Europe Heatwave 2026 
ವಿದೇಶ

ಯುರೋಪ್​ನಲ್ಲಿ ಭೀಕರ ಬಿಸಿಲು; ತೀವ್ರ ಶಾಖಕ್ಕೆ ಬಾಗಿದ ಟ್ರ್ಯಾಮ್ ಹಳಿಗಳು, ಕರಗುತ್ತಿರುವ ರಸ್ತೆಗಳ ಡಾಂಬರಿನ ವಿಡಿಯೋ ವೈರಲ್​..Europe Heatwave 2026

ಪ್ರಮುಖ ಮುಖ್ಯಾಂಶಗಳು

  • ಯುರೋಪ್​ನಲ್ಲಿ ಭೀಕರ ಬಿಸಿ, 1300ಕ್ಕೂ ಹೆಚ್ಚು ಜನರ ಸಾವು.
  • ಬಿಸಿಲ ತಾಪಕ್ಕೆ ಡಾಂಬರು ರಸ್ತೆಗಳು ಕರಗಿದ್ದು, ಹಳಿಗಳು ಬೆಂಡಾಗುತ್ತಿರುವ ವಿಡಿಯೋ ವೈರಲ್​.
  • ಯುರೋಪ್​ನಲ್ಲಿ ತಾಪಮಾನ 41 °C ದಾಟಿದೆ ಎನ್ನುವ ಬಗ್ಗೆ ಮಾಹಿತಿ ಬಿಚ್ಚಿಟ್ಟ ಹವಾಮಾನ ಇಲಾಖೆ.
Europe Heatwave 2026: ಬಾಗಿದ ಜರ್ಮನಿಯ ಟ್ರ್ಯಾಮ್ ಹಳಿಗಳು, ಫ್ರ್ಯಾನ್ಸ್​​ ರಸ್ತೆಗಳ ಡಾಂಬರು ಕರಗಿ, ಟೈಯರ್​ ಕರಗಿದೆ.​​ವಿಹಾರಕ್ಕೆ ಹೊರಗೆ ಬಂದ ಬೆಕ್ಕು ಶಾಖ ತಡೆಯಲಾಗದೆ ಛಂಗನೇ ಓಡಿದ್ದು, ಉಬ್ಬಿದ ಕಾರಿನ ಡಿಕ್ಕಿ, ಮೊಟ್ಟೆ ಹೊಡೆದು ತವಾಗೆ ಹಾಕಿದಂತೆ ಆಮ್ಲೇಟ್​ ಆಗುವಷ್ಟು ಮಿತಿ ಮೀರಿ ಶಾಖ ಕಾಣಿಸಿಕೊಂಡಿರುವುದು ಯುರೋಪ್​​ನಲ್ಲಿ, ಭೋಗೋಳ ಶಾಸ್ತ್ರದ ಪ್ರಕಾರ ವಿಶ್ವದ 2ನೇ ಅತ್ಯಂತ ಚಿಕ್ಕ ಖಂಡ ಎನಿಸಿಕೊಂಡಿರುವ ಐರೋಪ್ಯದಲ್ಲಿ ಹೀಟ್​ವೇವ್​ನಿಂದ 1300ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ವರದಿಯಾಗಿದೆ.
ಹೌದು, ಮೊದಲಬಾರಿಗೆ ಜರ್ಮನಿ, ಇಟಲಿ, ಸ್ಪೇನ್​​ ಜೆಕ್​ ಗಣರಾಜ್ಯದಲ್ಲಿ ತಾಪಮಾನ 41 °C ದಾಟಿದೆ. ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನವನ್ನು ಇಲ್ಲಿನ ಜನರು ಸದ್ಯ ಎದುರಿಸುತ್ತಿದ್ದಾರೆ. ತೀವ್ರ ಶಾಖಕ್ಕೆ ರಸ್ತೆ ಹಾಳಾಗುತ್ತಿರುವ ವಿಡಿಯೋಗಳು, ಪ್ರಾಣಿಗಳಿಗೆ, ತಿನ್ನುವ ಆಹಾರಕ್ಕೆ ಆಗುತ್ತಿರುವ ಸಮಸ್ಯೆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋಗಳು ಹರಿದಾಡುತ್ತಿದೆ.
ಸಾವು-ನೋವು
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಜೂನ್ 21 ರಿಂದ ಇಲ್ಲಿಯವರೆಗೂ ಯೂರೋಪ್​​ನಾದ್ಯಂತ 1,300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಐನೂರಕ್ಕೂ ಹೆಚ್ಚು ಜನರು ನಿತ್ಯ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಾರ್​​ನಲ್ಲಿ ಲಾಕ್​ ಆದ ಮಕ್ಕಳು,ಶಾಖಕ್ಕೆ ಪರ್ಯಾಯವಾಗಿ ಈಜಲು ಹೋದ ಮಕ್ಕಳು ಸೇರಿದಂತೆ ಹಲವರು ಮೃತಪಟ್ಟವರ ಲಿಸ್ಟ್​​ನಲ್ಲಿದ್ದಾರೆ ಎಂದು ಹೇಳಲಾಗಿದೆ.

