ಓಮನ್‌ನ ಕಂತಾಬ್ ಕಡಲತೀರದಲ್ಲಿ ಈಜಾಡುತ್ತಿರುವ ಅಪರೂಪದ ಗುಲಾಬಿ ಬಣ್ಣದ ಡಾಲ್ಫಿನ್ A rare pink dolphin swimming off the coast of Qantab in Oman
ವಿದೇಶ

ಓಮನ್ ಕಡಲತೀರದಲ್ಲಿ ಪ್ರತ್ಯಕ್ಷವಾಯ್ತು ಅಪರೂಪದ 'ಪಿಂಕ್​ ಡಾಲ್ಫಿನ್': ಈ ವಿಸ್ಮಯ ಜೀವಿ ಹಿಂದಿನ ಅಸಲಿ ಸತ್ಯ ಇಲ್ಲಿದೆ! Pink Dolphin

ಓಮನ್‌ನ ಕಂತಾಬ್ ಕಡಲತೀರದಲ್ಲಿ ಅಪರೂಪದ ಗುಲಾಬಿ (ಪಿಂಕ್) ಬಣ್ಣದ ಡಾಲ್ಫಿನ್ ಪ್ರತ್ಯಕ್ಷವಾಗಿದೆ. ಪ್ರವಾಸಿಗರ ಕಣ್ಮನ ಸೆಳೆದ ಈ ಅಚ್ಚರಿಯ ಜೀವಿಯ ವೈರಲ್ ವಿಡಿಯೋ ಹಾಗೂ ಇದರ ಹಿಂದಿನ ವೈಜ್ಞಾನಿಕ ಸತ್ಯ ಇಲ್ಲಿದೆ.

ಮಸ್ಕತ್​: ಸಾಮಾನ್ಯವಾಗಿ ನಾವು ಬಿಳಿ, ಕಂದು ಹಾಗೂ ಕಪ್ಪು ಬಣ್ಣಗಳ ಮಿಶ್ರಣವುಳ್ಳ ಡಾಲ್ಫಿನ್​ಗಳನ್ನು ನೋಡಿರುತ್ತೇವೆ. ಭಾರತದ ರಾಷ್ಟ್ರೀಯ ಜಲಚರ ಕೂಡ ಗಂಗಾನದಿಯ ಡಾಲ್ಫಿನ್​ ಆಗಿದೆ. ಮನುಷ್ಯರ ಮಾತುಗಳನ್ನು ಅರ್ಥೈಸಿಕೊಳ್ಳುವ ಈ ಜೀವಿಗಳು ವಿಶೇಷವಾಗಿ ಮಕ್ಕಳೊಂದಿಗೆ ಆತ್ಮೀಯವಾಗಿ ವರ್ತಿಸುತ್ತವೆ.

ಆದರೆ, ಓಮನ್​ ದೇಶದ ಮಸ್ಕತ್​ನಲ್ಲಿರುವ ಕಂತಾಬ್ ಕಡಲತೀರದಲ್ಲಿ ಕಂಡುಬಂದಿರುವ ಗುಲಾಬಿ ಬಣ್ಣದ ಡಾಲ್ಫಿನ್​ ವಿಡಿಯೋವೊಂದು ಈಗ ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಈ ಮನಮೋಹಕ ದೃಶ್ಯವು, ಓಮನ್​ ದೇಶದ ಕಂತಾಬ್ ಬೀಚ್​ನಲ್ಲಿ ಕಂಡುಬಂದಿದ್ದು, ಬೀಚ್​ನಲ್ಲಿ ಸ್ಕೀಯಿಂಗ್​ ಮಾಡಲು ಹೋಗಿದ್ದ ಪ್ರವಾಸಿಗರು ಈ ದೃಶ್ಯವನ್ನು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಈ ಡಾಲ್ಫಿನ್​ ಗಲ್ಫ್​ ಆಫ್​ ಓಮನ್​ನಿನ್ನ ನೀಲಿ ಬಣ್ಣದ ಸಮುದ್ರದಲ್ಲಿ ತನ್ನ ಗುಲಾಬಿ ಬಣ್ಣವನ್ನು ಪ್ರದರ್ಶಿಸುತ್ತಾ, ಮೋಹವಾಗಿ ಚಲಿಸುತ್ತಿರುವ ವಿಡಿಯೋ ನೋಡುಗರ ಮನವನ್ನು ಕದ್ದಿದೆ.

