ಭಾರತ ನಮ್ಮ ಮೇಲೆ ದಾಳಿ ಮಾಡಿದರೆ ನಾವು ಸುಮ್ಮನಿರಲ್ಲ: ಆಸೀಮ್ ಮುನೀರ್
- ಆಪರೇಷನ್ ಸಿಂಧೂರ್ ನಡೆದು ಇಂದಿಗೆ ಒಂದು ವರ್ಷ
- ಭಾರತ ನಮ್ಮ ಮೇಲೆ ದಾಳಿ ಮಾಡಿದರೆ ನಾವು ಸುಮ್ಮನಿರಲ್ಲ: ಆಸೀಮ್ ಮುನೀರ್
- ಭಾರತಕ್ಕೆ ಬೆದರಿಕೆ ಹಾಕಿದ ಪಾಕ್ ಸೇನಾ ಮುಖ್ಯಸ್ಥ
ಇಸ್ಲಾಮಾಬಾದ್: ಭಾರತ, ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ವನ್ನು ನಡೆಸಿ ಶತ್ರು ದೇಶದಲ್ಲಿದ್ದ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿ ಇಲ್ಲಿದೆ ಒಂದು ವರ್ಷ ಕಳೆದಿದೆ.
ಈ ಕುರಿತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸೀಮ್ ಮುನೀರ್ (Asim Munir Threatens India), ಭಾರತಕ್ಕೆ ಮತ್ತೊಮ್ಮೆ ಬೆದರಿಕೆ ಹಾಕಿದ್ದು, ಅವರು ನಡೆಸಿದ ಕಾರ್ಯಾಚರಣೆಗೆ ತಕ್ಕ ಪ್ರತ್ಯುತ್ತರವನ್ನು ನಾವು ನೀಡಲಿದ್ದೆವೆಂದು ಹೇಳಿದ್ದಾರೆ.
ನಾವು ತಿರುಗಿ ಬಿದ್ದರೆ, ಹುಷಾರ್!
ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ರಾವಲ್ಪಿಂಡಿಯಲ್ಲಿ ನಡೆದ ಮಿಲಿಟರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಸೀಮ್ ಮುನೀರ್, ನಮ್ಮ ಶತ್ರು ದೇಶದವರು ನಮ್ಮ ಮೇಲೆ ಮತ್ತೆ ದಾಳಿ ಮಾಡುವ ಮೊದಲು ಸಾವಿರ ಸಹ ಯೋಚಿಸಬೇಕು. ಇನ್ನೊಮ್ಮೆ ನಮ್ಮ ಮೇಲೆ ದಾಳಿ ನಡೆದರೆ ಅದು ಯುದ್ಧಕ್ಕೆ ದಾರಿ ಮಾಡಿಕೊಳ್ಳುತ್ತದೆ ಹಾಗೂ ಇದು ಅವರಿಗೆ ತುಂಬಾ ನೋವನ್ನು ಹಾಗೂ ಅತಿ ಭಯಂಕರವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾವು ಹೆದರಿಲ್ಲ; ಹೆದರಿಸಿದ್ದೇವೆ
ಕಳೆದ ವರ್ಷ ಮೇ 6 ರಿಂದ 10 ರ ವರೆಗೆ ನಮ್ಮ ಮೇಲೆ ದಾಳಿ ನಡೆಯಿತು. ಆದರೆ ನಾವು ಅವರನ್ನು ಯಶಸ್ವಿಯಾಗಿ ಎದುರಿಸಿದ್ದೆವೆ. ನಾವು ನಮ್ಮ ದೇಶದ ಸಾರ್ವಭೌಮತ್ವವನ್ನು ಕಳೆದುಕೊಳ್ಳಲು ಸಿದ್ಧರಿಲ್ಲ. ನಮ್ಮ ಮೇಲೆ ಅಲ್ಲಾನ ಕೃಪೆಯಿದ್ದರಿಂದ ನಾವು ಈ ಕದನದಲ್ಲಿ ವಿಜಯಶಾಲಿಯಾಗಿದ್ದೆವೆಂದು ಪಾಕ್ ಸೇನಾ ಮುಖ್ಯಸ್ಥ ಹೇಳಿದ್ದಾರೆ.
ಆಪರೇಷನ್ ಸಿಂಧೂರ್!
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಹಿಂದೂಗಳನ್ನು ಗುರಿಯಾಗಿಸಿ ಸುಮಾರು 10 ಜನರನ್ನು ಕೊಂದಿದ್ದರು. ಇದಕ್ಕೆ ಪ್ರತಿಕಾರವೆಂಬಂತೆ ಭಾರತ ಸರ್ಕಾರವು ಪಾಕಿಸ್ತಾನದಲ್ಲಿದ್ದ ಭಯೋತ್ಪಾದಕ ನೆಲೆಗಳ ಮೇಲೆ ಏರ್ಸ್ಟ್ರೈಕ್ ಮಾಡಿತ್ತು.
ಈ ಮಿಲಿಟರಿ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಎಂದು ಹೆಸರಿಡಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಸುಮಾರು 7-8 ಉಗ್ರರ ನೆಲೆಗಳನ್ನು ನಾಶ ಪಡಿಸಲಾಗಿದ್ದು, ಸುಮಾರು 100-150 ಜನ ಭಯೋತ್ಪಾದಕರು ಸಾವನ್ನಪ್ಪಿರುವುದಾಗಿ ಹೇಳಲಾಗಿತ್ತು,(ಏಜನ್ಸೀಸ್).