ಅಮೆರಿಕಾ: ( Plane Crash ) ವಿಮಾನ ಹಾರಾಟ ಮಾಡುವಾಗ ಪೈಲಟ್ ನಿಯಂತ್ರಿಸಲು ಸಾಧ್ಯವಾಗದೆ ಒಂದು ವಿಮಾನ ಚಲಿಸುವ ಕಾರಿನ ಮೇಲೆ ಬಿದ್ದಿದೆ. ಸೋಮವಾರ ಫ್ಲೋರಿಡಾದ ಬ್ರೆವರ್ಡ್ ಕೌಂಟಿಯಲ್ಲಿ ನಡೆದ ಈ ಘಟನೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದ್ಲಿ ವೈರಲ್ ಆಗುತ್ತಿವೆ.
ಇಂಟರ್‌ಸ್ಟೇಟ್ 95 ರ ಹೈ-ಸ್ಪೀಡ್ ಲೇನ್‌ಗಳಲ್ಲಿ ಕಾರು ಚಲಿಸುತ್ತಿತ್ತು. ಇದ್ದಕ್ಕಿದ್ದಂತೆ, ವಿಮಾನವೊಂದು ಆಕಾಶದಿಂದ ಬಿದ್ದಿತು. ಈ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ವಿಮಾನ ಡಿಕ್ಕಿ ಹೊಡೆದ ಕಾರನ್ನು 57 ವರ್ಷದ ಮಹಿಳೆಯೊಬ್ಬರು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಅಪಘಾತಕ್ಕೀಡಾದ ವಿಮಾನದಲ್ಲಿ 27 ವರ್ಷದ ಪೈಲಟ್ ಹಾರಾಟ ನಡೆಸುತ್ತಿದ್ದರು. ಇವರಿಗೆ ಯಾವುದೇ ಗಾಯಗಳಿಲ್ಲದೆ ಭೀಕರ ಅಪಘಾತದಿಂದ ಪಾರಾಗಿದ್ದಾರೆ.
ತುರ್ತು ಲ್ಯಾಂಡಿಂಗ್‌ಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಆರಂಭಿಕ ತನಿಖೆಗಳು ಎಂಜಿನ್ ವೈಫಲ್ಯ ಅಥವಾ ಯಾಂತ್ರಿಕ ವೈಫಲ್ಯದಿಂದ ಅಪಘಾತ ಸಂಭವಿಸಿರಬಹುದು. ಅವಶೇಷಗಳನ್ನು ಪರಿಶೀಲಿಸಲು ತಜ್ಞರ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ವಿಮಾನ ಅಥವಾ ಕಾರು ಎರಡರಲ್ಲಿ ಯಾವುದಾದರೂ ಒಂದು ಸ್ಫೋಟಗೊಂಡಿದ್ದರೆ, ಅಪಘಾತವು ಹೆಚ್ಚು ಗಂಭೀರವಾಗಿರುತ್ತಿತ್ತು, ಆದರೆ ಅದೃಷ್ಟವಶಾತ್ ಯಾವುದೇ ಭೀಕರತೆ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.