ಡಾಲ್ಫಿನ್​ ಗುಲಾಬಿ ಬಣ್ಣದಲ್ಲಿರುತ್ತಾ?

ಸಾಮಾನ್ಯವಾಗಿ ಡಾಲ್ಫಿನ್​ಗಳು ಕಂದು, ಬಿಳಿ, ಕಪ್ಪು ಬಣ್ಣದಲ್ಲಿರುತ್ತವೆ. ಆದರೆ ಡಾಲ್ಫಿನ್​ಗಳು ಗುಲಾಬಿ ಬಣ್ಣವನ್ನು ಹೇಗೆ ಪಡೆಯುತ್ತವೆ? ಇವು ನಿಜವಾಗಿಯೂ ಗುಲಾಬಿ ಬಣ್ಣದಲ್ಲಿರುತ್ತವೆಯೋ? ಅಥವಾ ನಮ್ಮ ಕಣ್ಣಿಗೆ ಹಾಗೆ ಕಾಣಿಸುತ್ತದೆಯೋ? ಎಂಬ ಪ್ರಶ್ನೆಗೆ ವಿಜ್ಞಾನದಲ್ಲಿಯೇ ಉತ್ತರವಿದೆ.

ಡಾಲ್ಫಿನ್​ಗಳಲ್ಲಿ ಗುಲಾಬಿ ಬಣ್ಣ ಎನ್ನುವುದು ಅವು ಜನಿಸಿದ ಪ್ರಭೇದದ ಮೇಲೆ ನಿರ್ಧರಿತವಾಗಿರುತ್ತದೆ. ಈ ಗುಲಾಬಿ ಬಣ್ಣದ ಡಾಲ್ಫಿನ್​ಗಳು ಸಿಹಿ ನೀರಿನಲ್ಲಿ ಜನ್ಮತಾಳುತ್ತವೆ, ಅಮೆಜಾನ್​ ಅರಣ್ಯ ಪ್ರದೇಶದಲ್ಲಿ ಬೊಟೊ ಎಂಬ ತಳಿಯಲ್ಲಿ ಈ ಗುಲಾಬಿ ಬಣ್ಣದ ಡಾಲ್ಫಿನ್​ಗಳು ಜನ್ಮತಾಳುತ್ತವೆ ಎನ್ನುತ್ತಾರೆ.

ಡಾಲ್ಫಿನ್​ಗಳ ಸ್ಕೇಲ್​ಗಳ ಬಣ್ಣ ಬದಲಾದಂತೆ ಅವುಗಳ ಬಣ್ಣ ಬದಲಾಗುತ್ತದೆ. ಈ ಜೀವಿಗಳು ವಾಸಿಸುವ ಪ್ರದೇಶ, ಸೇವಿಸುವ ಆಹಾರ ಹಾಗೂ ಪರಿಸರ ವ್ಯವಸ್ಥೆ ಆಧಾರದಲ್ಲಿ ಅವುಗಳ ಬಣ್ಣ ಬದಲಾಗುತ್ತದೆ ಎಂದು ತಿಳಿದುಬಂದಿದೆ. ಆದರೆ, ಈ ಗುಲಾಬಿ ಬಣ್ಣದ ಡಾಲ್ಫಿನ್​ಗಳು ತೀರಾ ಅಪರೂಪ ಎಂದು ಹೇಳಲಾಗುತ್ತದೆ, (ಏಜೆನ್ಸೀಸ್​).