- ಫೆ.28ರಂದು ಇರಾನ್‌ನ ಶಾಲೆಯೊಂದರ ಮೇಲೆ ಅಮೆರಿಕ ಮತ್ತು ಇಸ್ರೇಲಿ ಜಂಟಿ ಕ್ಷಿಪಣಿ ದಾಳಿ
- ಇರಾನ್ ಸುಪ್ರೀಂ ಲೀಡರ್ ಅಯೊತಲ್ಲಾ ಅಲಿ ಖಮೇನಿ ಅವರ ಹತ್ಯೆ
- ಸೇಡಿಗೆ ಸೇಡು ಎಂದು ಪಣತೊಟ್ಟಿವೆ ಇರಾನ್-ಇಸ್ರೇಲ್
- 2024ರಲ್ಲೇ ಸ್ಫೋಟಕ ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ
ವಾಷಿಂಗ್ಟನ್: ಫೆ.28ರಂದು ಇರಾನ್‌ನ (Iran) ಶಾಲೆಯೊಂದರ ಮೇಲೆ ಅಮೆರಿಕ ಮತ್ತು ಇಸ್ರೇಲಿ ಮಿಲಿಟರಿ ನಡೆಸಿದ ಜಂಟಿ ಕ್ಷಿಪಣಿ ದಾಳಿ ಬರೋಬ್ಬರಿ 160ಕ್ಕೂ ಅಧಿಕ ಅಮಾಯಕ ಮಕ್ಕಳನ್ನು ಬಲಿ ಪಡೆಯಿತು. ಅದರ ಬೆನ್ನಲ್ಲೇ, ತನ್ನ ಸುಪ್ರೀಂ ಲೀಡರ್ ಅಯೊತಲ್ಲಾ ಅಲಿ ಖಮೇನಿ ಅವರ ಹತ್ಯೆಗೂ ಕಾರಣವಾಯಿತು. ಇಲ್ಲಿಂದ, ಸೇಡಿಗೆ ಸೇಡು ಎಂದು ಪಟ್ಟುಹಿಡಿದ ಇರಾನಿನ ಸೇನಾ ಪಡೆ, ಇಸ್ರೇಲ್ ಮತ್ತು ಕೊಲ್ಲಿಯಲ್ಲಿರುವ ಯುಎಸ್ ಮಿಲಿಟರಿ ನೆಲೆಗಳು ಸೇರಿದಂತೆ ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ಸರಣಿ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸುತ್ತಿದೆ.
ತನ್ನ ಆಡಳಿತದಲ್ಲಿರುವ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವ ಇರಾನ್, ಅಮೆರಿಕ ಮತ್ತು ಇಸ್ರೇಲ್ ಹಾಗೂ ಅದರ ಮಿತ್ರ ರಾಷ್ಟ್ರಗಳನ್ನು ಹೊರತುಪಡಿಸಿ, ಇನ್ನೆಲ್ಲ ದೇಶಗಳ ತೈಲ ಹಡಗುಗಳ ಸಂಚಾರಕ್ಕೆ ಅನುಮತಿ ನೀಡಿದೆ. ದುಬೈ, ಕುವೈತ್ ಮೇಲೆ ಬ್ಯಾಕ್ ಟು ಬ್ಯಾಕ್ ದಾಳಿ ಮಾಡುತ್ತಿರುವ ಇರಾನ್, ಇಸ್ರೇಲಿ ಪ್ರಧಾನಿ ಕಥೆಯನ್ನು ಮುಗಿಸುವುದಾಗಿ ಪಣತೊಟ್ಟಿರುವುದು ಅಚ್ಚರಿಯ ನಡೆ. ಈ ರಾಷ್ಟ್ರಗಳ ನಡುವಿನ ಯುದ್ಧ ಸದ್ಯ ಇತರೆ ದೇಶಗಳು ಮತ್ತು ಭಾರತದ ಮೇಲೆ ಭಾರೀ ಪರಿಣಾಮ ಬೀರಿದೆ.
