ಅಮೆರಿಕಾದ ಕಾನ್ಸುಲೇಟ್ ಮೇಲೆ ದಾಳಿ ಮಡುತ್ತಿರುವ ಪಾಕಿಸ್ತಾನಿಯರು
- ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ನಿಧನ
- ಪಾಕಿಸ್ತಾನದ ಕರಾಚಿಯಲ್ಲಿ ಅಮೆರಿಕ ರಾಯಭಾರ ಕಚೇರಿ ಮೇಲೆ ಉದ್ರಿಕ್ತ ಗುಂಪಿನಿಂದ ದಾಳಿ
- ಕಟ್ಟಡದ ಗಾಜನ್ನು ಒಡೆದು ಬೆಂಕಿ ಇಟ್ಟ ಕಿರಾತಕತು
ಪಾಕಿಸ್ತಾನ: ಅಮೆರಿಕ- ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Khamenei) ನಿಧನ ಹೊಂದಿರುವುದಾಗಿ ವರದಿಯಾಗಿದೆ.
ಈ ಸುದ್ದಿ ಹೊರ ಬೀಳುತ್ತಿದ್ದಂತೆ ಪಾಕಿಸ್ತಾನದ ಹಿಂಸಾತ್ಮಕ ಗುಂಪೊಂದು, ಪಾಕಿಸ್ತಾನದಲ್ಲಿರುವ ಅಮೆರಿಕದ ಕಾನ್ಸುಲೇಟ್‌ಗೆ ನುಗ್ಗಿ, ಕಟ್ಟಡದ ಕೆಲ ಭಾಗಗಳಿಗೆ ಬೆಂಕಿಯನ್ನು ಹಚ್ಚಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಭಾನುವಾರ (ಮಾ.1) ಕರಾಚಿಯಲ್ಲಿರುವ ಯುಎಸ್ ಕಾನ್ಸುಲೇಟ್‌ಗೆ ಅಕ್ರಮವಾಗಿ ಪರವೇಶಿಸಿ ಅಲ್ಲಿಯ ವಾತಾವರಣವನ್ನು ಹಾಳು ಮಾಡುತ್ತಿರುವ ವಿಡಿಯೋ ಈದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋನಲ್ಲಿ, ಹಿಂಸಾತ್ಮಕ ಗುಂಪೊಂದು ಕಲ್ಲು ಮತ್ತು ಕೋಲುಗಳನ್ನು ಬಳಸಿ ಕಟ್ಟಡದ ಗಾಜನ್ನು ಒಡೆಯುತ್ತಿರುವುದನ್ನು ನೋಡಬಹುದಾಗಿದ್ದು, ಪೊಲೀಸರು ಈ ಗುಂಪಿನ ಮೇಲೆ ಅಶ್ರುವಾಯುವನ್ನು ಸಹ ಪ್ರಯೋಗಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಖಮೇನಿ ಖತಂ
ಶನಿವಾರ (ಫೆ.28) ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿ ದೇಶದ ಪ್ರಮುಖ ನಾಯಕರನ್ನು ಮತ್ತು ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿರುವುದಾಗಿ ತಿಳಿಸಿತು.
ಇಸ್ರೇಲ್ ಮತ್ತು ಅಮೆರಿಕದ ದಾಳಿಗೆ ಪ್ರತಿಕ್ರಿಯಿಸಿದ ಇರಾನ್ ದುಬೈ, ಕತಾರ್, ಅದು ಧಾಬಿ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿದ್ದ ಅಮೆರಿಕ ಮತ್ತು ಇಸ್ರೇಲ್ ದೇಶದ ಮಿಲಿಟರಿ ಶಕ್ತಿ ಕೇಂದ್ರಗಳನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಿತ್ತು.
ಆದರೆ ಅಮೆರಿಕ ಮತ್ತು ಇಸ್ರೇಲಿನ ಜಂಟಿ ದಾಳಿಯಲ್ಲಿ ಅಯತೊಲ್ಲಾ ಖಮೇನಿ ಸೇರಿದಂತೆ ಇರಾನಿನ ರಕ್ಷಣಾ ಮಂತ್ರಿ ಅಮೀರ್ ನಾಸಿರ್ಜಾದೆ ಮತ್ತು ಇರಾನಿನ ಐಆರ್‌ಜಿಸಿ ಮುಖ್ಯಸ್ಥ ಮೊಹಮ್ಮದ್ ಪಕ್ಪೌರ್ ಸಹ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಮೂಲದ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು.
ನಾಯಕನ ಸಾವನ್ನು ದೃಢ ಪಡಿಸಿದ ಇರಾನ್
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಸಂಘಟಿತ ಮಿಲಿಟರಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ರಾಜ್ಯ ಮಾಧ್ಯಮ ಅಧಿಕೃತವಾಗಿ ದೃಢಪಡಿಸಿದೆ. ಟ್ರಂಪ್ ಹೇಳಿಕೆಗಳನ್ನು ಅನುಸರಿಸಿ ತಸ್ನಿಮ್ ನ್ಯೂಸ್ ಏಜೆನ್ಸಿ ಮತ್ತು ಫಾರ್ಸ್ ನ್ಯೂಸ್ ಏಜೆನ್ಸಿಯಂತಹ ಪ್ರಮುಖ ಇರಾನಿನ ಸುದ್ದಿ ಸಂಸ್ಥೆಗಳಿಂದ ಈ ದೃಢೀಕರಣ ಬಂದಿದೆ,(ಏಜನ್ಸೀಸ್).