ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್. ಜುನೈದ್ ಸಫ್ದರ್ ಮತ್ತು ಶಾಂಜೆ ಅಲಿ 
ವಿದೇಶ

ಪಾಕ್ ಮಾಜಿ ಪ್ರಧಾನಿ ಮೊಮ್ಮಗನ ಮದುವೆ: ಭಾರತೀಯ ವಿನ್ಯಾಸಕರ ಉಡುಗೆ ತೊಟ್ಟ ಸೊಸೆಯ ವಿರುದ್ಧ ಪಾಕಿಸ್ತಾನಿಗಳು ಗರಂ!Nawaz Sharif

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮೊಮ್ಮಗನ ಮದುವೆ
  • ನವಾಜ್ ಷರೀಫ್ ಮೊಮ್ಮಗ, ಜುನೈದ್ ಸಫ್ದರ್ ಕೈ ಹಿಡಿದ ಶಾಂಜೆ ಅಲಿ
  • ಭಾರತೀಯ ಮೂಲದ ಬಟ್ಟೆಯನ್ನು ಧರಿಸಿದ್ದ ಶಾಂಜೆ ಅಲಿ
ಪಾಕಿಸ್ತಾನ: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ಅವರ ಮೊಮ್ಮಗ ಜುನೈದ್ ಸಫ್ದರ್ ಅವರ ವಿವಾಹ ಸಂಭ್ರಮದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಇದು ಪಾಕಿಸ್ತಾನದ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ವೈರಲ್​ ಆಗುತ್ತಿರುವ ಫೋಟೊಗಳಲ್ಲಿ ಮಧು ಶಾಂಜೆ ಅಲಿ ಮದುವೆಗಾಗಿ ಭಾರತೀಯ ವಸ್ತ್ರವಿನ್ಯಾಸಕಾರಿಂದ ತಯಾರಿಸಿದ ಸೀರೆ ಧರಿಸಿರುವುದು ಈಗ ಪಾಕಿಸ್ತಾನದಲ್ಲಿ ವ್ಯಾಪಕ ಚರ್ಚೆಗೆ ಗುರಿಯಾಗಿದೆ.
ಹಂಚಿಕೆಯಾದ ಛಾಯಾಚಿತ್ರಗಳಲ್ಲಿ ಶಾಂಜೆ ಅಲಿ ನಿಖಾಹ್‌ (ಮದುವೆ) ಗಾಗಿ ತರುಣ್ ತಹಿಲಿಯಾನಿ ವಿನ್ಯಾಸಗೊಳಿಸಿದ ಕೆಂಪು ಸೀರೆಯನ್ನು ಧರಿಸಿದ್ದರು. ವಲಿಮಾ ಎಂದು ಕರೆಯಲ್ಪಡುವ ಮತ್ತೊಂದು ಪ್ರಮುಖ ಸಮಾರಂಭಕ್ಕಾಗಿ ಸಬ್ಯಸಾಚಿ ಮುಖರ್ಜಿ ತಯಾರಿಸಿದ ಐಷಾರಾಮಿ ಉಡುಗೆಯನ್ನು ಆಯ್ಕೆ ಮಾಡಿದ್ದರು.
ಈ ಚಿತ್ರಗಳನ್ನು ಅನೇಕ ಫ್ಯಾಷನ್ ಮತ್ತು ಮದುವೆ ಪ್ರಚಾರಕರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಹೇಗೆ ಭಾರತದ ವಸ್ತ್ರ ಮತ್ತು ವಿನ್ಯಾಸಕಾರರ ಕೌಶಲ್ಯವು ದಕ್ಷಿಣ ಏಷ್ಯಾದಾದ್ಯಂತ ಪ್ರಚಾರ ಪಡೆಯುತ್ತಿದೆ ಎಂದು ಬರೆದುಕೊಂಡಿದ್ದರು.

ಪಾಕಿಸ್ತಾನಿಗಳಿಂದ ತೀಕ್ಣ ಪ್ರತಿಕ್ರಿಯೆ

ಆದಾಗ್ಯೂ, ಈ ಚಿತ್ರಗಳು ಪಾಕಿಸ್ತಾನಿ ಸಾಮಾಜಿಕ ಮಾಧ್ಯಮದ ವಿಭಾಗಗಳಿಂದ ತೀವ್ರ ಟೀಕೆಗೆ ಗುರಿಯಾದವು. ಪಾಕಿಸ್ತಾನಿ ವಿನ್ಯಾಸಕರಿಗೆ ಏಕೆ ಆದ್ಯತೆ ನೀಡಲಾಗಿಲ್ಲ ಎಂದು ಹಲವಾರು ಬಳಕೆದಾರರು ಪ್ರಶ್ನಿಸಿದರು, ಸ್ಥಳೀಯ ವಿನ್ಯಾಸಕರಿಗೆ ಅವಕಾಶ ನೀಡಿದರೆ, ಪಾಕಿಸ್ತಾನದ ಸಂಸೃತಿ ಪ್ರತಿಧ್ವನಿಸುತ್ತಿತ್ತು ಎಂದು ಹೇಳಿದ್ದಾರೆ.
ಕೆಲವು ಕಾಮೆಂಟ್‌ಗಳು ವಸ್ತ್ರ ವಿನ್ಯಾಸಕ್ಕಾಗಿ ಯಾವ ದೇಶವನ್ನಾದರೂ ಆಯ್ಕೆ ಮಾಡಬಹುದಿತ್ತು, ಶತ್ರು ದೇಶವಾದ ಭಾರತದ ಆಯ್ಕೆ ಏಕೆ? ಎಂದು ಪ್ರಶ್ನಿಸಿದ್ದಾರೆ. ಫ್ಯಾಷನ್ ಚರ್ಚೆಯ ಜೊತೆಗೆ, ಆನ್‌ಲೈನ್‌ನಲ್ಲಿ ಮತ್ತೊಂದು ಟೀಕೆ ಹೊರಹೊಮ್ಮಿತು, ಕೆಲವರು ಅದ್ದೂರಿ ಮದುವೆಗಾಗಿ ತೆರಿಗೆದಾರರ ಹಣವನ್ನು ಬಲಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ,(ಏಜನ್ಸೀಸ್).