ಕರಗುತ್ತಿರುವ ರಸ್ತೆಗಳು!

ಜರ್ಮನಿಯ ಲೀಪ್‌ಜಿಗ್‌ನಲ್ಲಿ ತೀವ್ರ ಶಾಖದಿಂದ ಟ್ರ್ಯಾಮ್ ಹಳಿಗಳ ಡಾಂಬರು ಕರಗಿ ಕಿತ್ತು ಬಂದಿರುವುದು, ಶಾಪಿಂಗ್​ಗೆ ಬಳಕೆ ಮಾಡಿರುವ ಟ್ರಾಲಿಗಳು ಬಾಗಿರುವುದು. ಚಪ್ಪಲಿಯ ರಬ್ಬರ್​ ಕರಗಿ ಬರುತ್ತಿರುವುದು. ಶಾಪಿಂಗ್​ ಮಾಲ್​ನಲ್ಲಿರುವ ಚಾಕ್ಲೆಟ್​ ಕರಗಿರುವುದು. ಕಾರಿನ ಹಿಂಭಾಗ ಉಬ್ಬಿ ನಿಂತಿರುವುದು. ಬಾಳೆ ಹಣ್ಣು ಸುಲಿದುಕೊಳ್ಳುವುದು ಹಾಗೂ ಮೊಟ್ಟೆ ಹೊಡೆದು ತವಕ್ಕೆ ಸುರಿದ ನಂತರ ಆಮ್ಲೇಟ್​ ಆಗುವ ವಿಡಿಯೋಗಳು ಸದ್ಯ ಹರಿದಾಡುತ್ತಿದೆ.

ನೀರು ಸಿಂಪಡಿಸುತ್ತಿರುವ ಪೊಲೀಸರು

ಹೀಟ್​ವೇವ್​ನಿಂದ ಜನರು ತತ್ತರಿಸಿರುವ ಹಿನ್ನೆಲೆ, ಅಲ್ಲಲ್ಲಿ ಗುಂಪಾಗಿ ಜನರು ನಿಂರತಿರುವ ಬಳಿ ಬರುವ ನೀರಿನ ಟ್ಯಾಂಕರ್​ಗಳು ಅವರ ಮೇಲೆ ನೀರು ಸಿಂಪಡಿಸುತ್ತಿರುವ ವಿಡಿಯೋಗಳು ಸಹ ಎಕ್ಸ್​ನಲ್ಲಿ ಹರಿದಾಡುತ್ತಿದೆ.
ಆಸ್ಪತ್ರೆಗಳಳಲ್ಲಿ ತೀವ್ರ ನಿಗಾ
ಪ್ಯಾರಿಸ್​ ಸುತ್ತಮುತ್ತಲಿನ 36 ಆಸ್ಪತ್ರೆಗಳಲ್ಲಿ ರೋಗಿಗಳ ಕಡೆ ತೀವ್ರ ಗಮನ ಹರಿಸಲು ಸೂಚನೆ ನೀಡಲಾಗಿದೆ. ಸಾರ್ವಜನಿಕ ಆಸ್ಪತ್ರೆಗೆ ನಿತ್ಯ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಶೇ.30ಕ್ಕೆ ಏರಿಕೆಯಾಗಿದೆ ಎಂದು ತಿಳಿಸಲಾಗಿದೆ. ಪ್ಯಾರಿಸ್​​ನಲ್ಲಿ ನಡೆಯಬೇಕಿದ್ದ ಪ್ಯಾರಿಸ್‌ನಲ್ಲಿ ನಡೆಯಬೇಕಿದ್ದ ಪ್ರೈಡ್ ಮಾರ್ಚ್ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ, (ಏಜೆನ್ಸೀಸ್).