ಜಾಗತಿಕ ವೇದಿಕೆಯಲ್ಲಿ ಜೋಕರ್ ಆದ ಪಾಕಿಸ್ತಾನ
- ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಮಧ್ಯಪ್ರಾಚ್ಯ ಸಂಘರ್ಷ
- ಪಾಕಿಸ್ತಾನದಲ್ಲಿ ನಡೆದ ಶಾಂತಿ ಸಭೆ ವಿಫಲ
- ಜಾಗತಿಕ ರಾಜಕಾರಣದಲ್ಲಿ ಜೋಕರ್ ಆದ ಪಾಕಿಸ್ತಾನ
ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾಗಿ ಹೆಚ್ಚು ಕಡಿಮೆ 40 ದಿನ ಕಳೆದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 14 ದಿನಗಳ ಕದನ ವಿರಾಮ ಘೋಷಿಸಿದ್ದಾರೆ. ಅದರಂತೆ, ಈ ಸಂಘರ್ಷವನ್ನು ಮಾತುಕತೆ ಮೂಲಕ ಮುಗಿಸುವ ಪ್ರಯತ್ನವನ್ನು ಮಾಡಿ ವಿಫಲವಾಗಿದ್ದಾರೆ.
ಜೋಕರ್ ಆದ ಪಾಕಿಸ್ತಾನ!
ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಸ್ಥಾಪನೆ ಮಾಡಲು ಕೇವಲ ತಮ್ಮಿಂದ ಮಾತ್ರ ಸಾಧ್ಯವೆಂದು ಜಗತ್ತಿನ ಮುಂದೆ ಫೋಸ್ ಕೊಟ್ಟ ಪಾಕಿಸ್ತಾನ ಈಗ ಜಾಗತಿಕ ರಾಜಕಾರಣದಲ್ಲಿ ಜೋಕರ್ (Pakistan Became Joker) ರೀತಿ ಕಾಣಿಸಿಕೊಳ್ಳುತ್ತಿದೆ.
ಶನಿವಾರ (ಏ.11) ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ನಡೆದ 21 ಗಂಟೆಗಳ ಶಾಂತಿ ಮಾತುಕತೆಗಳ ಬಳಿಕವೂ ಅಮೆರಿಕ ಮತ್ತು ಇರಾನ್ ನಡುವೆ ಒಪ್ಪಂದ ಏರ್ಪಡದ ಹಿನ್ನಲೆ ಈ ಮಾತುಕತೆ ಮುರಿದು ಬಿದ್ದಿದೆ.
ಕೇವಲ ಮಾತುಕತೆ ಮುರಿದು ಬಿದ್ದರೆ ಪಾಕಿಸ್ತಾನಕ್ಕೆ ಅಂತಹ ಮುಜುಗರವೇನು ಆಗುತ್ತಿರಲಿಲ್ಲ. ಆದರೆ ನಾವು ಜಾಗತಿಕ ಶಾಂತಿಗಾಗಿ ಈ ಒಪ್ಪಂದವನ್ನು ಮಾಡಿಸುತ್ತಿದ್ದೆವೆ, ಈ ಸಂಘರ್ಷವನ್ನು ನಿಲ್ಲಿಸುವವರು ನಾವೇ ಎಂದು ಕೂಸು ಹುಟ್ಟುವ ಮುನ್ನವೇ ಕೂಲಾವಿ ಹೊಸಿಲಿದ ಕಾರಣ ಈಗ ಪಾಕಿಸ್ತಾನ ಒಂದು ಬ್ರೋಕರ್ ದೇಶವಾಗಲು ನಾಯಕ್ಕಿಲ್ಲ ಎಂದು ಪ್ರಪಂಚದ ಇತರ ದೇಶಗಳು ಮಾತನಾಡಿಕೊಳ್ಳುವಂತಾಗಿದೆ.
ನಮ್ಮ ಪ್ರಯತ್ನ ಇಲ್ಲಿಗೆ ಮುಗಿದಿಲ್ಲ
ಈ ಶಾಂತಿ ಒಪ್ಪಂದ ಮುರಿದು ಬಿದ್ದ ನಂತರ ಪಾಕಿಸ್ತಾನದ ಮಾಧ್ಯಮಗಳಲ್ಲಿ ಇದು ಕೇವಲ ಮೊದಲ ಹಂತದ ಮಾತುಕತೆ, ನಾವು ಶಾಂತಿಯನ್ನು ಖಂಡಿತವಾಗಿ ಸ್ಥಾಪಿಸುತ್ತೆವೆ, ನಮ್ಮ ನಾಯಕರಾದ ಶಹಬಾಜ್ ಶರೀಫ್ ಹಾಗೂ ಆಸೀಮ್ ಮುನೀರ್ ಕಾರ್ಯಪ್ರವರ್ತರಾಗಿದ್ದಾರೆ ಎಂದು ವರದಿ ಮಾಡುತ್ತಿವೆ. ಆದರೆ ಇದು ಜಟ್ಟಿ ಸೋತರು ಮೀಸೆ ಮಣ್ಣಾಗಲಿಲ್ಲ ಎನ್ನುವ ರೀತಿಯ ವಾದವಾಗಿದೆ ಎನ್ನುವುದು ಜಾಗತಿಕ ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.
