ಪಾಕ್ ಪ್ರಧಾನಿ ಶೆಹಬಾಜ್ ಷರೀಪ್ 
ವಿದೇಶ

ಇರಾನ್ ವಿರುದ್ಧದ ಯುದ್ಧ ಮುಂದೂಡುವಂತೆ ಟ್ರಂಪ್​ಗೆ ಪಾಕ್​ ಪ್ರಧಾನಿ ಮನವಿ; ಎಕ್ಸ್​ ಪೋಸ್ಟ್​ ಬರಹ ಸ್ವತಃ ಪಾಕ್ ಪ್ರಧಾನಿ ಬರೆದಿದ್ದಲ್ಲ? | Pak PM

ಇಸ್ಲಾಮಾಬಾದ್​: ಇರಾನ್-ಅಮೆರಿಕ ನಡುವಿನ ಕದನ ವಿರಾಮದಲ್ಲಿ ಮಧ್ಯಸ್ಥಿಕೆ ವಹಿಸಿ, ಎರಡು ವಾರಗಳ ಕಾಲ ಸಂಘರ್ಷವನ್ನು ಮುಂದೂಡುವಲ್ಲಿ ಯಶಸ್ವಿಯಾಗಿರುವ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್(Pak PM Shehbaz Sharif) ಅವರ ಎಕ್ಸ್ ಪೋಸ್ಟ್​ನ ಬರಹವೊಂದು ಬೇರೆಯವರಿಂದ ಬರೆಯಲ್ಪಟ್ಟಿದೆಯೇ ಎಂಬುದು ಚರ್ಚೆಯನ್ನು ಹುಟ್ಟು ಹಾಕಿದ್ದು, ನಗೆಪಾಟಲಿಗೀಡಾಗುವಂತೆ ಮಾಡಿದೆ.
ಮಂಗಳವಾರ ಇಡೀ ರಾತ್ರಿ ಇರಾನ್ ನಾಗರಿಕತೆ ಸರ್ವನಾಶವಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ, ಸಂಘರ್ಷವನ್ನು ಮುಂದೂಡುವಂತೆ ಶೆಹಬಾಜ್ ಷರೀಪ್ ವಿನಂತಿಸಿರುವ ಬರಹ ಎಲ್ಲರಿಂದ ಹೆಚ್ಚುವರಿ ಪರಿಶೀಲನೆ ಒಳಗಾಗಿದೆ. ಮತ್ತು ಸಾಮಾಜಿಕ ಜಾಲತಾಣದ ಪರಿಣಿತರು, ಇದು ಬೇರೆಯವರಿಂದ ಬರೆಯಲ್ಪಟ್ಟಿದೆ ಎಂದು ಎತ್ತಿ ತೋರಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರಿಗೆ ಶೆಹಬಾಜ್ ಷರೀಫ್ ಮನವಿ ಮಾಡಿರುವ ಎಡಿಟೆಡ್ ಎಕ್ಸ್​​ ಪೋಸ್ಟ್​ನಲ್ಲಿ ಆರಂಭದಲ್ಲಿ, ಕರಡು - ಪಾಕಿಸ್ತಾನದ ಪ್ರಧಾನಿಯ ಎಕ್ಸ್​ ಸಂದೇಶ ಎಂಬ ಒಂದು ಲೈನ್ ಬರಹ ಮೇಲ್ಭಾಗದಲ್ಲಿದೆ.
ಬಳಿಕ ಸಂದೇಶದಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವನ್ನು ಶಾಂತಿಯುತವಾಗಿ ಇತ್ಯರ್ಥಪಡಿಸುವ ರಾಜತಾಂತ್ರಿಕ ಪ್ರಯತ್ನಗಳು ಸ್ಥಿರವಾಗಿ ಮಾತುಕತೆ ನಡೆಯುತ್ತಿದ್ದು, ರಾಜತಾಂತ್ರಿಕತೆಯ ಹಾದಿ ಮುಂದುವರೆಸಲು ಅಧ್ಯಕ್ಷ ಟ್ರಂಪ್ ತಮ್ಮ ಗಡುವನ್ನು ಎರಡು ವಾರಗಳವರೆಗೆ ವಿಸ್ತರಿಸಬೇಕೆಂದು ನಾನು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ ಎಂಬ ಮನವಿ ಸಂದೇಶವಿದೆ. ಮತ್ತು ಕದನ ವಿರಾಮದ ಪ್ರಸ್ತಾಪವಿದೆ.
ಆದರೆ ಪೋಸ್ಟ್​ನ ಆರಂಭದ ಬರಹದ ಬಗ್ಗೆ ಡ್ರಾಪ್ ಸೈಟ್ ಸಬ್‌ಸ್ಟ್ಯಾಕ್‌ನ ಸಂಸ್ಥಾಪಕ ರಯಾನ್ ಗ್ರಿಮ್, ಈ ಸಂದೇಶವನ್ನು ಪ್ರಧಾನಿ ಷರೀಫ್ ಬರೆದಿಲ್ಲ ಎಂದು ಹೇಳಿದ್ದು, ಅವರ ಸಿಬ್ಬಂದಿ ಅವರನ್ನು ಪಾಕಿಸ್ತಾನದ ಪ್ರಧಾನಿ ಎಂದು ಉಲ್ಲೇಖಿಸುವುದಿಲ್ಲ. ಮತ್ತು ಆ ಪೋಸ್ಟ್ ಅನ್ನು ಯುಎಸ್ ಅಥವಾ ಇಸ್ರೇಲ್ ಬರೆದಿರಬಹುದು ತಿಳಿಸಿದ್ದಾರೆ (ಏಜೆನ್ಸೀಸ್).