ಸೇಡು ತೀರಿಸಿಕೊಳ್ಳಲು ಇರಾನ್ ಪಣ
ಹಾರ್ಮುಜ್ ಜಲಸಂಧಿಯಲ್ಲಿ ಯುದ್ಧ ಭೀತಿಯಿಂದ ತೈಲ ಹಡಗುಗಳು ನಿಂತಲ್ಲೇ ನಿಂತ ಕಾರಣ, ಭಾರತದಲ್ಲಿ ಗ್ಯಾಸ್ ಬಿಕ್ಕಟ್ಟು ಜೋರಾಯಿತು. ಅನಿಲ ಕೊರತೆ ಆವರಿಸಿಕೊಂಡಿದೆ ಎಂಬ ವಿಷಯ ಹೊರಬೀಳುತ್ತಿದ್ದಂತೆ, ಹೋಟೆಲ್ ಉದ್ಯಮವನ್ನೇ ನಂಬಿದವರ ಆರ್ಥಿಕ ಪರಿಸ್ಥಿತಿ ಬಿಗುಡಾಯಿಸಿತು. ಹಲವು ರಾಜ್ಯಗಳಲ್ಲಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಅಲಭ್ಯತೆಯಿಂದ ಹೋಟೆಲ್ಗಳು ಸಂಪೂರ್ಣವಾಗಿ ಬಂದ್ ಆದವು. ಇಷ್ಟೆಲ್ಲ ಆದರೂ ಇರಾನ್ ಮತ್ತು ಇಸ್ರೇಲ್-ಯುಎಸ್ ಅದ್ಯಾಕೋ ಯುದ್ಧವನ್ನು ನಿಲ್ಲಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದರಿಂದ ಮುಂದೆ ಇನ್ನೂ ಏನೇನು ಗಂಡಾಂತರ ಕಾದಿದೆಯೋ ಎಂಬುದು ನಿಜಕ್ಕೂ ತಿಳಿಯದು. ಆದರೆ, ಖ್ಯಾತ ಜ್ಯೋತಿಷಿಯೊಬ್ಬರು 2024ರಲ್ಲೇ ಇರಾನ್ ಇಂತಹ ಕಠಿಣ ಪರಿಸ್ಥಿತಿಗೆ ಸಿಲುಕಲಿದೆ ಎಂದು ನುಡಿದ ಭವಿಷ್ಯವಾಣಿಯೊಂದು ಇದೀಗ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಸಲಿಗೆ, ಇದು ಅಕ್ಷರಶಃ ನಿಜವಾಗಿದೆ ಕೂಡ.
ಕಡೆಗೂ ನಿಜವಾಯ್ತು
ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ತಮ್ಮ ಸ್ಫೋಟಕ ಭವಿಷ್ಯ ನುಡಿಗಳಿಂದ ನೆಟ್ಟಿಗರ ಹುಬ್ಬೇರಿಸುವ ಮಹಿಳಾ ಜ್ಯೋತಿಷಿ ಆ್ಯಸ್ಟ್ರೋ ಶರ್ಮಿಸ್ಥ ಇರಾನ್ ಯುದ್ಧ ಬಗ್ಗೆ 2024ರಲ್ಲೇ ಅಚ್ಚರಿಯ ಸಂಗತಿಯನ್ನು ರಿವೀಲ್ ಮಾಡಿದ್ದಾರೆ. ಅದು ಈಗ ಮತ್ತೊಮ್ಮೆ ಸುದ್ದಿಗೆ ಬಂದಿರುವುದು ಹಲವರ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಅವರು ಹೇಳಿದ್ದೇನು? ಇರಾನ್‌ನ ಯಾವ ಪರಿಸ್ಥಿತಿ ಬಗ್ಗೆ ತಿಳಿಸಿದ್ದರು. ಯಾವ ದಿನಾಂಕದಂದು ಈ ಪೋಸ್ಟ್ ಮಾಡಲಾಗಿತ್ತು? ಎಂಬುದರ ವಿವರ ಹೀಗಿದೆ ಗಮನಿಸಿ.
2024ರಲ್ಲಿ ನುಡಿದ ಭವಿಷ್ಯವಾಣಿ
ಮುಂದಿನ ಎರಡು ವರ್ಷಗಳಲ್ಲಿ ಇರಾನ್‌ನ ಆರ್ಥಿಕತೆಯು ಛಿದ್ರವಾಗಲಿದೆ. ಕೇತುವು 2ನೇ ಮನೆಯಲ್ಲಿ ಜನ್ಮಜಾತ ರಾಹು ಮತ್ತು ಶನಿಯನ್ನು ದಾಟುವುದರಿಂದ, ಯುದ್ಧ ಸಂಭವಿಸುವ ಪರಿಸ್ಥಿತಿ. ಇದರಿಂದ ಅವರು ಹೊರಗೆ ಬರಬಹುದು. 2027ರ ನಂತರ ಇರಾನ್ ಕೇಜ್ರಿವಾಲ್‌ನಂತೆ ಮತ್ತೆ ಬಲವನ್ನು ಪಡೆಯಲಿದೆ. ಅದು ಇತರ ಇಸ್ಲಾಮಿಕ್ ರಾಷ್ಟ್ರಗಳು ಇರಾನ್ ಅನ್ನು ಸಾಮೂಹಿಕವಾಗಿ ಬೆಂಬಲಿಸಲು ಪ್ರಾರಂಭಿಸಿದಾಗ. ಇರಾನ್ ಕುರಿತು ನನ್ನ ಹೊಸ ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದೇನೆ ನೋಡಿ ಎಂದು ಬರೆದುಕೊಂಡಿದ್ದಾರೆ,(ಏಜೆನ್ಸೀಸ್).