ಪ್ರಧಾನಿ ತಾರಿಕ್ ರೆಹಮಾನ್ ಮತ್ತು ರಾಯಭಾರಿ ದಿನೇಶ್ ತ್ರಿವೇದಿ  
ವಿದೇಶ

ತಾರಿಕ್ ರೆಹಮಾನ್ ಅವರ ಭಾರತ ಭೇಟಿ ಸ್ಮರಣೀಯವಾಗಿರಬೇಕೆಂದು ಪ್ರಧಾನಿ ಮೋದಿ ಬಯಸಿದ್ದಾರೆ: ಬಾಂಗ್ಲಾದ ಭಾರತೀಯ ರಾಯಭಾರಿ | High Commissioner

ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸಬೇಕೆಂಬ ಬೇಡಿಕೆ ಬಗ್ಗೆ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆಗೆ ಬಿಕ್ಕಟ್ಟು ಉಂಟಾಗಿರುವ ಮಧ್ಯೆ, ಪ್ರಧಾನಿ ತಾರಿಕ್ ರೆಹಮಾನ್ ಅವರ ಭಾರತ ಭೇಟಿ ಸ್ಮರಣೀಯವಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ ಎಂದು ಭಾರತೀಯ ಹೈಕಮಿಷನರ್(High Commissioner) ದಿನೇಶ್ ತ್ರಿವೇದಿ ಹೇಳಿದ್ದಾರೆ.
ಮಂಗಳವಾರ(ಆ. 18) ಭಾರತೀಯ ಹೈಕಮಿಷನ್ ಪ್ರಮುಖ ಬಾಂಗ್ಲಾದೇಶದ ವ್ಯಾಪಾರ ಮುಖಂಡರು ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟದ(ಸಿಐಐ) ಭೇಟಿ ನಿಯೋಗಕ್ಕಾಗಿ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಮಾತನಾಡಿರುವ ದಿನೇಶ್ ತ್ರಿವೇದಿ, ಉಭಯ ನಾಯಕರ ನಡುವಿನ ನಿಕಟ ಸಂಬಂಧವು ಎರಡೂ ದೇಶಗಳ ಜನರಿಗೆ ಮತ್ತು ವ್ಯವಹಾರಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದಿದ್ದಾರೆ.
ಪ್ರಧಾನಿ ಮೋದಿ ಅವರು ಒಂದು ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಉಭಯ ನಾಯಕರು ಭೇಟಿಯಾಗುವ ಅಗತ್ಯವಿದೆ ಎಂದು ತಿಳಿಸಿದ್ದು, ಹಮಾನ್ ಅವರ ಭಾರತ ಭೇಟಿಯ ಸಮಯದಲ್ಲಿ ಅವರಿಗೆ ಅರ್ಹವಾದ ಗೌರವಾನ್ವಿತ ಸ್ವಾಗತ ದೊರೆಯುತ್ತದೆ ಎಂದು ಭರವಸೆ ನೀಡಿದ್ದಾರೆ. ಮತ್ತು ಭೇಟಿಯನ್ನು ಸ್ಮರಣೀಯವಾಗಿಸಬೇಕೆಂದು ಬಯಸಿದ್ದಾರೆ ಎಂದು ತಿಳಿಸಿದ್ದಾರೆ.
ಇಬ್ಬರ ನಾಯಕರ ನಡುವಿನ ಭೇಟಿಯ ಲಾಭ ಜನರಿಗೆ ಮತ್ತು ವ್ಯವಹಾರಗಳಿಗೆ ಹೋಗುತ್ತದೆ. ಎರಡೂ ದೇಶಗಳು ಹಿಂದಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಂಡು ಭವಿಷ್ಯವನ್ನು ನೋಡಬೇಕು. ಹಿಂದಿನದನ್ನು ಮರೆತುಬಿಡಿ ಎಂದು ನಾನು ಹೇಳುತ್ತಿಲ್ಲ, ಆದರೆ ಹಿಂದಿನದನ್ನು ಇಟ್ಟುಕೊಳ್ಳಿ ಮತ್ತು ಹಿಂದಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಿ. ಆದರೆ ಮುಂದುವರಿಯಿರಿ, ನಿಶ್ಚಲರಾಗಬೇಡಿ ಎಂದು ಹೇಳಿದ್ದಾರೆ.
ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗಾಗಿ ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಅವರು ಭಾರತಕ್ಕೆ ಭೇಟಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾಗೆ ಹಸ್ತಾಂತರಿಸಿದ್ರೆ ಮಾತ್ರ ನಮ್ಮ ಪ್ರಧಾನಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಬಾಂಗ್ಲಾ ಹೇಳಿದೆ (ಏಜೆನ್ಸೀಸ್).