ಒಪ್ಪಂದ ವಿಫಲತೆಗೆ ಕಾರಣಗಳೇನು?
ಅಮೆರಿಕ ಮತ್ತು ಇರಾನ್ ನಡುವೆ ದಿಢೀರನೆ ಒಪ್ಪಂದವಾಗಲಿದೆ ಎಂದಾಗಲೇ ಇದು ಸಫಲವಾಗಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಏಕೆಂದರೆ ಈ ಮಾತುಕತೆಗೆ ಅಮೆರಿಕ ಮಾತ್ರ ಹಾಜರಾಗಿತ್ತು, ಆದರೆ ಲೆಬನಾನ್ ಮೇಲೆ ದಾಳಿ ಮಾಡುತ್ತಿರುವ ಇಸ್ರೇಲ್ ಈ ಮಾತುಕತೆಯಿಂದ ದೂರವೇ ಉಳಿದಿತ್ತು. ಹೀಗಾಗಿ ಇರಾನಿನ ಷರತ್ತುಗಳಲ್ಲಿ ಒಂದಾದ ಲೆಬನಾನ್ ಮೇಲಿನ ದಾಳಿ ನಿಲ್ಲಿಸಿ ಎನ್ನುವ ಅಂಶ ಅಂಗೀಕಾರವಾಗಲೇ ಇಲ್ಲ.
ಇನ್ನು, ಇರಾನ್ ಪರಮಾಣು ರಾಷ್ಟ್ರವಾಗುವುದನ್ನು ಕೇವಲ ಅಮೆರಿಕ, ಇಸ್ರೇಲ್ ಮಾತ್ರವಲ್ಲ, ಒಂದರ್ಥದಲ್ಲಿ ಪಾಕಿಸ್ತಾನವು ಒಪ್ಪುವುದಿಲ್ಲ. ಕಾರಣ ಈಡೀ ಪ್ರಪಂಚದಲ್ಲಿ ಪರಮಾಣು ಶಕ್ತಿ ಹೊಂದಿರುವ ಏಕೈಕ ದೇಶ ಪಾಕಿಸ್ತಾನ ಮಾತ್ರ. ಈಗ ಇರಾನ್ ಸಹ ಪರಮಾಣು ದೇಶವಾದರೆ ಪಾಕಿಸ್ತಾನಕ್ಕೆ ಇರಾನ್ ಖಂಡಿತವಾಗಿ ಪೈಪೋಟಿಯಾಗುತ್ತದೆ.
ಒಪ್ಪಂದ ಸಾಧ್ಯವಾಗದಿದ್ದರೆ ಇರಾನ್ ಉಡೀಸ್: ಟ್ರಂಪ್!
ಒಂದು ಕಡೆ ಶಾಂತಿ ಮಂತ್ರ ಬೋಧಿಸುತ್ತಿರುವ ಅಮೆರಿಕಾ ಇನ್ನೊಂದು ಕಡೆ ತನ್ನ ನೈಕಾಪಡೆಯನ್ನು ಹೊರ್ಮುಜ್ ಜಲಸಂಧಿಯತ್ತ ರವಾನಿಸುತ್ತಿದೆ ಎಂದು ತಿಳಿದು ಬಂದಿದೆ. ಶಾಂತಿ ಒಪ್ಪಂದದ ಕುರಿತು ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಮಾತುಕತೆ ಮುರಿದು ಬಿದ್ದರೆ ನಮ್ಮ ಸೈನ್ಯ ಸಶಕ್ತವಾಗಿದೆ, ಇರಾನ್ನನ್ನು ಹೇಗೆ ಮಣಿಸಬೇಕೆಂದು ನಮಗೆ ತಿಳಿದಿದೆ ಎಂದು ಬೆದರಿಕೆ ಹಾಕಿದ್ದಾರೆ.
ಮುರಿದು ಬಿದ್ದ ಶಾಂತಿ ಒಪ್ಪಂದ!
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಶನಿವಾರ (ಏ.11) ಪಾಕಿಸ್ತಾನದ ಇಸ್ಲಾಮಾಬಾದ್ಗೆ ಅಮೆರಿಕ ಮತ್ತು ಇರಾನಿನ ಶಾಂತಿ ನಿಯೋಗ ಆಗಮಿಸಿತ್ತು. ಉಭಯ ದೇಶಗಳ ನಡುವೆ ಸುಮಾರು 21 ಗಂಟೆಗಳವರೆಗೆ ಮಾತುಕತೆ ನಡೆದಿದೆ. ಆದರೆ ಇರಾನಿನ ಯಾವುದೇ ಷರತ್ತುಗಳನ್ನು ಒಪ್ಪಿಕೊಳ್ಳಲು ಅಮೆರಿಕ ಸಿದ್ಧವಿರದ ಕಾರಣ ಈ ಮಾತುಕತೆ ವಿಫಲವಾಗಿದೆ ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ, (ಏಜನ್ಸೀಸ್).