲಸ್ ಕೀನನ್ ಅವರೊಂದಿಗೆ ಮುಂದಿನ ವರ್ಷ ಮಗುವನ್ನು ಸ್ವಾಗತಿಸುವ ಖುಷಿಯಲ್ಲಿ ಈ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಸರೊಗಸಿ (ಬಾಡಿಗೆ ತಾಯ್ತನ) ಪ್ರಕ್ರಿಯೆ ಮೂಲಕ ಮಗು ಪಡೆಯಲು ನಾವಿಬ್ಬರು ಒಪ್ಪಿಕೊಂಡಿದ್ದು, 2027ಕ್ಕೆ ಶಿಶುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೀನನ್ ಅವರೊಂದಿಗೆ ಹೊಟ್ಟೆಯೊಳಗಿರುವ ಮಗುವಿನ ಅಲ್ಟ್ರಾಸೌಂಡ್ ಚಿತ್ರ ಹಿಡಿದಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. “ನಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಯೊಬ್ಬರ ಆಗಮನವಾಗಲಿದೆ. 2027ರಲ್ಲಿ ಭೇಟಿಯಾಗೋಣ” ಎಂಬ ಸಂದೇಶವನ್ನು ಬರೆದು ಹಂಚಿಕೊಂಡಿದ್ದಾರೆ.
ನಮ್ಮ ಈ ಖುಷಿ ಕ್ಷಣವನ್ನು ಸಾಧ್ಯವಾಗಿಸಿದ ಅಂಡಾಣು ದಾನಿ, ಸರೊಗಸಿ ಮದರ್ ಲಿಸಾ ಮತ್ತು ಅವರ ಕುಟುಂಬಕ್ಕೆ ನಾವೆಂದಿಗೂ ಕೃತಜ್ಞತರು. ಇವರ ಸಹಕಾರವಿಲ್ಲದೆ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ ಎಂದು ಭಾವುಕರಾಗಿ ಧನ್ಯವಾದ ತಿಳಿಸಿದ್ದಾರೆ.
ಅರ್ಜೆಂಟೀನಾದ ಹೆಸರಾಂತ ಹಾಕಿ ಆಟಗಾರ ನಿಕೋಲಸ್ ಕೀನನ್ ಅವರೊಂದಿಗೆ ಜೆಟ್ಟನ್ 2024ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಕಳೆದ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ, ಜೆಟ್ಟನ್ ನೆದರ್‌ಲ್ಯಾಂಡ್ಸ್‌ನ ಅತ್ಯಂತ ಕಿರಿಯ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಅದೇ ವರ್ಷದ ಫೆಬ್ರವರಿಯಲ್ಲಿ ಅವರು ದೇಶದ ಮೊದಲ ಬಹಿರಂಗ ಸಲಿಂಗಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದದು ಹಲವರ ಹುಬ್ಬೇರಿಸಿತು. ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿಗಳು ಎದುರುನೋಡುತ್ತಿರುವುದು ಜನತೆಗೆ ಮತ್ತೊಂದು ಹುಬ್ಬೇರಿಸುವ ಸಂಗತಿಯಾಗಿದೆ,(ಏಜೆನ್ಸೀಸ್).