Russia | ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ಮಾಸ್ಕೋ: ರಷ್ಯಾ(Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎರಡು ದಿನಗಳ ಭಾರತ ಭೇಟಿಗೂ ಮುನ್ನ, ಸುಖೋಯ್ ಸು-57 ಸ್ಟೆಲ್ತ್ ಫೈಟರ್ ಜೆಟ್‌ಗಳು ಮತ್ತು ಎಸ್-400 ವಾಯು ರಕ್ಷಣಾ ವ್ಯವಸ್ಥೆಗಳು ಸೇರಿದಂತೆ ಪ್ರಮುಖ ರಕ್ಷಣಾ ಒಪ್ಪಂದಗಳ ಕುರಿತು ಚರ್ಚಿಸುವ ನಿರೀಕ್ಷೆಯಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ದೃಢಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪೆಸ್ಕೋವ್, ಪುಟಿನ್ ಭೇಟಿಯ ಸಮಯದಲ್ಲಿ ಇದನ್ನು ಚರ್ಚಿಸಲಾಗುವುದು ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಮುಂಬರುವ ಭಾರತ ಭೇಟಿಯ ಸಮಯದಲ್ಲಿ ಪುಟಿನ್ ಸು-57 ವಿಮಾನಗಳ ವಿಷಯವನ್ನು ಖಂಡಿತವಾಗಿಯೂ ಚರ್ಚೆಯಾಗುತ್ತದೆ. ನಾವು ನಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಬೇಕು. ಉಭಯ ದೇಶಗಳ ನಡುವೆ ಪರಸ್ಪರ ಪ್ರಯೋಜನವನ್ನು ತರುವ ನಮ್ಮ ವ್ಯಾಪಾರವನ್ನು ನಾವು ಭದ್ರಪಡಿಸಿಕೊಳ್ಳಬೇಕು ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಡಿಮಿಟ್ರಿ, ಭಾರತವು ತನ್ನ S-400 ವಾಯು ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸಲು 300 ರಷ್ಯಾದ ಕ್ಷಿಪಣಿಗಳನ್ನು ಖರೀದಿಸಲು ಯೋಚಿಸುತ್ತಿದೆ. ಅಲ್ಲದೆ, ಐದು ಹೆಚ್ಚುವರಿ S-400 ಸ್ಕ್ವಾಡ್ರನ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸುತ್ತಿದೆ ಎಂದು ವರದಿಗಳು ಆಗಿದ್ದವು.
ಭಾರತವು ಆರಂಭದಲ್ಲಿ Su-57 ವೇದಿಕೆಯ ಸುತ್ತಲೂ ನಿರ್ಮಿಸಲಾದ FGFA (ಐದನೇ ತಲೆಮಾರಿನ ಯುದ್ಧ ವಿಮಾನ) ಕಾರ್ಯಕ್ರಮದಲ್ಲಿ ಪ್ರಮುಖ ಸಹಯೋಗಿಯಾಗಿತ್ತು. ಅಲ್ಲದೆ, ರಹಸ್ಯ, ಏವಿಯಾನಿಕ್ಸ್ ಮತ್ತು ಎಂಜಿನ್ ನವೀಕರಣಗಳಿಗೆ ಸಂಬಂಧಿಸಿದ ಅವಶ್ಯಕತೆಗಳನ್ನು ರೂಪಿಸುವಲ್ಲಿ ಪಾತ್ರವಹಿಸಿದೆ. ಅದರೆ, ವೆಚ್ಚ, ತಂತ್ರಜ್ಞಾನ ಹಂಚಿಕೆ ಮತ್ತು ಕಾರ್ಯಕ್ಷಮತೆಯ ಕೊರತೆಯಿಂದಾಗಿ, ಭಾರತ ತನ್ನ ಭಾಗವಹಿಸುವಿಕೆಯನ್ನು ಸ್ಥಗಿತಗೊಳಿಸಿತು ಮತ್ತು ನಂತರ ಯೋಜನೆಯಿಂದ ನಿರ್ಗಮಿಸಿತು. ಇದರ ಹೊರತಾಗಿಯೂ, Su-57 ಭಾರತ ಮತ್ತು ರಷ್ಯಾ ನಡುವಿನ ನಡೆಯುತ್ತಿರುವ ಕಾರ್ಯತಂತ್ರದ ಸಂವಾದದ ಭಾಗವಾಗಿ ಉಳಿದಿದೆ.
ಆಪರೇಷನ್ ಸಿಂಧೂರ್ ಸಮಯದಲ್ಲಿ ನಿಯೋಜಿಸಲಾದ ಈ ಕ್ಷಿಪಣಿಗಳ ಖರೀದಿಗಾಗಿ ಭಾರತವು ಮಾಸ್ಕೋಗೆ ಪ್ರಸ್ತಾವನೆ (RFP) ವಿನಂತಿಯನ್ನು ನೀಡಲು ಸಿದ್ಧತೆ ನಡೆಸುತ್ತಿದೆ. ಅಲ್ಲದೆ, ಡಿಸೆಂಬರ್ 5 ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಮುಂಬರುವ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸುವ ನಿರೀಕ್ಷೆಯಿದೆ.
ಭಾರತ ಮತ್ತು ರಷ್ಯಾ ಮೊದಲ ಬಾರಿಗೆ 2018 ರಲ್ಲಿ S-400 ವ್ಯವಸ್ಥೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದವು, ಇದು ಸುಧಾರಿತ ವಾಯು ರಕ್ಷಣಾ ವೇದಿಕೆಯ ಐದು ಘಟಕಗಳಿಗೆ $5 ಬಿಲಿಯನ್ ಮೌಲ್ಯದ ಒಪ್ಪಂದವಾಗಿದೆ. ಇಲ್ಲಿಯವರೆಗೆ, ಐದು ಸ್ಕ್ವಾಡ್ರನ್‌ಗಳಲ್ಲಿ ಮೂರು ಈಗಾಗಲೇ ವಿತರಿಸಲ್ಪಟ್ಟಿವೆ,(ಏಜೆನ್ಸೀಸ್).