ಅಫ್ಘಾನಿಸ್ತಾನದ ಓಮಿಡ್ ಆಸ್ಪತ್ರೆಯ ಮೇಲೆ ಪಾಕಿಸ್ತಾನ ನಡೆಸಿದ್ದ ಏರ್ ಸ್ಟ್ರೈಕ್
- ಅಫ್ಘಾನಿಸ್ತಾನದ ಓಮಿಡ್ ಆಸ್ಪತ್ರೆಯ ಮೇಲೆ ಪಾಕಿಸ್ತಾನ ನಡೆಸಿದ್ದ ಏರ್ ಸ್ಟ್ರೈಕ್
- ಈ ದಾಳಿಯಲ್ಲಿ 400ಕ್ಕೂ ಹೆಚ್ಚು ನಾಗರಿಕರು ಬಲಿಯಾಗಿದ್ದು 250 ಜನ ಗಾಯಗೊಂಡಿದ್ದರು
- ಈ ದಾಳಿಯ ಆರೋಪವನ್ನು ತಳ್ಳಿಹಾಕಿದ್ದ ಪಾಕಿಸ್ತಾನ
- ಸ್ಯಾಟಲೈಟ್ ಫೋಟೊಗಳ ಬಿಡುಗಡೆ ನಂತರ ಸತ್ಯಾಂಶ ಬಯಲು
ಕಾಬೂಲ್: ಒಂದೆಡೆ ಮಧ್ಯಪ್ರಾಚ್ಯದಲ್ಲಿ ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ದಾಳಿ-ಪ್ರತಿದಾಳಿಯಲ್ಲಿ ತೊಡಗಿದ್ದರೆ, ಇನ್ನೊಂದೆಡೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವಿನ ಸಂಘರ್ಷ ಸಹ ತಾರಕಕ್ಕೇರುತ್ತಿದೆ.
ಫೆಬ್ರುವರಿ 20 ಮತ್ತು ಫೆಬ್ರುವರಿ 21 ರಂದು ಪಾಕಿಸ್ತಾನ (Pakistan Airstrike on Afghanistan) ಅಫ್ಘಾನಿಸ್ತಾನದ ಓಮಿಡ್ ಆಸ್ಪತ್ರೆ ಮೇಲೆ ನಡೆಸಿದ್ದ ಮಿಸೈಲ್ ದಾಳಿಯ ಸ್ಯಾಟಲೈಟ್ ಫೋಟೊಗಳು ಲಭಿಸಿರುವ ಕುರಿತು ವರದಿಯಾಗಿದೆ.
400 ಜನ ಸಾವು;250 ಜನ ಗಾಯಗೊಂಡಿದ್ದರು
ಫೆಬ್ರುವರಿ 20 ರಂದು ಪಾಕಿಸ್ತಾನ ನಡೆಸಿದ್ದ ಏರ್ಸ್ಟ್ರೈಕ್ಗೆ ತುತ್ತಾದ ಓಮಿಡ್ ಆಸ್ಪತ್ರೆಯಲ್ಲಿ ಸುಮಾರು 400 ಜನ ಮೃತಪಟ್ಟಿರುವುದಾಗಿ ಹಾಗೂ 250 ಜನ ತೀವ್ರವಾಗಿ ಗಾಯಗೊಂಡಿದ್ದಾರೆಂದು ತಾಲಿಬಾನ್ ಸರ್ಕಾರ ತಿಳಿಸಿತ್ತು.
ನಾವು ನಾಗರಿಕರನ್ನು ಗುರಿಯಾಗಿಸಿಲ್ಲ!
ಈ ದಾಳಿಯ ನಂತರ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ, ನಾವು ಕೇವಲ ಮಿಲಿಟರಿ ಪ್ರದೇಶವನ್ನು ಮಾತ್ರ ಗುರಿಯಾಗಿಸಿಕೊಂಡು ಏರ್ಸ್ಟ್ರೈಕ್ ನಡೆಸಿದ್ದೇವೆ. ನಾವು ಯಾವುದೇ ನಾಗರಿಕ ಪ್ರದೇಶದ ಮೇಲೆ ದಾಳಿ ಮಾಡಿಲ್ಲ ಎಂದು ಪಾಕಿಸ್ತಾನ ಹೇಳಿತ್ತು.
ಈ ಆಸ್ಪತ್ರೆ ರಿಹ್ಯಾಬಿಟೇಶ್ ಸೆಂಟರ್ ಆಗಿತ್ತು
ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿರುವಂತೆ ಈ ಓಮಿಡ್ ಆಸ್ಪತ್ರೆ ಒಂದು ರಿಹ್ಯಾಬಿಟೇಶ್ ಸೆಂಟರ್ ಆಗಿದ್ದು, ಮಾದಕ ವಸ್ತಗಳ ವ್ಯಸನಕ್ಕೆ ತುತ್ತಾಗಿರುವವರನ್ನು ಇಲ್ಲಿ ಇರಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. 2021 ರಲ್ಲಿ ಅಮೆರಿಕದ ಸೈನ್ಯ ಅಫ್ಘಾನಿಸ್ತಾನವನ್ನು ತೊರೆದುಹೋದ ನಂತರ ಈ ಪ್ರದೇಶ ತಾಲಿಬಾನಿಗಳ ಹಿಡಿತದಲ್ಲಿದೆ,(ಏಜನ್ಸೀಸ್).