ಸಹೋದರಿಯೊಂದಿಗೆ ರಕ್ಷಾ ಬಂಧನ ಆಚರಿಸಿದ ಮಾಜಿ ಪಾಕ್ ಕ್ರಿಕೆಟ್ ಆಟಗಾರ ಡ್ಯಾನಿಶ್ ಕನೇರಿಯಾ
ಇಸ್ಲಾಮಾಬಾದ್: ಸದ್ಯ ಸೋಷಿಯಲ್ ಮೀಡಿಯಾನಲ್ಲಿ ರಕ್ಷಾ ಬಂಧನದ ಟ್ರೆಂಡ್ ಜೋರಾಗಿದೆ. ಅಕ್ಕ-ತಂಗಿಯರು ತಮ್ಮ ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಸಂತೋಷ ಮತ್ತು ಸಡಗರದೊಂದಿದೆ ಆಚರಿಸುತ್ತಿದ್ದಾರೆ.
ಈ ಹಬ್ಬವನ್ನು ಹೆಚ್ಚಿನದಾಗಿ ಭಾರತದಲ್ಲಿಯೇ ಆಚರಸಿಲಾಗುತ್ತದೆ, ಆದರೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿರುವ ಹಿಂದೂ ಕುಟುಂಬಗಳು ಕೂಡ ಈ ಹಬ್ಬವನ್ನು ಅಷ್ಟೇ ಸಂಭ್ರಮದಿಂದ ಆಚರಿಸುತ್ತಾರೆ.
ಈದೀಗ ಪಾಕಿಸ್ತಾನ ಕ್ರಿಕೆಟ್ನ ಮಾಜಿ ಆಟಗಾರ ಡ್ಯಾನಿಶ್ ಕನೇರಿಯಾ (Danish Kaneria) ತಮ್ಮ ಸಹೋದರಿಯರು ಹಾಗೂ ಬಂಧು-ಮಿತ್ರರೊಂದಿಗೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಿಕೊಂಡಿರುವ ಫೋಟೊಗಳು ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಕನೇರಿಯಾ!
ರಕ್ಷಾ ಬಂಧನ ಹಬ್ಬದ ವಿಶೇಷ ದಿನದಂದು ಟ್ವಿಟರ್ನಲ್ಲಿ, ಡ್ಯಾನಿಶ್ ಕನೇರಿಯಾ, ತಮ್ಮ ರಕ್ಷಾ ಬಂಧನ ಆಚರಣೆಯ ಕೆಲವು ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ರಾಖಿಯನ್ನು ಆಚರಿಸುವುದು ಈ ದಿನವನ್ನು ಇನ್ನಷ್ಟು ವಿಶೇಷವಾಗಿಸಿದೆ. ಪ್ರೀತಿ, ನಗು, ಮರೆಯಲಾಗದ ನೆನಪುಗಳು ಮತ್ತು ನಮ್ಮ ಜೀವನಕ್ಕೆ ನಿಜವಾದ ಅರ್ಥ ತುಂಬುವ ಈ ಸುಂದರ ಬಂಧಗಳಿಗೆ ನಾನು ಸದಾ ಕೃತಜ್ಞನಾಗಿರುತ್ತೇನೆ ಎಂದು ಕನೇರಿಯಾ ಬರೆದುಕೊಂಡಿದ್ದಾರೆ. ಕನೇರಿಯಾ ಅವರ ಈ ಮಾತುಗಳು ಈಗ ಕೇವಲ ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ಮಾತ್ರವಲ್ಲ, ಭಾರತದಲ್ಲಿರುವವರ ಮನವನ್ನೂ ಸಹ ತಲುಪಿದೆ.
ರಕ್ಷಾ ಬಂಧನ ಅಂದ್ರೆ ಕೇವಲ ಅಣ್ಣ-ತಂಗಿಯರ ಹಬ್ಬ ಮಾತ್ರವಲ್ಲ, ಪರಸ್ಪರ ಪ್ರೀತಿ ಹಾಗೂ ರಕ್ಷಣೆಯ ಭರವಸೆ ನೀಡುವ ಅಪರೂಪದ ಸಂಬಂಧಗಳ ಸಂಕೇತ. ಕನೇರಿಯಾ ತಮ್ಮ ಪೋಸ್ಟ್ ಮೂಲಕ ಈ ಭಾವನಾತ್ಮಕ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಪಾಕಿಸ್ತಾನದಂತಹ ದೇಶದಲ್ಲಿ ಮುಕ್ತವಾಗಿ ತಮ್ಮ ಧರ್ಮ ಹಾಗೂ ಹಬ್ಬಗಳನ್ನು ಆಚರಿಸಿಕೊಳ್ಳಲು ಅವಕಾಶವಿರದ ಸಂದರ್ಭದಲ್ಲಿ ಕನೇರಿಯಾ ಅವರ ಪೋಸ್ಟ್ ಎಲ್ಲಡೆ ಮೆಚ್ಚುಗೆಗೆ ಪಾತ್ರವಾಗಿದೆ, (ಏಜನ್ಸೀಸ್).