ಮಾಸ್ಕೋ: ಉಕ್ರೇನ್‌ನಲ್ಲಿನ ಯುದ್ಧದ ಕುರಿತು ಫ್ರಾನ್ಸ್‌ನ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತನಾಡಲು ವ್ಲಾಡಿಮಿರ್ ಪುಟಿನ್ ಸಿದ್ಧರಿದ್ದಾರೆ ಎಂದು ರಷ್ಯಾ ಅಧ್ಯಕ್ಷರ ವಕ್ತಾರರು ಭಾನುವಾರ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪುಟಿನ್ "ಮ್ಯಾಕ್ರನ್ ಜೊತೆ ಸಂವಾದದಲ್ಲಿ ತೊಡಗಿಸಿಕೊಳ್ಳಲು ಸಿದ್ಧತೆ ವ್ಯಕ್ತಪಡಿಸಿದ್ದಾರೆ" ಎಂದು ರಷ್ಯಾ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸುದ್ದಿ ಸಂಸ್ಥೆ RIA ನೊವೊಸ್ಟಿಗೆ ತಿಳಿಸಿದರು.ಪರಸ್ಪರ ರಾಜಕೀಯ ಇಚ್ಛಾಶಕ್ತಿ ಇದ್ದರೆ, ಇದನ್ನು ಸಕಾರಾತ್ಮಕವಾಗಿ ನಿರ್ಣಯಿಸಬಹುದು ಎಂದು ಹೇಳಿದ್ದಾರೆ.
ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಯುರೋಪ್ ಪುಟಿನ್ ಅವರನ್ನು ಸಂಪರ್ಕಿಸಬೇಕು. "ಮುಂಬರುವ ವಾರಗಳಲ್ಲಿ ಈ ಚರ್ಚೆಯನ್ನು ಪುನಃ ಪ್ರಾರಂಭಿಸಲು ಸರಿಯಾದ ಚೌಕಟ್ಟನ್ನು ಕಂಡುಕೊಳ್ಳುವುದು ಯುರೋಪಿಯನ್ನರು ಮತ್ತು ಉಕ್ರೇನಿಯನ್ನರಾದ ನಮ್ಮ ಹಿತಾಸಕ್ತಿಯಾಗಿದೆ ಎಂದು ನಾನು ನಂಬುತ್ತೇನೆ" ಎಂದು ಫ್ರೆಂಚ್ ಅಧ್ಯಕ್ಷರ ಮ್ಯಾಕ್ರನ್ ಈ ವಾರದ ಹಿಂದೆ ಹೇಳಿದ್ದರು. ಮ್ಯಾಕ್ರನ್ ಹೇಳಿಕೆಗೆ ಇದೀಗ ರಷ್ಯಾ ಅಧ್ಯಕ್ಷ ವಕ್ತಾರ ಪ್ರತಿಕ್ರಿಯಿಸಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಮ್ಯಾಕ್ರನ್ ಅವರು ಯೂರೋಪ್ ಪುಟಿನ್ ಜೊತೆ ಮತ್ತೆ ಸಂಭಾಷಣೆ ಆರಂಭಿಸಬೇಕು. ವಿಶೇಷವಾಗಿ ಉಕ್ರೇನ್ ಯುದ್ಧವನ್ನು ಕೊನೆಗಾಣಿಸಲು. ಅಲ್ಲದೇ, ವಿಶೇಷವಾಗಿ ಅಮೆರಿಕದ ಟ್ರಂಪ್ ಆಡಳಿತದ ಮಧ್ಯಸ್ಥಿಕೆ ವಿಫಲವಾದರೆ ಯುರೋಪ್‌ಗೆ ಪುಟಿನ್ ಜೊತೆ ಮಾತನಾಡುವುದು ಉಪಯುಕ್ತವಾಗುತ್ತದೆ ಎಂದು ಮ್ಯಾಕ್ರನ್ ಹೇಳಿದ್ದರು.
ಇನ್ನು ಪುಟಿನ್ ಅವರು ಡಿಸೆಂಬರ್ 19ರ ಟಿವಿ ಸಂದರ್ಶನದಲ್ಲಿ ಯುದ್ಧವನ್ನು ಮುಂದುವರಿಸಲು ಸಿದ್ಧರಿದ್ದಾರೆ ಎಂದು ಸೂಚಿಸಿದ್ದರು. ಆದರೆ, ಇದೀಗ ಶಾಂತಿ ಮಾತುಕತೆಗೂ ಒಪ್ಪಿದ್ದಾರೆ ಎನ್ನಲಾಗಿದೆ. ಇತ್ತ ಮೊದಲಿನಿಂದ್ಲೂ ಉಕ್ರೇನ್ ಅಧ್ಯಕ್ಷ ವೋಲೋಡಿಮಿರ್ ಜೆಲೆನ್ಸ್ಕಿ ಅವರು ಅಮೆರಿಕವು ರಷ್ಯಾ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದ್ದಾರೆ,(ಏಜೆನ್ಸೀಸ್).