ಭಾರತದ ವಿರುದ್ಧ ಸೋತಿದ್ದಕ್ಕೆ ಬ್ಯಾಟ್‌ನಿಂದ ಟಿವಿ ಚಚ್ಚಿ ಪುಡಿಪುಡಿ ಮಾಡಿದ ಪಾಕಿಸ್ತಾನಿ! 
ವಿದೇಶ

ಭಾರತದ ವಿರುದ್ಧ ಸೋತಿದ್ದಕ್ಕೆ ಬ್ಯಾಟ್‌ನಿಂದ ಟಿವಿ ಚಚ್ಚಿ ಪುಡಿಪುಡಿ ಮಾಡಿದ ಪಾಕಿಸ್ತಾನಿ! | IndVsPak

ಕೊಲೊಂಬೊ:ಮೈದಾನದಲ್ಲಿ ಟೀಮ್ ಇಂಡಿಯಾ ಆಟಗಾರರುಪಾಕಿಸ್ತಾನಕ್ಕೆ ಚಚ್ಚುತ್ತಿದ್ದರೆ, ಅತ್ತ ಪಾಕಿಸ್ತಾನದಲ್ಲಿ ಅಭಿಮಾನಿಯೊಬ್ಬಆಕ್ರೋಶ ತಡೆಯಲಾರದೆ ತನ್ನ ಮನೆಯ ಟಿವಿಯನ್ನೇಚಚ್ಚಿ ಪುಡಿಪುಡಿ ಮಾಡಿದ್ದಾನೆ!

ಹೌದು,ಭಾನುವಾರ ನಡೆದ ಟಿವಿ20 ವಿಶ್ವಕಪ್ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ 61 ರನ್ಗಳ ಹೀನಾಯಸೋಲು ಕಂಡ ಬೆನ್ನಲ್ಲೇ ಪಾಕ್ಅಭಿಮಾನಿಯೊಬ್ಬನ ಹುಚ್ಚಾಟದ ವಿಡಿಯೋ ಈಗ ವೈರಲ್ ಆಗಿದೆ.

ವಕಾರ್ಅಜಂ ಎಂಬ ಪಾಕಿಸ್ತಾನಿ ಅಭಿಮಾನಿತನ್ನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾನೆ. "ಭಾರತ ಮತ್ತೊಮ್ಮೆ ಪಾಕಿಸ್ತಾನವನ್ನುಸೋಲಿಸಿತು, ಹತಾಶೆಯಲ್ಲಿ ನಾನುನನ್ನ ಟಿವಿಯನ್ನು ಒಡೆದು ಹಾಕಿದ್ದೇನೆ" ಎಂದು ಶೀರ್ಷಿಕೆ ನೀಡಿದ್ದಾನೆ.ವಿಡಿಯೋದಲ್ಲಿ ವಕಾರ್ ಕ್ರಿಕೆಟ್ ಬ್ಯಾಟ್ ಹಿಡಿದು ಟಿವಿಯ ಮೇಲೆ ಸವಾರಿ ಮಾಡುವುದುಕಂಡುಬರುತ್ತದೆ. ಅಷ್ಟಕ್ಕೇ ಸುಮ್ಮನಾಗದ ಆತ, ಅರ್ಧಕ್ಕೆ ನಿಲ್ಲಿಸಿಟಿವಿಯನ್ನು ತಿರುಗಿಸಿ ಅದರ ಸ್ಕ್ರೀನ್ ಮೇಲೆಮತ್ತೆ ಮತ್ತೆ ಬ್ಯಾಟ್ನಿಂದ ಹೊಡೆದು ಸಂಭ್ರಮಿಸಿದ್ದಾನೆ!

ಪಾಕ್ಅಭಿಮಾನಿಗಳ ಬೇಸರ

ಕೊಲೊಂಬೊದಮೈದಾನದ ಹೊರಗೆ ಎಎನ್ ಸುದ್ದಿಸಂಸ್ಥೆಯೊಂದಿಗೆಮಾತನಾಡಿದ ಪಾಕಿಸ್ತಾನದ ಇನ್ನೊಬ್ಬ ಅಭಿಮಾನಿ ತನ್ನ ಅಳಲು ತೋಡಿಕೊಂಡಿದ್ದಾನೆ."ಭಾರತದ ವಿರುದ್ಧ ಸೋಲುವುದು ಈಗ ನಮಗೆ ರೂಢಿಯಾಗಿಹೋಗಿದೆ. ಬಾರಿ ಏನಾದರೂಹೋರಾಟ ನೀಡುತ್ತಾರೆ ಎಂಬ ನಿರೀಕ್ಷೆ ಇತ್ತು.ಆದರೆ ನಮಗೆ ಬುಮ್ರಾ ಅವರನ್ನುಎದುರಿಸಲು ಉತ್ತರವೇ ಇಲ್ಲ, ಹಾರ್ದಿಕ್ ಬೌಲಿಂಗ್ ಎದುರಿಸುವ ತಾಕತ್ತೂ ಇಲ್ಲ," ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾನೆ.ಅಲ್ಲದೆ, "ಭಾರತ ಅದ್ಭುತವಾಗಿ ಆಡುತ್ತಿದೆ,ಅದನ್ನು ನಾವು ಒಪ್ಪಿಕೊಳ್ಳಲೇಬೇಕು" ಎಂದು ಭಾರತದಪ್ರಾಬಲ್ಯವನ್ನು ಶ್ಲಾಘಿಸಿದ್ದಾನೆ.

ಇಶಾನ್ಕಿಶನ್ ಮಿಂಚು, ಬೌಲರ್ಗಳ ಅಬ್ಬರ

ಪಂದ್ಯದಲ್ಲಿ ಇಶಾನ್ ಕಿಶನ್ ಅವರ ಆಕರ್ಷಕ ಅರ್ಧಶತಕಮತ್ತು ಬೌಲರ್ಗಳ ಸಂಘಟಿತ ಪ್ರದರ್ಶನದಿಂದಭಾರತ 61 ರನ್ಗಳ ಬೃಹತ್ಜಯ ಸಾಧಿಸಿತ್ತು. ಗೆಲುವಿನೊಂದಿಗೆ ವಿಶ್ವಕಪ್ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನದಮುಖಾಮುಖಿ ದಾಖಲೆ ಈಗ 8-1 ಕ್ಕೆ ಏರಿಕೆಯಾಗಿದೆ.

ಪಾಯಿಂಟ್ಸ್ಟೇಬಲ್ನಲ್ಲಿ ಭಾರತ ಟಾಪ್!

ಗ್ರೂಪ್'' ನಲ್ಲಿ ಸತತ ಮೂರು ಗೆಲುವುಗಳೊಂದಿಗೆಭಾರತ ಅಗ್ರಸ್ಥಾನದಲ್ಲಿದ್ದರೆ, ಎರಡು ಗೆಲುವು ಕಂಡಿರುವಅಮೆರಿಕ (USA) ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಸೂಪರ್-8 ಹಂತಕ್ಕೇರಲು ಈಗ ಇತರ ತಂಡಗಳಫಲಿತಾಂಶದ ಮೇಲೆ ಅವಲಂಬಿತವಾಗಬೇಕಿದೆ,(ಏಜೆನ್ಸೀಸ್‌).