- ಕಾಲು ಜಾರಿ ಬಿದ್ದ ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ದಾರ್
- ಬಹಿರಂಗ ಸಮಾರಂಭವೊಂದರಲ್ಲಿ ಮುಜುಗರಕ್ಕೀಡಾಡ ಪಾಕ್ ಉಪ ಪ್ರಧಾನಿ
- ಕೂದಲೆಳೆ ಅಂತರದಲ್ಲಿ ಗಂಭೀರ ಗಾಯದಿಂದ ಪಾರು
ಇಸ್ಲಾಮಾಬಾದ್: ಸಾರ್ವಜನಿಕ ಸಭೆಯೊಂದರಲ್ಲಿ ಗಣ್ಯರನ್ನು ಸ್ವಾಗತಿಸುವ ಸಂದರ್ಭದಲ್ಲಿ ಪಾಕಿಸ್ತಾನದ ಉಪಪ್ರಧಾನ ಮಂತ್ರಿ ಇಶಾಕ್ ದಾರ್(Pakistan Deputy PM Ishaq Dar) ಅವರು ಮುಜುಗರದ ಸನ್ನಿವೇಶವೊಂದನ್ನು ಎದುರಿಸಿದ್ದಾರೆ. ಗಣ್ಯರನ್ನು ಸ್ವಾಗತಿಸುವ ಧಾವಂತದಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆದುಕೊಂಡು ಹೋಗುವಾಗ ಕಾಲು ಜಾರಿ ಬಿದ್ದಿರುವ ದೃಶ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ
ಮಧ್ಯಪ್ರಾಚ್ಯ ಸಂಘರ್ಷದ ಕಡಿಮೆ ಮಾಡುವ ಮಾತುಕತೆ, ಮಧ್ಯಸ್ಥಿಕೆ ವಹಿಸಿಕೊಳ್ಳುವ ಬಗ್ಗೆ ಪಾಕಿಸ್ತಾನ ಇಸ್ಲಾಮಾಬಾದ್ನಲ್ಲಿ ಭಾನುವಾರ ಸಭೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಈಜಿಪ್ಟ್‌ನ ವಿದೇಶಾಂಗ ಸಚಿವ ಬದ್ರ್ ಅಬ್ದೆಲಟ್ಟಿ ಅವರಿಗೆ ಸ್ವಾಗತ ಕೋರಲು ಹೋದ ಉಪ ಪ್ರಧಾನ ಮಂತ್ರಿ ಇಶಾಕ್ ದಾರ್ ಕಾಲು ಜಾರಿ ಬಿದ್ದಿದ್ದಾರೆ.
ಎಕ್ಸ್ನಲ್ಲಿ ಈ ರೀತಿ ಚರ್ಚೆ
ಕಾಲು ಜಾರಿ ನೆಲಕ್ಕೆ ಬಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ನೆಟ್ಟಿಗರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದು, ಕೆಲವರು ಉಪಪ್ರಧಾನಿಯ ಆರೋಗ್ಯದ ಬಗ್ಗೆ ಕಳಕಳಿ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಈ ಘಟನೆಯನ್ನು ಹಾಸ್ಯ ಮಾಡಿದ್ದಾರೆ.
ಬಿದ್ದಿದ್ದಷ್ಟೇ ಗಂಭೀರ ಗಾಯವಾಗಿಲ್ಲ
ಉಪ ಪ್ರಧಾನ ಮಂತ್ರಿ ಕಾಲು ಜಾರಿ ನೆಲಕ್ಕೆ ಮುಗ್ಗರಿಸಿ ಬೀಳುವುದನ್ನು ಕಂಡು ತಕ್ಷಣ ಭದ್ರತಾ ಸಿಬ್ಬಂದಿ ಅಧಿಕಾರಿಗಳು ತಕ್ಷಣವೇ ಅವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಅದೃಷ್ಟವಶಾತ್ ಅವರಿಗೆ ಯಾವುದೇ ದೊಡ್ಡ ಮಟ್ಟದ ಗಾಯಗಳಾಗಿಲ್ಲ. ಅಧಿಕಾರಿಗಳು ಅವರನ್ನು ಹಿಡಿದು ಎಬ್ಬಿಸಿದ ನಂತರ, ಅವರು ಸಾವರಿಸಿಕೊಂಡು ಕಾರ್ಯಕ್ರಮದತ್ತ ಹೆಜ್ಜೆ ಹಾಕಿದರು. ಅವರಿಗೆ ಯಾವುದೇ ಗಾಯವಾಗಿಲ್ಲ ಆರೋಗ್ಯವಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಸಭೆಯಲ್ಲಿ ಮಾತನಾಡಿದ್ದು ಏನು?
ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷದ ಕಿಡಿ ಆರಿಲ್ಲ. ಉದ್ವಿಗ್ನತೆ ಆರಿಸುವ ನಿಟ್ಟಿನಲ್ಲಿ ಪಾಕಿಸ್ತಾನ, ಈಜಿಪ್ಟ್, ಟರ್ಕಿಯೆ ಮತ್ತು ಸೌದಿ ಅರೇಬಿಯಾ ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸಿದರು. ಮೂರು ರಾಷ್ಟ್ರಗಳ ನಡೆಯುತ್ತಿರುವ ಯುದ್ಧವೂ ಯಾರ ಪರವಾಗಿ ಇಲ್ಲ. ಆದರೆ, ಹಲವರ ಸಾವು- ಆಸ್ತಿ ನಾಶಕ್ಕೆ ಕಾರಣವಾಗುತ್ತಿದೆ. ಈ ಸಂದರ್ಭದಲ್ಲಿ ಮುಸ್ಲಿಂರ ಏಕತೆ ಮುಖ್ಯ ಎಂದು ಇಶಾಕ್ ದಾರ್ ಮಾತನಾಡಿದರು ಎನ್ನಲಾಗಿದೆ, (ಏಜೆನ್ಸೀಸ್).