Rahul Gandhi | ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 
ವಿದೇಶ

Rahul Gandhi | ರಾಹುಲ್ ಗಾಂಧಿ ಜರ್ಮನಿ ಪ್ರವಾಸ; ವಿದೇಶ್ ನಾಯಕ್ ಮತ್ತೊಂದು ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಾರೆ: ಬಿಜೆಪಿ ಅಪಹಾಸ್ಯ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಕೈಗೊಳ್ಳುತ್ತಿರುವ ಜರ್ಮನಿ ಪ್ರವಾಸವನ್ನು ಬಗ್ಗೆ ಟೀಕಿಸಿದ ಬಿಜೆಪಿ, ವಿದೇಶ್ ನಾಯಕ್ ಮತ್ತೊಂದು ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಾರೆ ಎಂದು ಬುಧವಾರ (ಡಿ.10) ವ್ಯಂಗ್ಯವಾಡಿದೆ.
ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ, ರಾಹುಲ್ ಗಾಂಧಿ ಮತ್ತೊಮ್ಮೆ ಮಾಡಬಹುದಾದ ಅತ್ಯುತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೆ, ಚಳಿಗಾಲದ ಅಧಿವೇಶನ ಡಿಸೆಂಬರ್ 19 ರವರೆಗೆ ಮುಂದುವರಿಯುತ್ತಿದ್ದರೂ ವಿರೋಧ ಪಕ್ಷದ ನಾಯಕರು ದೇಶವನ್ನು ತೊರೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಂದುವರೆದು ಮಾತನಾಡಿದ ಪೂನವಾಲಾ, ಈ ಸಮಯವನ್ನು ಹಿಂದಿನ ಚುನಾವಣೆಗಳಿಗೆ ಜೋಡಿಸಿದೆ ಬಿಜೆಪಿ, ಬಿಹಾರ ಚುನಾವಣೆಯ ಸಮಯದಲ್ಲಿ ಗಾಂಧಿ ವಿದೇಶದಲ್ಲಿದ್ದರು ಮತ್ತು ನಂತರ ಜಂಗಲ್ ಸಫಾರಿಗೆ ಹೋಗಿದ್ದರು ಎಂದು ಪೂನವಲ್ಲಾ ನೆನಪಿಸಿಕೊಂಡಿದ್ದಾರೆ. ಅಲ್ಲದೆ, ವಿದೇಶ್ ನಾಯಕ್ ಮತ್ತೊಂದು ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ರಾಹುಲ್​ ಚುನಾವಣೆಯಲ್ಲಿ ಸೋತಾಗ, ನಾವು ಚುನಾವಣೆಯಲ್ಲಿ ಏಕೆ ಸೋಲುತ್ತಿದ್ದೇವೆ ಎಂದು ಕೇಳುತ್ತಾರೆ? ಆದರೆ, ಅವರ ಮನಸ್ಸು ಜನರ ಮಧ್ಯದಲ್ಲಿಲ್ಲ. ಅದು ಪ್ರವಾಸ ಮತ್ತು ಪ್ರಯಾಣದಲ್ಲಿ ಮಾತ್ರ ಇದೆ ಎಂದು ಪೂನವಾಲಾ ಕಿಡಿಕಾರಿದ್ದಾರೆ.
ಪ್ರವಾಸದಲ್ಲಿ 6 ದಿನಗಳ ಭೇಟಿಯ ಸಮಯದಲ್ಲಿ ಗಾಂಧಿಯವರು ಐಒಸಿ ಅಧ್ಯಕ್ಷ ಸ್ಯಾಮ್ ಪಿತ್ರೋಡಾರೊಂದಿಗೆ ಭಾರತೀಯ ವಲಸಿಗರೊಂದಿಗೆ ಸಂವಹನ ನಡೆಸಲಿದ್ದಾರೆ. ಜರ್ಮನ್ ಸರ್ಕಾರಿ ಮಂತ್ರಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ಕಾಂಗ್ರೆಸ್ ದೃಢಪಡಿಸಿದೆ.
ಸಂಸದರು ಮತ್ತು ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ಡಿಸೆಂಬರ್ 15 ರಿಂದ 20 ರವರೆಗೆ ಜರ್ಮನಿಗೆ ಭೇಟಿ ನೀಡಲಿದ್ದಾರೆ ಎಂದು ಐಒಸಿ ಜರ್ಮನಿಯ ಅಧ್ಯಕ್ಷ ಬಲ್ವಿಂದರ್ ಸಿಂಗ್ ಹೇಳಿದ್ದಾರೆ. ಅಲ್ಲದೆ, ಭಾರತದ ಜಾಗತಿಕ ಪಾತ್ರದ ಬಗ್ಗೆ ಚರ್ಚಿಸಲು ಮತ್ತು ಜರ್ಮನ್ ಶಾಸಕರು ಮತ್ತು ವಲಸೆ ಸಮುದಾಯದೊಂದಿಗೆ ವಿನಿಮಯವನ್ನು ಬಲಪಡಿಸಲು ಈ ಸಭೆಗಳು ವೇದಿಕೆಯನ್ನು ಒದಗಿಸುತ್ತವೆ ಎಂದು ಐಒಸಿ ಯುಕೆಯ ವಿಕ್ರಮ್ ದುಹಾನ್ ಹೇಳಿದ್ದಾರೆ,(ಏಜೆನ್ಸೀಸ್).